ರಾಜ್ಯ ಸರ್ಕಾರದ ಮಹತ್ವದ ಪ್ರಕಟಣೆ: ರೇಷನ್ ಕಾರ್ಡ್(Ration Card ) ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆಗೆ ಅಂತಿಮ ಗಡುವು ಫೆಬ್ರವರಿ 28, 2025(February 28, 2025)! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಾವು ಯಾವುದೇ ಯೋಜನೆಯ ಲಾಭ ಪಡೆಯಬೇಕೆಂದರೂ ಕೂಡ ಕೆಲವೊಂದು ದಾಖಲೆಗಳು(documents) ಬಹಳ ಮುಖ್ಯ. ಉದಾಹರಣೆಗೆ ಆಧಾರ್ ಕಾರ್ಡ್(Adhar card), ರೇಷನ್ ಕಾರ್ಡ್(Ration card), ವೋಟರ್ ಐಡಿ(Voter ID) ಈ ರೀತಿಯಾದ ದಾಖಲೆಗಳು ಬಹಳ ಮುಖ್ಯ. ಇನ್ನು ಕರ್ನಾಟಕ ಸರ್ಕಾರವು ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಬಿಪಿಎಲ್ (BPL) ರೇಷನ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಹಲವಾರು ಯೋಜನೆಗಳ ಲಾಭ ಪಡೆಯಲು ಸರಿಯಾದ ಮಾಹಿತಿಯುಳ್ಳ ರೇಷನ್ ಕಾರ್ಡ್ ಇರಬೇಕು. ಆದರೆ, ಹಲವಾರು ನಾಗರಿಕರ ರೇಷನ್ ಕಾರ್ಡ್‌ನಲ್ಲಿ ಮಾಹಿತಿಯ ತಪ್ಪು, ವಿಳಾಸ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ, ಆಧಾರ್ ಲಿಂಕ್(Adhar link), ನ್ಯಾಯ ಬೆಲೆ ಅಂಗಡಿ ಬದಲಾವಣೆ ಮುಂತಾದ ತಿದ್ದುಪಡಿಯ ಅಗತ್ಯವಿದೆ. ಈ ಹಿನ್ನೆಲೆ, ಸರ್ಕಾರವು ಬಿಪಿಎಲ್ ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಗೆ ಕೊನೆಯ ಅವಕಾಶವನ್ನು ನೀಡಿದ್ದು, ಫೆಬ್ರವರಿ 28, 2025ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಎಲ್ಲಿಯವರೆಗೆ ಅವಕಾಶ ಕಲ್ಪಿಸಲಾಗಿದೆ? ಹೇಗೆ ಅರ್ಜಿ ಸಲ್ಲಿಸಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಈ ಹೊಸ ನಿರ್ಧಾರದ ಅನ್ವಯ, ಪಡಿತರ ಚೀಟಿಯ ತಿದ್ದುಪಡಿಗೆ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಫೆಬ್ರವರಿ 2025 ತಿಂಗಳ ಕೊನೆಯವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಂದ ಅನೇಕ ಫಲಾನುಭವಿಗಳು ತಮ್ಮ ಪಡಿತರ ಚೀಟಿಯ ಅಗತ್ಯ ಬದಲಾವಣೆಗಳನ್ನು (Important Update) ಮಾಡಿಸಿಕೊಳ್ಳಲು ಹೆಚ್ಚಿನ ಅವಕಾಶ ಪಡೆಯಲಿದ್ದಾರೆ.
ಆಹಾರ ಇಲಾಖೆ (Food Department) ಪ್ರಕಟಣೆಯ ಪ್ರಕಾರ, ಕೆಲವು ಗ್ರಾಹಕರು ಮಾತ್ರ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು. ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬ ವಿವರ ಕೆಳಗಿನಂತಿದೆ:
ತಿದ್ದುಪಡಿ ಮಾಡಬಹುದಾದ ಪ್ರಮುಖ ಅಂಶಗಳು:
1. ಪಡಿತರ ಚೀಟಿಯಲ್ಲಿನ ಸದಸ್ಯರ ಹೆಸರಿನ ತಿದ್ದುಪಡಿ:
ಈ ಅವಧಿಯಲ್ಲಿ ಸದಸ್ಯರ ಹೆಸರಿನಲ್ಲಿ ಅಕ್ಷರ ದೋಷಗಳು ಅಥವಾ ತಪ್ಪು ಹೆಸರುಗಳಿದ್ದರೆ, ಸರಿಪಡಿಸಿಕೊಳ್ಳಬಹುದು.
2. ಹೊಸ ಸದಸ್ಯರ ಸೇರ್ಪಡೆ (Adding New Members) :
ಕುಟುಂಬದ ಹೊಸ ಸದಸ್ಯರನ್ನು (ಮಕ್ಕಳು, ಪತ್ನಿ, ಪತಿ) ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
3. ಕುಟುಂಬದ ಮುಖ್ಯಸ್ಥರ ಬದಲಾವಣೆ:
ಕುಟುಂಬದ ಮುಖ್ಯಸ್ಥನ (Head of the Family) ಮಾಹಿತಿ ಬದಲಾಯಿಸಲು ಅವಕಾಶ ನೀಡಲಾಗಿದೆ.
4. ನ್ಯಾಯಬೆಲೆ ಅಂಗಡಿ ಬದಲಾವಣೆ:
ಪಡಿತರ ವಿತರಣೆ ಮಾಡುವ ಅಂಗಡಿ ಬದಲಾವಣೆಗೊಳಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ.
5. ವಿಳಾಸ ಬದಲಾವಣೆ (Address Changing) :
ಸ್ಥಳಾಂತರವಾದ ಕುಟುಂಬಗಳು ತಮ್ಮ ಹೊಸ ವಿಳಾಸವನ್ನು ಪಡಿತರ ಚೀಟಿಯಲ್ಲಿ ನವೀಕರಿಸಿಕೊಳ್ಳಬಹುದು.
6. ಇ-ಕೆವೈಸಿ (e-KYC) ಮಾಡಿಕೊಳ್ಳಲು ಅವಕಾಶ:
ಪಡಿತರ ಚೀಟಿಗೆ ಸದಸ್ಯರ e-KYC (ಆಧಾರ್ ಕಾರ್ಡ್ ಮಾನ್ಯತೆ) ಅಪ್‌ಡೇಟ್ ಮಾಡಬಹುದಾಗಿದೆ.
7. ಮೃತ ಸದಸ್ಯರ ಹೆಸರು ತೆಗೆಯುವಿಕೆ:
ಕುಟುಂಬದ ಸದಸ್ಯರು ಮರಣ ಹೊಂದಿದ್ದರೆ, ಅವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕಬಹುದು.
8. ಸದಸ್ಯರ ಪೋಟೋ ಬದಲಾವಣೆ:
ಹಳೆಯ ಅಥವಾ ತಪ್ಪಾದ ಪೋಟೋಗಳನ್ನು ಹೊಸ ಫೋಟೋ ಮೂಲಕ ಅಪ್‌ಡೇಟ್ (Update) ಮಾಡಬಹುದು.
ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು? :
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಈ ಕೆಳಕಂಡ ದಾಖಲೆಗಳನ್ನು ಒದಗಿಸಬೇಕು:
ಆಧಾರ್ ಕಾರ್ಡ್(Adhar card)- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಕಡ್ಡಾಯ.
ಜಾತಿ ಪ್ರಮಾಣ ಪತ್ರ (Caste certificate)- ಮೀಸಲಾತಿ ಪಡೆಯಲು ಜಾತಿ ಪ್ರಮಾಣಪತ್ರ ಅಗತ್ಯವಿರುತ್ತದೆ.
ಆದಾಯ ಪ್ರಮಾಣ ಪತ್ರ(Income certificate)- ಕೆಲವು ಯೋಜನೆಗಳಿಗೆ ಅರ್ಹತೆ ಪಡೆಯಲು ಆದಾಯ ಪ್ರಮಾಣಪತ್ರ ಬೇಕಾಗುತ್ತದೆ.
ಮೊಬೈಲ್ ಸಂಖ್ಯೆ (ಓಟಿಪಿ ದೃಢೀಕರಣಕ್ಕಾಗಿ ಪೋಷಕರ/ಮುಖ್ಯಸ್ಥರ ಮೊಬೈಲ್ ಸಂಖ್ಯೆ ಕಡ್ಡಾಯ).
ಜನನ ಪ್ರಮಾಣ ಪತ್ರ (6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ ಅಗತ್ಯ).
ಅಗತ್ಯವಿರುವ ಇತರ ದಾಖಲೆಗಳನ್ನು ಸ್ಥಳೀಯ ಪ್ರಾಧಿಕಾರ ತೀರ್ಮಾನಿಸಬಹುದು.
ತಿದ್ದುಪಡಿಗೆ ಅರ್ಜಿ ಸಲ್ಲಿಸುವುದು ಹೇಗೆ ?
ಗ್ರಾಹಕರು ತಮ್ಮ ಪಡಿತರ ಚೀಟಿಯ ತಿದ್ದುಪಡಿಗೆ ಅಥವಾ ಹೊಸ ಸದಸ್ಯರ ಸೇರ್ಪಡೆಗೆ ಸಂಬಂಧಿಸಿದಂತೆ ತಮ್ಮ ಹತ್ತಿರದ ಗ್ರಾಮ ಒನ್ (Grama One), ಕರ್ನಾಟಕ ಒನ್ (Karnataka One), ಅಥವಾ ಬೆಂಗಳೂರು ಒನ್ (Bangalore One) ಕೇಂದ್ರಗಳಿಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ (Online) ನಲ್ಲಿ ಪಡಿತರ ಚೀಟಿಯ ತಿದ್ದುಪಡಿ ಅರ್ಜಿಯ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು:
ಅರ್ಜಿ ಸಲ್ಲಿಸಿದ ನಂತರ, ಗ್ರಾಹಕರು ತಮ್ಮ ಪಡಿತರ ಚೀಟಿಯ ತಿದ್ದುಪಡಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
Step-1:
ಅಧಿಕೃತ ಆಹಾರ ಇಲಾಖೆಯ ಜಾಲತಾಣ (Food Department Website) ಪ್ರವೇಶಿಸಬೇಕು.
Step-2:
ನಂತರ ಜಾಲತಾಣದಲ್ಲಿ Menu → e-Status → Amendment Requests Status ಆಯ್ಕೆ ಮಾಡಬೇಕು.
Step-3:
ನಂತರ ನಿಮ್ಮ ಜಿಲ್ಲೆಯ ಆಯ್ಕೆಯನ್ನು (Bangalore Region / Mysore Region / Kalaburagi Region) ಮಾಡಿಕೊಳ್ಳಿ.
Step-4:
“Ration Card Amendment Request Status” ವಿಭಾಗದಲ್ಲಿ RC No (Ration Card Number) ನಮೂದಿಸಿ.
Step-5:
ನಿಮ್ಮ ಅರ್ಜಿಗೆ ಸಂಬಂಧಿಸಿದ Acknowledgment Number ನಮೂದಿಸಿ ಮತ್ತು Go ಬಟನ್ ಮೇಲೆ ಕ್ಲಿಕ್ ಮಾಡಿ, ತಿದ್ದುಪಡಿ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಪಡೆದುಕೊಳ್ಳಬಹುದು.
ರಾಜ್ಯ ಸರ್ಕಾರವು ಈ ತಿದ್ದುಪಡಿ ಪ್ರಕ್ರಿಯೆಗೆ 2025 ಫೆಬ್ರವರಿ 28ರ ವರೆಗೆ(2025 February 28) ಮಾತ್ರ ಅವಕಾಶ ನೀಡಿದ್ದು, ಈ ಅವಧಿಯ ನಂತರ ಹೊಸ ಅನ್ವಯತೆಯ ಅವಕಾಶ ಇರುವುದಿಲ್ಲ. ಆದ್ದರಿಂದ, ತಮ್ಮ ರೇಷನ್ ಕಾರ್ಡ್‌ನಲ್ಲಿ(Ration card) ತಿದ್ದುಪಡಿ ಅಗತ್ಯವಿದ್ದರೆ, ತಕ್ಷಣವೇ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.
ರಾಜ್ಯ ಸರ್ಕಾರದ(State government) ಈ ನಿರ್ಧಾರದಿಂದ ಸಾವಿರಾರು ಕುಟುಂಬಗಳು ಸರಿಯಾದ ಮಾಹಿತಿಯೊಂದಿಗೆ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಅವಕಾಶ ಸಿಗಲಿದೆ. ತಪ್ಪದೆ ಈ ಅವಕಾಶವನ್ನು ಬಳಸಿಕೊಳ್ಳಿ!
ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಯನ್ನು ಓದಿ:
- ಬರೋಬ್ಬರಿ 1800 ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ.! ಇಲ್ಲಿದೆ ಮಾಹಿತಿ.
- E-khata: ಬೆಂಗಳೂರು ಆಸ್ತಿಗಳ ಇ – ಖಾತಾದ ಡಿಜಿಟಲೀಕರಣದ ಹೊಸ ಅಪ್‌ಡೇಟ್!
- ಗ್ರಂಥಾಲಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪಿಯುಸಿ ಪಾಸಾಗಿದ್ರೆ ಅಪ್ಲೈ ಮಾಡಿ
ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Leave a Reply