Gruhalakshmi : 3 ತಿಂಗಳ ಗೃಹಲಕ್ಷ್ಮಿ ಹಣ ಜಮಾ, ಅಪ್ಡೇಟ್ ಇಲ್ಲಿದೆ.!

Categories:

ಗೃಹಲಕ್ಷ್ಮಿ ಯೋಜನೆ(Gruhalakshmi Yojane): ಬಾಕಿಯಿರುವ ಮೂರು ತಿಂಗಳ ಹಣ ಫೆಬ್ರವರಿ(February) ಅಂತ್ಯದೊಳಗೆ ಜಮಾ?

ಕಾಂಗ್ರೆಸ್ ಸರ್ಕಾರದ (Congress Government )ಪ್ರಮುಖ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ, ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವ ಮಹತ್ವದ l. ಮಹಿಳಾ ಸಬಲೀಕರಣ ಮತ್ತು ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಜಾರಿಗೆ ತರಲಾದ ಈ ಯೋಜನೆ, ಅನೇಕ ಕುಟುಂಬಗಳಿಗೆ ಆರ್ಥಿಕ ಸುರಕ್ಷತೆ ಒದಗಿಸಿದೆ. ಪ್ರಾರಂಭದಿಂದಲೂ ಕೆಲ ಅಡೆತಡೆಗಳನ್ನು ಎದುರಿಸಿದ್ದರೂ, ಯೋಜನೆಯ ಹಣವನ್ನು ನಿಯಮಿತವಾಗಿ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆದರೆ, ಕಳೆದ ಮೂರು ತಿಂಗಳುಗಳಿಂದ ಅನೇಕ ಫಲಾನುಭವಿಗಳಿಗೆ ಹಣ ಜಮಾ ಆಗದಿರುವುದು, ಮಹಿಳೆಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮೂರು ತಿಂಗಳ ಹಣ ಪೆಂಡಿಂಗ್ ಇರುವ ಕಾರಣ ಮಹಿಳೆಯರ ಆತಂಕಗೊಂಡಿದ್ದಾರೆ :

ಇತ್ತೀಚೆಗೆ, ಹಲವಾರು ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ(Bank account) ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ, ಸರ್ಕಾರದ ಮೇಲೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ, ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ(state government) ನಿರ್ದಿಷ್ಟ ಸ್ಪಷ್ಟತೆ ಬಂದಿದ್ದು, ಪೆಂಡಿಂಗ್ ಹಣ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.  ಬಾಕಿ ಇರುವ ಗೃಹಲಕ್ಷ್ಮಿ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

15, 16 ಮತ್ತು 17ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ?

ಮಾಹಿತಿಯ ಪ್ರಕಾರ, ರಾಜ್ಯದ ಕೆಲ ಜಿಲ್ಲೆಗಳಲ್ಲಿ 15ನೇ ಕಂತಿನ ಹಣ ಈಗಾಗಲೇ ಜಮಾ ಮಾಡಲಾಗಿದೆ, ಆದರೆ ಇನ್ನೂ ಕೆಲ ಜಿಲ್ಲೆಗಳಲ್ಲಿ ಈ ಹಣ ತಲುಪಿಲ್ಲ. ಸರ್ಕಾರದ ಮೂಲಗಳ ಪ್ರಕಾರ, ಫೆಬ್ರವರಿ 15ರೊಳಗೆ ಹೆಚ್ಚಿನ ಜಿಲ್ಲೆಗಳಲ್ಲಿ 15ನೇ ಕಂತಿನ ಹಣ ಜಮಾ ಆಗಲಿದ್ದು, ಫೆಬ್ರವರಿ 20ರ ಒಳಗಾಗಿ ಎಲ್ಲ ಫಲಾನುಭವಿಗಳಿಗೆ ಪೂರ್ಣವಾಗಿ ಹಣ ಜಮಾ ಮಾಡಲು ಸರ್ಕಾರ ಯೋಜನೆ ರೂಪಿಸಿದೆ.

ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ (Minister Lakshmi Hebbalkar) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಕಾರಣ 16ನೇ ಮತ್ತು 17ನೇ ಕಂತಿನ ಹಣವನ್ನು ಕೂಡ ಹಂತ ಹಂತವಾಗಿ ಬಿಡುಗಡೆ ಮಾಡಲು  ಸರ್ಕಾರ ಕಾರ್ಯಾಚರಣೆಯನ್ನು ತ್ವರಿತಗೊಳಿಸಿದೆ. ಈ ತಿಂಗಳ ಕೊನೆಯಲ್ಲಿ 15 ಮತ್ತು 16ನೇ ಕಂತು ಖಾತೆಗೆ ಜಮಾ ಆಗುವ ನಿರೀಕ್ಷೆ ಇದೆ.

ಹಣ ವಿತರಣೆ ಪ್ರಕ್ರಿಯೆಯಲ್ಲಿ ಬದಲಾವಣೆ:

ಇತ್ತೀಚೆಗೆ, ಯೋಜನೆಯ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುವ ಬದಲು, ತಾಲೂಕು ಪಂಚಾಯತ್ (Taluk Panchayat) ಮುಖಾಂತರ ವಿತರಿಸುವ ಸಾಧ್ಯತೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. ಈ ಬದಲಾವಣೆ ಜಾರಿಗೆ ಬಂದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ(Department of Women and Child Welfare) ಹೊರೆ ಕಡಿಮೆಯಾಗಬಹುದು, ಆದರೆ ಇದು ಕಾರ್ಯರೂಪಕ್ಕೆ ಬಂದಾಗ ಫಲಾನುಭವಿಗಳಿಗೆ ಅನುಕೂಲವಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಭ್ರಷ್ಟಾಚಾರದ ಅನುಮಾನವೂ ವ್ಯಕ್ತವಾಗುತ್ತಿರುವುದರಿಂದ, ಸರ್ಕಾರ ಈ ಬದಲಾವಣೆಯನ್ನು ಎಚ್ಚರಿಕೆಯಿಂದ ಪರಿಗಣಿಸಬೇಕಾಗಿದೆ.

ಮಹಿಳಾ ಸಬಲೀಕರಣಕ್ಕೆ ಹೊಸ ಯೋಜನೆಗಳ ನಿರೀಕ್ಷೆ :

ಇದು ಕೇವಲ ಹಣದ ವಿತರಣೆಯ ವಿಷಯವಲ್ಲ, ಮಹಿಳಾ ಸಬಲೀಕರಣದ ದೊಡ್ಡ ಭಾಗವಾಗಿದೆ. ಕಾಂಗ್ರೆಸ್ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ(budget) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ(Women and Child Welfare Department) ಹೆಚ್ಚಿನ ಅನುದಾನ ಒದಗಿಸುವ ನಿರೀಕ್ಷೆ ಇದೆ. ಗೃಹಲಕ್ಷ್ಮಿ ಯೋಜನೆಯನ್ನು ವಿಸ್ತರಿಸುವ ಸಲುವಾಗಿ ಹೊಸ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಗೃಹಲಕ್ಷ್ಮಿ ಯೋಜನೆಯ(Gruhalakshmi yojane) ಹಣ ಬಿಡುಗಡೆಗೆ ತಡವಾಗಿದ್ದು, ಸರ್ಕಾರದ ನಿರ್ಧಾರಗಳು ಮತ್ತು ಆಡಳಿತಾತ್ಮಕ ಬದಲಾವಣೆಗಳ ಪರಿಣಾಮವಾಗಿ ತಡವಾಗಿದೆ ಎನ್ನಲಾಗುತ್ತಿದೆ. ಈ ತಿಂಗಳ ಕೊನೆಯೊಳಗೆ 15 ಮತ್ತು 16ನೇ ಕಂತಿನ ಹಣ ಜಮಾ ಆಗಲಿದೆ ಎಂಬ ನಂಬಿಕೆ ಇದ್ದರೂ, ಸರ್ಕಾರದ ಹೊಸ ಹಣ ವಿತರಣೆ ಕ್ರಮಗಳು ಫಲಾನುಭವಿಗಳಿಗೆ ಅನುಕೂಲವಾಗುತ್ತದೆಯೇ ಎಂಬ ಪ್ರಶ್ನೆ ಫಲಾನುಭವಿಗಳಲ್ಲಿ ಕಾಡುತ್ತಿದೆ. ಹಣ ವಿತರಣೆಯ ಬದಲಾವಣೆ ಬಗ್ಗೆ ರಾಜ್ಯ ಸರ್ಕಾರದಿಂದ(state government) ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.

ದಯವಿಟ್ಟು ಗಮನಿಸಿ: ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Comments

Leave a Reply

Your email address will not be published. Required fields are marked *