ಮಹಿಳಾ ದಿನಾಚರಣೆಗೆ ಕೊಮಾಕಿಯಿಂದ ಭರ್ಜರಿ ಉಡುಗೊರೆ – ಒಂದು ಸ್ಕೂಟರ್ ಖರೀದಿಸಿದರೆ ಮತ್ತೊಂದು ಉಚಿತ!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (Electrical Vehicles) ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿದೆ. ಬೆಲೆ ಏರಿಕೆ, ಇಂಧನ ಸಂಕಷ್ಟ ಮತ್ತು ಪರಿಸರ ಪೂರಕ ತಂತ್ರಜ್ಞಾನಗಳ ಕಡೆಗೆ ಜನರು ಆಸಕ್ತಿಯನ್ನು ತೋರಿಸುತ್ತಿರುವುದರಿಂದ ಇಂದು ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್‌ಗಳಿಗೆ (Electric bike andಭಾರೀ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಇವತ್ತು ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳು ತಾವು ಅಭಿವೃದ್ಧಿಪಡಿಸಿರುವ ಎಲೆಕ್ಟ್ರಿಕ್ ವಾಹನಗಳನ್ನು ತಯಾರು ಮಾಡುತ್ತಿವೆ.
ಇಂತಹ ಸ್ಪರ್ಧಾತ್ಮಕ ವಾತಾವರಣದಲ್ಲಿ, ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕೊಮಾಕಿ ಎಲೆಕ್ಟ್ರಿಕ್ ವೆಹಿಕಲ್ಸ್ (Komaki Electric Vehicles) ತನ್ನ ಹೊಸ Komaki X3 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯು ಆಧುನಿಕ ವಿನ್ಯಾಸ, ಎನರ್ಜಿ ಎಫಿಷಿಯನ್ಸಿ (Energy Efficience) ಮತ್ತು ಪ್ರಯೋಜನಕಾರಿ ವೈಶಿಷ್ಟ್ಯಗಳನ್ನೊಳಗೊಂಡಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಕೊಮಾಕಿ ಕಂಪನಿ ಗ್ರಾಹಕರಿಗೆ ವಿಶೇಷ ಆಫರ್ ನೀಡಿದ್ದು, ಒಂದು Komaki X3 ಸ್ಕೂಟರ್ ಖರೀದಿಸಿದರೆ ಮತ್ತೊಂದು ಉಚಿತವಾಗಿ ದೊರಕಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Komaki X3 – ಎಲಿಗಂಟ್ ವಿನ್ಯಾಸ ಮತ್ತು ತಂತ್ರಜ್ಞಾನ (Technology) ಪ್ರಾಯೋಗಿಕತೆಯನ್ನು ಒಳಗೊಂಡಿದೆ :
Komaki X3 ಮಾದರಿಯು ಮಹಿಳಾ ಸವಾರರನ್ನು ಗಮನದಲ್ಲಿಟ್ಟು ವಿನ್ಯಾಸಗೊಳಿಸಲಾಗಿದೆ. ಕಂಪನಿಯ ಸಹ-ಸಂಸ್ಥಾಪಕ ಕುಂಜನ್ ಮಲ್ಲೋತ್ರಾ ಅವರ ಪ್ರಕಾರ, ಇದು ಮಹಿಳಾ ರೈಡರ್‌ಗಳ (Women riders) ಅನುಕೂಲಕ್ಕೆ ತಕ್ಕಂತೆ ನಿರ್ಮಾಣಗೊಂಡಿದೆ. ಸುಲಭವಾಗಿ ನಿರ್ವಹಿಸಬಹುದಾದ ಮತ್ತು ಶಕ್ತಿಯುತ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು, ಬ್ಯಾಂಡ್‌ನ ನಾವೀನ್ಯತೆ ಮತ್ತು ಮೊಬಿಲಿಟಿ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

X3 ಮಾದರಿಯ ಸ್ಕೂಟರ್ ನಲ್ಲಿರುವ ವೈಶಿಷ್ಟ್ಯಗಳು (Features) :
X3 ಮಾದರಿಯು ಡ್ಯುಯಲ್ LED ಹೆಡ್‌ಲ್ಯಾಂಪ್, ಪೂರ್ಣ LED ಲೈಟಿಂಗ್, ಡಿಜಿಟಲ್ ಡ್ಯಾಶ್‌ಬೋರ್ಡ್, ವೈವಿಧ್ಯಮಯ ರೈಡಿಂಗ್ ಮೋಡ್‌ಗಳು ಹಾಗೂ ರಿವರ್ಸ್ ಅಸಿಸ್ಟ್ ಫೀಚರ್ ಅನ್ನು ಒಳಗೊಂಡಿದೆ.
X3 ಮಾದರಿಯ ಸ್ಕೂಟರ್ ಗ್ರಾಹಕರಿಗೆ ಮೂರು ಬಣ್ಣಗಳಲ್ಲಿ (Colors) ಲಭ್ಯವಿದೆ :
ಇದು ಗಾರ್ನೆಟ್ ರೆಡ್, ಸಿಲ್ವರ್ ಗ್ರೇ ಮತ್ತು ಜೆಟ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಪವರ್‌ಫುಲ್ ಬ್ಯಾಟರಿ ಮತ್ತು ಎಫಿಶಿಯಂಟ್ ಮೋಟರ್ :
Komaki X3 ಲಿಥಿಯಂ-ಐಯಾನ್ ಬ್ಯಾಟರಿಯಿಂದ ದ ಚಲಿಸುತ್ತದೆ ಮತ್ತು ಇದರಲ್ಲಿ 3 kW ಎಲೆಕ್ಟ್ರಿಕ್ ಮೋಟರ್ (Electric motor) ಅಳವಡಿಸಲಾಗಿದೆ. ಇದು ಗಂಟೆಗೆ 55 ಕಿಮೀ ವೇಗದಲ್ಲಿ ಚಲಿಸಬಲ್ಲದು ಮತ್ತು ಪೂರ್ಣ ಚಾರ್ಜ್‌ನಲ್ಲಿ 100 ಕಿಮೀ ರೇಂಜ್ ನೀಡುತ್ತದೆ. ಹೀಗಾಗಿ, ಇದು ದೈನಂದಿನ ಪ್ರಯಾಣದ ಅವಶ್ಯಕತೆಗಳನ್ನು ಪೂರೈಸಲು ಸಮರ್ಥವಾಗಿದೆ.
Komaki X3 ಸ್ಕೂಟರ್ ಆಕರ್ಷಕ ಬೆಲೆ ಮತ್ತು ವಿಶೇಷ ಆಫರ್ ನಲ್ಲಿ ಗ್ರಾಹಕರಿಗೆ ಲಭ್ಯವಿದೆ :
Komaki X3 ₹50,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಲಭ್ಯವಿದೆ, ಮತ್ತು ಈ ಸ್ಕೂಟರ್ SE, X-One, MG ಸರಣಿಗಳನ್ನು ಒಳಗೊಂಡಿದೆ. ಇದನ್ನು ಗಮನದಲ್ಲಿಟ್ಟು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International women’s day) (ಮಾರ್ಚ್ 8) ಅಂಗವಾಗಿ ಕೊಮಾಕಿ ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ. ಈ ಆಫರ್ ಅನ್ವಯ, ₹1 ಲಕ್ಷ ಬೆಲೆಗೆ ಎರಡು Komaki X3 ಸ್ಕೂಟರ್‌ಗಳನ್ನು ಪಡೆಯಬಹುದಾಗಿದೆ.

ಇದು ಲಿಮಿಟೆಡ್ ಪೀರಿಯಡ್ ಆಫರ್ (Limited period offer) ಆಯ್ದ ಅಧಿಕೃತ ಡೀಲರ್‌ಶಿಪ್‌ಗಳು ಹಾಗೂ ಕೆಲವೊಂದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ :
ಇಂಧನ ಉಳಿತಾಯ ಮತ್ತು ಪರಿಸರ ಸಂರಕ್ಷಣೆಯನ್ನು ಉದ್ದೇಶವಾಗಿಟ್ಟುಕೊಂಡು, Komaki X3 ಸ್ಕೂಟರ್ ಸ್ಮಾರ್ಟ್ ಮತ್ತು ಸಸ್ಟೇನಬಲ್ ಮೊಬಿಲಿಟಿ ಪರಿಹಾರ ನೀಡುತ್ತದೆ. ಪೆಟ್ರೋಲ್ ವಾಹನಗಳಿಗಿಂತ (Petrol vehicles) ಕಡಿಮೆ ನಿರ್ವಹಣಾ ವೆಚ್ಚ, ಕಡಿಮೆ ಕಾರ್ಯಾಚರಣಾ ದರ ಹಾಗೂ ಇಂಧನದ ಮೇಲಿನ ಅವಲಂಬನೆಯಿಲ್ಲದ ಸಂಚಾರವೇ ಇದನ್ನು ವಿಶೇಷವಾಗಿಸುತ್ತವೆ.
Komaki X3 ನೂತನ ಸ್ಮಾರ್ಟ್ ಮೊಬಿಲಿಟಿ (Smart mobility) ಯುಗದ ಉದಾಹರಣೆಯಾಗಿದೆ. ಮಹಿಳಾ ದಿನಾಚರಣೆಯ ವಿಶೇಷ ಆಫರ್‌ಗೆ ಹೆಚ್ಚಿನ ಜನರು ಸ್ಪಂದಿಸುವ ನಿರೀಕ್ಷೆಯಿದೆ, ಮತ್ತು ಇದು ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಕ್ರಾಂತಿಗೆ ಮತ್ತೊಂದು ಮಹತ್ವದ ಹೆಜ್ಜೆ ಎಂದು ಕರೆಯಬಹುದು.
ದೈನಂದಿನ ಬಳಕೆದಾರರು ಅದರಲ್ಲೂ ವಿಶೇಷವಾಗಿ ಮಹಿಳಾ ಸವಾರರು (Women rider’s) ಈ ಸ್ಕೂಟರ್ ನ ಹೆಚ್ಚಿನ ಪ್ರಯೋಜನ ಪಡೆಯಬಹುದು :
ಕೊಮಾಕಿಯ ಈ ಹೊಸ ಆಫರ್ ಗ್ರಾಹಕರಿಗೆ ಹಿತಕರ ಮತ್ತು ಆಕರ್ಷಕವಾಗಿದೆ. ದೈನಂದಿನ ಬಳಕೆದಾರರು, ವಿಶೇಷವಾಗಿ ಮಹಿಳಾ ಸವಾರರು, ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ. ಸ್ವಚ್ಛ ಮತ್ತು ಎಕಾನಾಮಿಕ್ ಮೊಬಿಲಿಟಿಯನ್ನು (Economic Mobility) ಉತ್ತೇಜಿಸುವ ಉದ್ದೇಶದಿಂದ ಕೊಮಾಕಿಯ ಈ ಆಫರ್ ನೀಡಿರುವುದು ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಹೊಸ ಚಾಪು ಮೂಡಿಸುತ್ತಿದೆ. ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುವುದರಿಂದ, ಆಸಕ್ತ ಗ್ರಾಹಕರು ತ್ವರಿತವಾಗಿ ತಮ್ಮ Komaki X3 ಸ್ಕೂಟರ್ ಖರೀದಿಸಲು ಮುಂದಾಗಬಹುದು!
ಅನುಭವ ಹಂಚಿಕೊಳ್ಳಿ..
ಈ ಮಾಹಿತಿಯನ್ನು ಓದಿ
- ನಮ್ಮ ದೇಶದಲ್ಲೇ 30 ಲಕ್ಷವರೆಗೆ ಸಂಬಳ ಸಿಗುವ ಕೆಲಸಗಳಿವು.! ನಿಮಗೆ ಗೊತ್ತಾ.?
- ಅಂಚೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೇ ನೇರ ನೇಮಕಾತಿ ಅಧಿಸೂಚನೆ ಪ್ರಕಟ
- ಬರೀ 70 ರೂಪಾಯಿ ಕಟ್ಟಿದ್ರೆ ಸಿಗುತ್ತೆ ಬರೋಬ್ಬರಿ 3 ಲಕ್ಷ ರೂಪಾಯಿ, ಇಲ್ಲಿದೆ ಡೀಟೇಲ್ಸ್
ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
Leave a Reply