ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ಲೇಖನದಲ್ಲಿ ರೈಲ್ವೇ ಸಹಕಾರಿ ಬ್ಯಾಂಕ್ ಮೈಸೂರು( Railway Cooperative Bank Mysore ) 2023 ರ ನೇಮಕಾತಿಯ ಅಡಿಯಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೇ ರೈಲ್ವೇ ಸಹಕಾರಿ ಬ್ಯಾಂಕ್ ವತಿಯಿಂದ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.
– ರೈಲ್ವೇ ಸಹಕಾರಿ ಬ್ಯಾಂಕ್ ಮೈಸೂರು ನೇಮಕಾತಿ(Recruitment) 2023 ರ ಅವಲೋಕನ –
ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರೈಲ್ವೆ ಸಹಕಾರ ಬ್ಯಾಂಕ್ ಲಿಮಿಡೆಡ್, ಮೈಸೂರಿನಲ್ಲಿ 21 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿದೆ. ಜೂನಿಯರ್ ಕ್ಲರ್ಕ್, ಅಕೌಂಟೆಂಟ್ ಹುದ್ದೆಗಳು ಖಾಲಿ ಇವೆ. ಕರ್ನಾಟಕ ರಾಜ್ಯದಲ್ಲಿಯೇ ಕೆಲಸವನ್ನು ಮಾಡಬೇಕು ಎಂದು ಆಶಿಸುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣ ಅವಕಾಶ ಎನ್ನಬಹುದಾಗಿದೆ. ಹಾಗಾಗಿ ಆಸಕ್ತಿವುಳ್ಳ ಅಭ್ಯರ್ಥಿಗಳು ಜೂನ್ 28ರೊಳಗೆ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :
ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು: |
ಇಲಾಖೆ ಹೆಸರು | ರೈಲ್ವೇ ಸಹಕಾರಿ ಬ್ಯಾಂಕ್ ಮೈಸೂರು |
ಹುದ್ದೆಗಳ ಹೆಸರು | ವಿವಿಧ ಹುದ್ದೆಗಳು |
ವರ್ಷ | 2023 |
ಒಟ್ಟು ಹುದ್ದೆಗಳು | 21 ಪೋಸ್ಟ್ ಗಳು |
ಅಪ್ಲಿಕೇಶನ್ ವಿಧಾನ | ಆಫ್ಲೈನ್(offline) |
ರೈಲ್ವೇ ಸಹಕಾರಿ ಬ್ಯಾಂಕ್ ಮೈಸೂರು, ನೇಮಕಾತಿ 2023ರ ಖಾಲಿ ಹುದ್ದೆಗಳ ವಿವರ :
ಬ್ರಾಂಚ್ ಮ್ಯಾನೇಜರ್ : 1
ಲೆಕ್ಕಪರಿಶೋಧಕ : 4
ಹಿರಿಯ ಕ್ಯಾಷಿಯರ್ಗಳು : 1
ಕಂಪ್ಯೂಟರ್ ಮೇಲ್ವಿಚಾರಕರು : 1
ಕಿರಿಯ ಗುಮಾಸ್ತರು : 10
ಕಚೇರಿ ಸಹಾಯಕರು : 4
ಒಟ್ಟು ಹುದ್ದೆಗಳ ಸಂಖ್ಯೆ : 21
ಉದ್ಯೋಗ ಸ್ಥಳ : ಕರ್ನಾಟಕ( ಮೈಸೂರು)
ರೈಲ್ವೇ ಸಹಕಾರಿ ಬ್ಯಾಂಕ್ ಮೈಸೂರು ನೇಮಕಾತಿ – 2023ಕ್ಕೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ :
ಬ್ರಾಂಚ್ ಮ್ಯಾನೇಜರ್ : ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಅಂಗೀಕೃತಗೊಂಡ ಸಂಸ್ಥೆಯಿಂದ ಮೂಲ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಮಾಡಿರಬೇಕು.
ಲೆಕ್ಕಪರಿಶೋಧಕರು – ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು (ವಾಣಿಜ್ಯ, ಸಹಕಾರ/ ನಿರ್ವಹಣೆ ಪದವಿ ಹೊಂದಿರಬೇಕು). ಅಂಗೀಕೃತಗೊಂಡ ಸಂಸ್ಥೆಯಿಂದ ಮೂಲ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಮಾಡಿರಬೇಕು.
ಹಿರಿಯ ಕ್ಯಾಷಿಯರ್ಗಳು – ಪದವಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಅಂಗೀಕೃತಗೊಂಡ ಸಂಸ್ಥೆಯಿಂದ ಮೂಲ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಮಾಡಿರಬೇಕು.
ಕಂಪ್ಯೂಟರ್ ಮೇಲ್ವಿಚಾರಕರು – ಕಂಪ್ಯೂಟರ್ ಅಪ್ಲಿಕೇಷನ್, ಬಿ.ಎಸ್.ಸಿ/ ಬಿ.ಸಿ.ಎ/ಬಿ.ಇ ಇನ್ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿರಬೇಕು.
ಕಿರಿಯ ಗುಮಾಸ್ತರು – ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಅಂಗೀಕೃತಗೊಂಡ ಸಂಸ್ಥೆಯಿಂದ ಮೂಲ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಮಾಡಿರಬೇಕು.
ಕಛೇರಿ ಸಹಾಯಕರು – ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ :
ಅಭ್ಯರ್ಥಿಯು ಕನಿಷ್ಠ 18 ವರ್ಷಗಳಿಂದ ಗರಿಷ್ಠ 35 ವರ್ಷಗಳನ್ನು ಮೀರಿರಬಾರದು.
ಸಂಬಳದ ಪ್ಯಾಕೇಜ್ ಎಷ್ಟು?:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.18000-35400/- ಗಳನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಶುಲ್ಕ :
SC/ST/ ಪ್ರವರ್ಗ -I/ Ex-Servicemen ಅಭ್ಯರ್ಥಿಗಳು: ರೂ.500/-
ಸಾಮಾನ್ಯ/ಕ್ಯಾಟ್-2A/2B/3A & 3B ಅಭ್ಯರ್ಥಿಗಳು: ರೂ.1000/-
ಅರ್ಜಿಯನ್ನು ಹೀಗೆ ಸಲ್ಲಿಸಿ :
ಅರ್ಹ ಹಾಗೂ ಆಸಕ್ತವುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜೊತೆಗೆ ಕೇಳಲಾದ ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು :
ಸದಸ್ಯ ಕಾರ್ಯದರ್ಶಿ,
ನೇಮಕಾತಿ ಸಮಿತಿ,
ರೈಲ್ವೆ ಸಹಕಾರ ಬ್ಯಾಂಕ್ ಲಿಮಿಟೆಡ್,
ಶೇಷಾದ್ರಿ ಅಯ್ಯರ್ ರಸ್ತೆ,
ಮೈಸೂರು – 570001
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 07-06-2023 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 28-07-2023 |
ಪ್ರಮುಖ ಲಿಂಕುಗಳು |
ಹೋಮ್ ಪೇಜ್ |
ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ನೋಟಿಫಿಕೇಶನ್ & ಅರ್ಜಿ ನಮೂನೆ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.
ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ