ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ಲೇಖನದಲ್ಲಿ KEA( ಕರ್ನಾಟಕ ಪರೀಕ್ಷಾ ಪ್ರಾಧಿಕಾರ ) 2023 ರ ನೇಮಕಾತಿಯ ಅಡಿಯಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೇ KEA ವತಿಯಿಂದ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.
– KEA ನೇಮಕಾತಿ(Recruitment) 2023 ರ ಅವಲೋಕನ –
ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಯನ್ನು ನಡೆಸಲಾಗುತ್ತಿದೆ. (ಎ) ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ) (ಬಿ) ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, (ಸಿ) ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, (ಡಿ) ಮೈಸೂರು ಸೇಟ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು ಹಾಗಾಗಿ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ, ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದು.
ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :
ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು: |
ಇಲಾಖೆ ಹೆಸರು | ಕರ್ನಾಟಕ ಪರೀಕ್ಷಾ ಪ್ರಾಧಿಕಾರ |
ಹುದ್ದೆಗಳ ಹೆಸರು | ವಿವಿಧ ಹುದ್ದೆಗಳು |
ವರ್ಷ | 2023 |
ಒಟ್ಟು ಹುದ್ದೆಗಳು | 757 ಪೋಸ್ಟ್ ಗಳು |
ಅಪ್ಲಿಕೇಶನ್ ವಿಧಾನ | ಆನ್ಲೈನ್(online) |
KEA ನೇಮಕಾತಿ 2023 ಖಾಲಿ ಹುದ್ದೆಗಳ ವಿವರ :
ಒಟ್ಟು ಹುದ್ದೆಗಳ ಸಂಖ್ಯೆ : 757
ಉದ್ಯೋಗ ಸ್ಥಳ : ಕರ್ನಾಟಕ
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರಿನ ಖಾಲಿ ಹುದ್ದೆಗಳ ವಿವರ :
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ)-ಗ್ರೂಪ್ ಬಿ – 02
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ) -ಗ್ರೂಪ್ ಬಿ – 01
ಆಪ್ತ ಕಾರ್ಯದರ್ಶಿ ಗ್ರೂಪ್-ಸಿ – 01
ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್-ಸಿ – 02
ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್-ಸಿ- 02
ಸಹಾಯಕರು (ತಾಂತ್ರಿಕ) ಗ್ರೂಪ್ -ಸಿ – 01 ಸಹಾಯಕರು (ತಾಂತ್ರಿಕೇತರ) ಗ್ರೂಪ್ -ಸಿ – 01
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಖಾಲಿ ಹುದ್ದೆಗಳ ವಿವರ :
ಸಹಾಯಕ ವ್ಯವಸ್ಥಾಪಕರು: 10
ಗುಣಮಟ್ಟ ನಿರೀಕ್ಷಕರು: 23
ಹಿರಿಯ ಸಹಾಯಕರು (ಲೆಕ್ಕ): 33
ಹಿರಿಯ ಸಹಾಯಕರು: 57 ಕಿರಿಯ ಸಹಾಯಕರು: 263
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹುದ್ದೆಗಳು :
ಕಲ್ಯಾಣ ಅಧಿಕಾರಿ – 12 ಕ್ಷೇತ್ರ ನಿರೀಕ್ಷಕರು -60
ಪ್ರಥಮ ದರ್ಜೆ ಸಹಾಯಕರು (FDA) – 12
ಆಪ್ತ ಸಹಾಯಕರು – 02 ದ್ವಿತೀಯ ದರ್ಜೆ ಸಹಾಯಕರು (SDA) – 100
ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ನ ಖಾಲಿ ಹುದ್ದೆಗಳು :
ಸಹಾಯಕ ವ್ಯವಸ್ಥಾಪಕರು (ಸೇಲ್ಸ್) – 14
ಸಹಾಯಕ ವ್ಯವಸ್ಥಾಪಕರು (ಆಕೌಂಟ್ಸ್) – 4
ಸಹಾಯಕ ವ್ಯವಸ್ಥಾಪಕರು (ಫಾರ್ಮ್) -1
ಸಹಾಯಕ ವ್ಯವಸ್ಥಾಪಕರು ( ಪರ್ಸನಲ್) -1
ಸಹಾಯಕ ವ್ಯವಸ್ಥಾಪಕರು ( ಟೂರ್ಸ್ ಅಂಡ್ ಟ್ರಾವೆಲ್ಸ್) -1
ಸಹಾಯಕ ವ್ಯವಸ್ಥಾಪಕರು (ಇಡಿಪಿ ) -2
ಸೇಲ್ಸ್ ಮೇಲ್ವಿಚಾರಕರು -19
ಮಾರಾಟ ಪ್ರತಿನಿಧಿ – 6
ಸೇಲ್ಸ್ ಇಂಜಿನಿಯರ್ (ಮೆಕ್ಯಾನಿಕಲ್) – 1
ಸೇಲ್ ಇಂಜಿನಿಯರ್ (ಎಲಿಕಲ್) -1
ಸೇಲ್ ಇಂಜಿನಿಯರ್ (ಸಿವಿಲ್ ) -1
ಸೇಲ್ಸ್ ಇಂಜಿನಿಯರ್’ (ಇ&ಸಿ) -1
ಲೆಕ್ಕ ಗುಮಾಸ್ತರು – 6
ಗುಮಾಸ್ತರು – 14
KEA ನೇಮಕಾತಿ – 2023ಕ್ಕೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ :
ವಿದ್ಯಾಭ್ಯಾಸವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆಯ ಪ್ರಕಾರ ಹೊಂದಿರಬೇಕು.
ವಯೋಮಿತಿ :
ಅಭ್ಯರ್ಥಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆಯ ಪ್ರಕಾರ ವಯೋಮಿತಿಯನ್ನು ಹೊಂದಿರಬೇಕು.
ಸಂಬಳದ ಪ್ಯಾಕೇಜ್ ಎಷ್ಟು?:
ಕಲ್ಯಾಣ ಅಧಿಕಾರಿ : ರೂ.37900-70850/-
ಕ್ಷೇತ್ರ ನಿರೀಕ್ಷಕರು : ರೂ.33450-62600/-
ಮೊದಲ ವಿಭಾಗದ ಸಹಾಯಕ (FDA), ಖಾಸಗಿ ಸಲಹೆಗಾರ : ರೂ.27650-52650/-
ಎರಡನೇ ವಿಭಾಗದ ಸಹಾಯಕ (SDA): ರೂ.21400-42000/-
ಸಹಾಯಕ ವ್ಯವಸ್ಥಾಪಕರು : ರೂ.22800-80100/-
ಗುಣಮಟ್ಟದ ಪರಿವೀಕ್ಷಕರು, ಹಿರಿಯ ಸಹಾಯಕ (ಖಾತೆಗಳು) & ಹಿರಿಯ ಸಹಾಯಕ : ರೂ.14550-26700/-
ಕಿರಿಯ ಸಹಾಯಕ : ರೂ.11600-21000/-
ಜೂನಿಯರ್ ಪ್ರೋಗ್ರಾಮರ್ (ಗುಂಪು-ಬಿ), ಸಹಾಯಕ ಇಂಜಿನಿಯರ್ (ಸಿವಿಲ್) (ಗುಂಪು-ಬಿ) : ರೂ.43100-83900/-
ಸಹಾಯಕ ಗ್ರಂಥಪಾಲಕ (ಗುಂಪು-ಸಿ) : ರೂ.30350-58250/-
ಸಹಾಯಕ (ಗುಂಪು-ಸಿ) : ರೂ.37900-70850/-
ಕಿರಿಯ ಸಹಾಯಕ (ಗುಂಪು-ಸಿ) : ರೂ.21400-42000/-
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) – ಗುಂಪು-ಬಿ & ಸಹಾಯಕ ವ್ಯವಸ್ಥಾಪಕರು (ತಾಂತ್ರಿಕವಲ್ಲದ) – ಗುಂಪು-ಬಿ : ರೂ.52650-97100/-
ಖಾಸಗಿ ಕಾರ್ಯದರ್ಶಿ – ಗುಂಪು-ಸಿ : ರೂ.40900-78200/-
ಹಿರಿಯ ಸಹಾಯಕ (ತಾಂತ್ರಿಕ) – ಗುಂಪು-ಸಿ & ಹಿರಿಯ ಸಹಾಯಕ (ತಾಂತ್ರಿಕೇತರ) – ಗುಂಪು-ಸಿ : ರೂ.33450-62600/-
ಸಹಾಯಕ (ತಾಂತ್ರಿಕ) – ಗುಂಪು-ಸಿ, ಸಹಾಯಕ (ತಾಂತ್ರಿಕವಲ್ಲದ) – ಗುಂಪು-ಸಿ : ರೂ.30350-58250/-
ಮೇಲ್ವಿಚಾರಕ : ರೂ.35150-64250/-
ಪದವೀಧರ ಗುಮಾಸ್ತರು : ರೂ.25200-50150/-
ಗುಮಾಸ್ತರು : ರೂ.21900-43100/-
ಮಾರಾಟ ಪ್ರತಿನಿಧಿ/ಪ್ರೋಗ್ರಾಮರ್ : ರೂ.28950-55350/-
ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿಯನ್ನು ಹೀಗೆ ಸಲ್ಲಿಸಿ :
ಹಂತ 1: ಮೊದಲಿಗೆ ಅಧಿಕೃತ ಜಾಲತಾಣಕ್ಕೆ ತೆರಳಿ, ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ, ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ
ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 23-06-2023 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 22-07-2023 |
ಪ್ರಮುಖ ಲಿಂಕುಗಳು |
ಹೋಮ್ ಪೇಜ್ |
ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.
ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ