ಹಕ್ಕಿ ಜ್ವರದ ಆತಂಕ: ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಗೆ ತಜ್ಞರಿಂದ ಸೂಕ್ತ ಮಾರ್ಗಸೂಚಿಗಳು
ಭಾರತದಲ್ಲಿ ಹಕ್ಕಿ ಜ್ವರ (Bird Flu) ಅಥವಾ ಎಚ್5ಎನ್1 ವೈರಸ್ ತೀವ್ರಗತಿಯಲ್ಲಿ ಹರಡುತ್ತಿರುವುದು ಜನರಲ್ಲಿ ಆತಂಕವನ್ನುಂಟುಮಾಡಿದೆ. ಹಕ್ಕಿ ಜ್ವರ ಸಾಮಾನ್ಯವಾಗಿ ಪಕ್ಷಿಗಳಿಂದ ಹರಡುವ ವೈರಲ್ ಸೋಂಕಾಗಿದ್ದು, ಕೆಲವೊಂದು ಸಂದರ್ಭಗಳಲ್ಲಿ ಮನುಷ್ಯರಿಗೂ ಸೋಂಕು ತಲುಪುವ ಸಾಧ್ಯತೆ ಇದೆ. ಕಳೆದ ಕೆಲ ವಾರಗಳಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹಠಾತ್ ಕೋಳಿಗಳ ಸಾವುಗಳು ವರದಿಯಾಗಿವೆ. ಈ ಸಂದರ್ಭದಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ (Chicken meet and egg) ಸೇವನೆ ಸುರಕ್ಷಿತವೇ?” ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಸುರಕ್ಷಿತವಾದರೆ ಹೇಗೆ ಸುರಕ್ಷಿತ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯ ಅಧಿಕಾರಿಗಳು (Health Ministers) ಮತ್ತು ಪಶು ವೈದ್ಯಕೀಯ ತಜ್ಞರು (Veterinary Specialists) ಈ ಸಾವುಗಳಿಗೆ ಹಕ್ಕಿ ಜ್ವರವೇ ಕಾರಣವೆಂದು ದೃಢಪಡಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಾರು ಕೋಳಿಗಳನ್ನು ನಾಶಪಡಿಸಿದ್ದಾರೆ. ಇನ್ನು ಕೆಲವೆಡೆ, ಹಕ್ಕಿ ಜ್ವರದ ಸೋಂಕು ಕೋಳಿಗಳ ಹೊರತಾಗಿ ಬೆಕ್ಕಿನ ಮೇಲೂ ಪರಿಣಾಮ ಬೀರಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಹಲವು ರಾಜ್ಯ ಸರ್ಕಾರಗಳು (state governments) ಹಕ್ಕಿ ಜ್ವರ ನಿಯಂತ್ರಣಕ್ಕೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಕೋಳಿ ಸಾಕಾಣಿಕೆ ಕೇಂದ್ರಗಳು ಮತ್ತು ಕೋಳಿ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರ ಕೈಗೊಂಡಿವೆ.
ಹಕ್ಕಿ ಜ್ವರದ ಸಂದರ್ಭದಲ್ಲಿಯೂ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆ ಸುರಕ್ಷಿತವೇ?:
ತಜ್ಞರ ಪ್ರಕಾರ, ಸರಿಯಾದ ರೀತಿಯಲ್ಲಿ ಬೇಯಿಸಿದರೆ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸುವುದರಲ್ಲಿ ಹೆಚ್ಚಿನ ಅಪಾಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ನೀಡಿರುವ ಮಾರ್ಗಸೂಚಿಗಳ ಪ್ರಕಾರ, ಹಕ್ಕಿ ಜ್ವರ ವೈರಸ್ 70°C-75°C ತಾಪಮಾನಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸಂಪೂರ್ಣ ನಾಶವಾಗುತ್ತದೆ. ಆದ್ದರಿಂದ, ಕೋಳಿ ಮಾಂಸವನ್ನು ಕನಿಷ್ಠ 165°F (ಆಂದರೆ ಸುಮಾರು 75°C) ತಾಪಮಾನದಲ್ಲಿ ಸಂಪೂರ್ಣ ಬೇಯಿಸುವುದು ಅತ್ಯಗತ್ಯ.
ಮೊಟ್ಟೆ ಸೇವನೆ ಹೇಗೆ ಸುರಕ್ಷಿತವಾಗಿರಬಹುದು?:
ಪ್ಯಾಕೇಜಿಂಗ್ ಮತ್ತು ಶೇಖರಣಾ ಪ್ರಕ್ರಿಯೆಗಳು ಸುರಕ್ಷಿತವಾಗಿದ್ದರೆ, ಮೊಟ್ಟೆಗಳನ್ನು ಬಳಸುವುದು ಅಪಾಯಕಾರಿಯಾಗಿಲ್ಲ.
ಮೊಟ್ಟೆಗಳನ್ನು ಸದಾ ವಿಶ್ವಾಸಾರ್ಹ ಸ್ಥಳಗಳಿಂದ (ಆಧುನಿಕ ಮಾರ್ಕೆಟ್ ಅಥವಾ ಬ್ರಾಂಡೆಡ್ ಪ್ಯಾಕ್‌ಗಳು) ಖರೀದಿಸುವುದು ಸೂಕ್ತ.
ಹಚ್ಚಿದ ಮೊಟ್ಟೆ ಅಥವಾ ಕಚ್ಚಾ ಮೊಟ್ಟೆ ಸೇವನೆ ಸೂಕ್ತವಲ್ಲ, ಏಕೆಂದರೆ ಕಡಿಮೆ ತಾಪಮಾನದಲ್ಲಿ ಹಕ್ಕಿ ಜ್ವರ ವೈರಸ್ ನಾಶವಾಗದು.
ಮೊಟ್ಟೆಯ ಹಳದಿ ಹಾಗೂ ಬಿಳಿ ಭಾಗ ಎರಡನ್ನೂ ಕನಿಷ್ಠ 175°F (79°C) ತಾಪಮಾನದಲ್ಲಿ ಬೇಯಿಸಿ ಸೇವಿಸುವುದು ಸೂಕ್ತ.
ಕೋಳಿ ಮಾಂಸ ಸೇವನೆ ಸುರಕ್ಷಿತವಾಗಿರಲು ಏನು ಮಾಡಬೇಕು?:
ಕೋಳಿಯನ್ನು ನಿರ್ವಹಿಸುವಾಗ ಕೈಗಳನ್ನು ಚೆನ್ನಾಗಿ ತೊಳೆಯಬೇಕು.
ಕಚ್ಚಾ ಕೋಳಿಯನ್ನು ಬೇಯಿಸಿದ ಆಹಾರ ವಸ್ತುಗಳಿಂದ ಪ್ರತ್ಯೇಕವಾಗಿ ಇರಿಸಬೇಕು.
ಕೋಳಿ ಮಾಂಸವನ್ನು ಸ್ವಲ್ಪ ಬೇಯಿಸ (Half Boil) ಬಾರದು, ಇದನ್ನು ಸಂಪೂರ್ಣವಾಗಿ ಬೇಯಿಸಿ ಸೇವಿಸಬೇಕು.
ಆಹಾರ ಸಿದ್ಧಪಡಿಸುವ ಪಾತ್ರೆಗಳನ್ನು ಬೇರೆಯಾಗಿಟ್ಟುಕೊಳ್ಳುವುದು ಸೂಕ್ತ.
ಹಕ್ಕಿ ಜ್ವರ ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವುವು?:
ಕೋಳಿ ಮಾರುಕಟ್ಟೆ ಅಥವಾ ಹಕ್ಕಿಗಳ ಸಾಕಾಣಿಕೆ ಪ್ರದೇಶಗಳಿಗೆ ತೆರಳುವುದನ್ನು ತಕ್ಷಣವೇ ತಪ್ಪಿಸುವುದು ಸೂಕ್ತ.
ಸರಿಯಾದ ತಾಪಮಾನದಲ್ಲಿ ಶೇಖರಣೆ ಮತ್ತು ಸ್ವಚ್ಛತೆ (cleaning) ಕಾಪಾಡುವುದು ಮುಖ್ಯ.
ಆರೋಗ್ಯ ಇಲಾಖೆಯ ಸೂಚನೆಗಳ ಪ್ರಕಾರವೇ ಕೋಳಿ ಉತ್ಪನ್ನಗಳನ್ನು ಖರೀದಿಸಿ, ಉಪಯೋಗಿಸಬೇಕು.
ಜ್ವರ, ಶೀತ, ಕಫ, ಗಂಟಲು ನೋವು ಮತ್ತು ಉಸಿರಾಟದ ತೊಂದರೆ ಉಂಟಾದರೆ ತಕ್ಷಣ ವೈದ್ಯಕೀಯ ನೆರವನ್ನು ಪಡೆಯುವುದು ಅಗತ್ಯ.
ಹಕ್ಕಿ ಜ್ವರದ ಭೀತಿ ಹಮ್ಮಿಕೊಂಡಿರುವ ಈ ಸಂದರ್ಭದಲ್ಲಿಯೂ ಸಹ, ಸರಿಯಾದ ತಾಪಮಾನದಲ್ಲಿ ಬೇಯಿಸಿದ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆ ಸುರಕ್ಷಿತವಾಗಿದೆ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು (Precautionary measures) ಕಟ್ಟುನಿಟ್ಟಾಗಿ ಪಾಲಿಸುವುದು ಅನಿವಾರ್ಯ. ಸಾರ್ವಜನಿಕರು ಜಾಗೃತರಾಗಿದ್ದು, ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸಿದರೆ ಹಕ್ಕಿ ಜ್ವರದ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯ.
ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ :
- Maruti Suzuki: ಕಮ್ಮಿ ಬೆಲೆಗೆ ಹೊಸ ಮಾರುತಿ ಸುಜುಕಿ ಕಾರ್, ಮುಗಿಬಿದ್ದ ಗ್ರಾಹಕರು!
- ಹೊಸ ರೂಲ್ಸ್ : ಜಾತಿ, ಧರ್ಮ, ಭಾಷೆ ಬಗ್ಗೆ ದ್ವೇಷದ ಮಾತಾಡಿದ್ರೆ 3 ವರ್ಷ ಜೈಲು ಶಿಕ್ಷೆ.!
- Rain alert : ರಾಜ್ಯದ ಈ ಜಿಲ್ಲೆಗಳಲ್ಲಿ, ಫೆಬ್ರವರಿ 12ರ ಭಾರೀ ಮಳೆ ಮುನ್ಸೂಚನೆ.!
ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Leave a Reply