ರಾಜ್ಯ ಮಟ್ಟದ ಫೋಟೋಗ್ರಫಿ ಸ್ಪರ್ಧೆ ಗೆ ಅರ್ಜಿ ಆಹ್ವಾನ! ಬರೋಬ್ಬರಿ ₹35,000/- ರೂ ಬಹುಮಾನ !

Categories: ,

ಕರ್ನಾಟಕ ಮಾಧ್ಯಮ ಅಕಾಡೆಮಿಯು ಆಯೋಜಿಸುವ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ – 2025

ನಮ್ಮ ದಿನನಿತ್ಯದ ಜೀವನದಲ್ಲಿ ಛಾಯಾಗ್ರಹಣ (Photography) ವಿಶೇಷ ಮಹತ್ವ ಹೊಂದಿದ್ದು, ನಿಜವಾದ ಘಟನೆಗಳ ಪ್ರತಿಬಿಂಬವನ್ನು ಆಧುನಿಕ ತಂತ್ರಜ್ಞಾನ ಮತ್ತು ಕಲೆಗಳ ಸಂಯೋಜನೆಯಲ್ಲಿ ಹಿಡಿದಿಡುವ ಶಕ್ತಿಯನ್ನು ಹೊಂದಿದೆ. ವಿಶೇಷವಾಗಿ ಸುದ್ದಿ ಛಾಯಾಗ್ರಹಣ (Photojournalism) ಪ್ರಪಂಚದಲ್ಲಿ ನಡೆಯುವ ಘಟ್ಟಗಳನ್ನು ದೃಶ್ಯಮಾಧ್ಯಮದ ಮೂಲಕ ನೈಜತೆಗೆ ಹೆಚ್ಚಿನ ಒತ್ತು ನೀಡಿ ಪ್ರಸಾರ ಮಾಡುವ ಮಹತ್ವದ ಕ್ಷೇತ್ರವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ


ಈ ದೃಷ್ಟಿಯಿಂದ, ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ (Karnataka Media Academy) ಈ ವರ್ಷದಿಂದ ಮೊದಲ ಬಾರಿಗೆ ಕರ್ನಾಟಕದ ಸುದ್ದಿ ಛಾಯಾಗ್ರಹಕರಿಗಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ (Photography Contest) ಮತ್ತು ಛಾಯಾಗ್ರಹಣ ಪ್ರದರ್ಶನವನ್ನು ಆಯೋಜಿಸುತ್ತಿದೆ. ಈ ಸ್ಪರ್ಧೆಯ ಪ್ರಮುಖ ಉದ್ದೇಶಗಳು ಸುದ್ದಿ ಛಾಯಾಗ್ರಹಣ ಕ್ಷೇತ್ರದ ಪ್ರತಿಭೆಗಳಿಗೆ ಅವಕಾಶ ಒದಗಿಸುವುದು, ಉತ್ತಮ ಛಾಯಾಗ್ರಹಣಗಳನ್ನು ಗುರುತಿಸಿ ಪುರಸ್ಕರಿಸುವುದು ಹಾಗೂ ಸಾರ್ವಜನಿಕರಿಗೆ ಉತ್ತಮ ಛಾಯಾಚಿತ್ರಗಳ ಮಹತ್ವವನ್ನು ತಲುಪಿಸುವುದಾಗಿದೆ. ಈ ಸ್ಪರ್ಧೆಯನ್ನು ಹೇಗೆ ನಡೆಸಲಾಗುತ್ತದೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸ್ಪರ್ಧೆಯಲ್ಲಿ ನೀಡಲಾಗುವ ಬಹುಮಾನಗಳ ವಿವರಗಳು ಹೀಗಿದೆ :

ಈ ಸ್ಪರ್ಧೆಯಲ್ಲಿ ವಿಜೇತರಾಗುವ ಛಾಯಾಚಿತ್ರಗಳಿಗೆ ನೀಡಲಾಗುವ ಬಹುಮಾನಗಳ (Prizes) ವಿವರ ಈ ರೀತಿಯಾಗಿದೆ:

ಪ್ರಥಮ ಬಹುಮಾನ – ₹35,000/-
ದ್ವಿತೀಯ ಬಹುಮಾನ – ₹25,000/-
ತೃತೀಯ ಬಹುಮಾನ – ₹15,000/-

ಈ ಸ್ಪರ್ಧೆಗೆ ಆಯ್ಕೆಯಾಗುವ ಅತ್ಯುತ್ತಮ ಛಾಯಾಚಿತ್ರಗಳನ್ನು ಹುಬ್ಬಳ್ಳಿ-ಧಾರವಾಡದಲ್ಲಿ (Hubbli and Dharwad) ಮಾರ್ಚ್ ತಿಂಗಳಲ್ಲಿ ನಡೆಯುವ ಸುದ್ದಿ ಛಾಯಾಗ್ರಹಣ ಕಾರ್ಯಾಗಾರದಲ್ಲಿ ಪ್ರದರ್ಶನ ಮಾಡಲಾಗುವುದು.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಕೆಲವು ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಬೇಕಾಗಿದೆ:

1. ಸ್ಪರ್ಧೆಯಲ್ಲಿ ಭಾಗವಹಿಸಲು ಉಚಿತ ನೋಂದಣಿ (Free Application) ಮಾಡಿಕೊಳ್ಳಬಹುದು. ಅಂದರೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
2. ಜನವರಿ 1, 2024 ರಿಂದ ಜನವರಿ 31, 2025ರ ಅವಧಿಯಲ್ಲಿ ತೆಗೆದ ಛಾಯಾಚಿತ್ರಗಳನ್ನಷ್ಟೇ ಸ್ಪರ್ಧೆಗೆ ಸಲ್ಲಿಸಬಹುದು.
ಪ್ರತಿ ಸ್ಪರ್ಧಿ ಕೇವಲ ಎರಡು ಸುದ್ದಿ ಛಾಯಾಚಿತ್ರಗಳನ್ನು ಮಾತ್ರ ಸಲ್ಲಿಸಬಹುದು.
ಛಾಯಾಚಿತ್ರಗಳನ್ನು ಎಲ್ಲಿ ತೆಗೆದರೂ ಪರಿಗಣಿಸಲಾಗುತ್ತದೆ.
3. ಸ್ಪರ್ಧಿಗಳು ಪತ್ರಿಕೆಯ ಸಂಪಾದಕರ ದೃಢೀಕರಣ ಪತ್ರ ಅಥವಾ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ Accreditation Card ಸಲ್ಲಿಸಬೇಕು.
4. ಛಾಯಾಚಿತ್ರಗಳ ಮೇಲೆ ಹೆಸರು, ಶೀರ್ಷಿಕೆ, ವಾಟರ್‌ಮಾರ್ಕ್ (Water Mark) ಇರಬಾರದು.
JPEG ಫಾರ್ಮಾಟ್ ನಲ್ಲಿ ಮಾತ್ರ ಛಾಯಾಚಿತ್ರವನ್ನು ಸಲ್ಲಿಸಬೇಕು.
5. ಆಯ್ಕೆಯಾದ ಛಾಯಾಚಿತ್ರಗಳನ್ನು 20″x 30″ ಅಳತೆಯಲ್ಲಿ 300 DPI ರೆಸಲ್ಯೂಷನ್‌ನೊಂದಿಗೆ 5MB ಗಾತ್ರಕ್ಕಿಂತ ಹೆಚ್ಚಾಗಿರುವ ಚಿತ್ರಗಳು ಆಗಿರಬೇಕು.
6. ಮೊಬೈಲ್ ಕ್ಯಾಮೆರಾದಲ್ಲಿ ತೆಗೆದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಛಾಯಾಚಿತ್ರಗಳು ಸಂಪೂರ್ಣ ಸಹಜವಾಗಿರಬೇಕು.
7. ಯಾವುದೆ ರೀತಿಯ ಎಡಿಟಿಂಗ್ ಅಥವಾ ಬದಲಾವಣೆ (object removal/addition) ಮಾಡಬಾರದು.

ಅರ್ಜಿ ಸಲ್ಲಿಸುವ ವಿಧಾನ :

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಛಾಯಾಗ್ರಹಕರು mediaacademy ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿಯ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳು ಮತ್ತು ಪಾಸ್‌ಪೋರ್ಟ್ (Passport) ಅಳತೆಯ ಭಾವಚಿತ್ರದೊಂದಿಗೆ

ಈ ಕೆಳಗಿನ ಇಮೇಲ್ ವಿಳಾಸಕ್ಕೆ ಕಳಿಸಬೇಕು:
[email protected]

ಗಮನಿಸಿ (Notice)
ಅರ್ಜಿ ಸಲ್ಲಿಸುವ ಫೆಬ್ರವರಿ 15, 2025, ಕೊನೆಯ ದಿನಾಂಕವಾಗಿದ್ದು, ಸಂಜೆ 5:00 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಫೆಬ್ರವರಿ 15, 2025 ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿ ಡೌನ್‌ಲೋಡ್ ಮಾಡುವುದು ಹೇಗೆ?: (Steps for Appllication Download) :

1. Media Academy ವೆಬ್‌ಸೈಟ್ ಗೆ ಭೇಟಿ ನೀಡಿ
2. DOCUMENTS ವಿಭಾಗದಲ್ಲಿ “Application for Photography Contest” ಕ್ಲಿಕ್ ಮಾಡಿ
3. PDF ಅನ್ನು ಡೌನ್‌ಲೋಡ್ ಮಾಡಿ
4. ಅರ್ಜಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ
5. ನಿಗದಿತ ಇಮೇಲ್ ವಿಳಾಸಕ್ಕೆ ಕಳುಹಿಸಿ

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ (Selection Process) :

ಸ್ಪರ್ಧೆಗೆ ಸಲ್ಲಿಸಲಾದ ಛಾಯಾಚಿತ್ರಗಳನ್ನು ಸುದ್ದಿ ಛಾಯಾಗ್ರಹಣ ಕ್ಷೇತ್ರದಲ್ಲಿ ಪರಿಣಿತರಾದ ಮೂರು ತೀರ್ಪುಗಾರರು ಪರಿಶೀಲನೆ ಮಾಡಿ, ಅತ್ಯುತ್ತಮ ಛಾಯಾಚಿತ್ರಗಳನ್ನು ಆಯ್ಕೆ ಮಾಡಲಿದ್ದಾರೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಕೆಳಗಿನ ನಂಬರ್ ಗಳಿಗೆ ಕರೆ ಮಾಡಬಹುದು :
9448227768, 9449245980

ಈ ಸ್ಪರ್ಧೆಯು ಕರ್ನಾಟಕದ ಪ್ರತಿಷ್ಠಿತ ಸುದ್ದಿ ಛಾಯಾಗ್ರಾಹಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಗುರುತಿಸಿಕೊಳ್ಳಲು ಒಂದು ಅಪೂರ್ವ ಅವಕಾಶ ಒದಗಿಸುತ್ತದೆ. ಛಾಯಾಗ್ರಹಣದ ಮೂಲಕ ಸಂಗತಿಗಳನ್ನು ಪ್ರತಿಬಿಂಬಿಸುವ, ಪ್ರತಿಭಾನ್ವಿತ ಛಾಯಾಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಇದು ಕರ್ನಾಟಕ ಮಾಧ್ಯಮ ಅಕಾಡೆಮಿಯ (Karnataka Media Academy) ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ರಾಜ್ಯದ ಛಾಯಾಗ್ರಹಣ ಕ್ಷೇತ್ರಕ್ಕೆ ಹೊಸ ಹಾದಿಗಳನ್ನು ತೋರಿಸಲು ಸಹಾಯ ಮಾಡಲಿದೆ. ಸುದ್ದಿ ಛಾಯಾಗ್ರಹಕರಿಗೆ ಈ ಅದ್ಭುತ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ!

ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

Comments

Leave a Reply

Your email address will not be published. Required fields are marked *