Home » Railway Jobs » Railway Jobs – ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

Railway Jobs – ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

WhatsApp Group Join Now
Telegram Group Join Now
railway jobs

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ಲೇಖನದಲ್ಲಿ ರೈಲ್ವೇ ನೇಮಕಾತಿ ಸೆಲ್ ಉತ್ತರ – ಕೇಂದ್ರೀಯ ರೈಲ್ವೆಯಲ್ಲಿ (RRC NCR) ಇರುವ ಹುದ್ದೆಗಳ ನೇಮಕಾತಿ(Recruitment) ಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೆ ರೈಲ್ವೆ ಇಲಾಖೆ ವತಿಯಿಂದ, ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ

– RRC NCR ನೇಮಕಾತಿ  (Recruitment) 2023 ರ ಅವಲೋಕನ-

ನಾರ್ತ್ ಸೆಂಟ್ರಲ್ ರೈಲ್ವೇ (North Central Railway) ವಿವಿಧ ಟ್ರೇಡ್‌ಗಳಲ್ಲಿ 1697 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. RRC-NCR ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ  ಭಾರತೀಯ ಪ್ರಜೆಗಳಾಗಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ನವೆಂಬರ್ 15, 2023 ರಂದು ಪ್ರಾರಂಭವಾಗಿದೆ ಮತ್ತು ಡಿಸೆಂಬರ್ 14, 2023 ರಂದು ಮುಕ್ತಾಯಗೊಳ್ಳುತ್ತದೆ. ಆಸಕ್ತ ಮತ್ತು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡಲೇ ಉತ್ತರ ಕೇಂದ್ರ ರೈಲ್ವೆಯ ಅಧಿಕೃತ ವೆಬ್‌ಸೈಟ್, ರೈಲ್ವೇ ನೇಮಕಾತಿ ಸೆಲ್ –  www.rrcpryj.org ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಈ ಹುದ್ದೆಗಳ ಪ್ರಮುಖ ದಿನಾಂಕಗಳು, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಇತ್ಯಾದಿಗಳನ್ನು ತಿಳಿಸಿಕೊಡಲಾಗುತ್ತದೆ. ಪೋಸ್ಟ್‌ಗಳ ವಿವರಗಳು ಕೆಳಕಂಡಂತಿವೆ:

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು:
ಇಲಾಖೆ ಹೆಸರು ನಾರ್ತ್ ಸೆಂಟ್ರಲ್ ರೈಲ್ವೇ (North Central Railway)
ಹುದ್ದೆಗಳ ಹೆಸರು ಅಪ್ರೆಂಟಿಸ್
ವರ್ಷ 2023
ಒಟ್ಟು ಹುದ್ದೆಗಳು  1697
ಅಪ್ಲಿಕೇಶನ್ ವಿಧಾನ online

Picsart 23 06 10 14 01 54 141

RRC NCR ನೇಮಕಾತಿ 2023ರ ಖಾಲಿ ಹುದ್ದೆಗಳ ವಿವರ :

ಹುದ್ದೆಯ ಹೆಸರು : ಅಪ್ರೆಂಟಿಸ್‌
ಒಟ್ಟು ಹುದ್ದೆಗಳು: 1697

ಪೋಸ್ಟ್‌ಗಳು :

ಜಾನ್ಸಿ ಡಿವಿಷನ್(Jhansi Division): 528 ಹುದ್ದೆಗಳು
ಪ್ರಯಾಗ್‌ರಾಜ್ ಡಿವಿಷನ್(Prayagraj division)- ಮೆಕ್ಯಾನಿಕಲ್ (Mechanical)ವಿಭಾಗ : 364 ಹುದ್ದೆಗಳು
ಪ್ರಯಾಗ್‌ರಾಜ್ ಡಿವಿಷನ್ – ಇಲೆಕ್ಟ್ರಿಕಲ್(Electrical )ವಿಭಾಗ : 339 ಹುದ್ದೆಗಳು
ಆಗ್ರಾ ಡಿವಿಷನ್ : 296 ಹುದ್ದೆಗಳು
– ವರ್ಕ್‌ಶಾಪ್‌ ಜಾನ್ಸಿ ಡಿವಿಷನ್ : 170 ಹುದ್ದೆಗಳು

RRC NCR ನೇಮಕಾತಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ :

ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಯಿಂದ ಕನಿಷ್ಠ 50% ಅಂಕಗಳೊಂದಿಗೆ 10 ನೇ ತರಗತಿಯನ್ನು ಸಂಪೂರ್ಣಗೊಳಿಸರಬೇಕು. ಇದರೊಂದಿಗೆ, ಹುದ್ದೆಗಳಿಗೆ ಅನುಗುಣವಾಗಿ ಮೆಕ್ಯಾನಿಕಲ್ / ಇಲೆಕ್ಟ್ರೀಷಿಯನ್ /ಇತರೆ ವ್ಯಾಪಾರದಲ್ಲಿ ITI ಉತ್ತಿರ್ಣರಾಗಿರಬೇಕು.

ವಯೋಮಿತಿ:

ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಲು   ಅಭ್ಯರ್ಥಿಯು ಕನಿಷ್ಠ 15  ರಿಂದ ಗರಿಷ್ಠ 24 ವರ್ಷಗಳ ವಯಸ್ಸಿನ ಮಿತಿಯಲ್ಲಿರಬೇಕು.

ವಯೋಮಿತಿ ಸಡಿಲಿಕೆ:
SC, ST ಮತ್ತು OBC ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
OBC: 03 ವರ್ಷಗಳು
SC/ST: 05 ವರ್ಷಗಳು

Picsart 23 06 10 13 55 14 667

ಸಂಬಳದ ಪ್ಯಾಕೇಜ್ ಎಷ್ಟು?:

ಯಾವುದೇ ರೀತಿಯ ಸಂಬಳದ ವಿವರವನ್ನು ಬಹಿರಂಗಪಡಿಸಿಲ್ಲ. ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಿರುವ ಅಧಿಕೃತ ಸೂಚನೆಯನ್ನು ಪರಿಶೀಲಿಸಿ. ಆದರೆ, ಅಪ್ರೆಂಟಿಸ್ ಹುದ್ದೆಗೆ ಟ್ರೈನಿಂಗ್ ಅವಧಿಯು 1 ವರ್ಷ ಆಗಿರುತ್ತದೆ ಮತ್ತು ಮಾಸಿಕ ಸ್ಟೈಫಂಡ್ : ರೂ.8000-9000 ಇರುತ್ತದೆ.

ಅರ್ಜಿ ಶುಲ್ಕ:

SC/ ST/ PWD/ ಮಹಿಳೆಯರು ಯಾವುದೇ ಶುಲ್ಕ ಇರುುದಿಲ್ಲ
ಎಲ್ಲಾ ಇತರರಿಗೆ ವರ್ಗದವರಿಗೆ : ರೂ.100/-
ಅಭ್ಯರ್ಥಿಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ , UPI ಅಥವಾ ನೆಟ್ ಬ್ಯಾಂಕಿಂಗ್ ಮುಖಾಂತರ ಆನ್ಲೈನ್ ಶುಲ್ಕ ಪಾವತಿಯನ್ನು ಮಾಡಬಹುದು.

ಆಯ್ಕೆ ಪ್ರಕ್ರಿಯೆ:

RRC NCR ನೇಮಕಾತಿ 2023 ಗಾಗಿ ಅಭ್ಯರ್ಥಿಗಳ ಆಯ್ಕೆಯನ್ನು
10ನೇ ಮತ್ತು ITI ಅಂಕಗಳ ಆಧಾರದ ಮೇಲೆ , ಡಾಕ್ಯುಮೆಂಟ್ ಪರಿಶೀಲನೆ ಮತ್ತು
ವೈದ್ಯಕೀಯ ಪರೀಕ್ಷೆಯ ಹಂತಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿಯನ್ನು ಹೀಗೆ ಸಲ್ಲಿಸಿ :

ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ,  ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ(ಅನ್ವಯಿಸಿದ್ದಲ್ಲಿ)

ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  15-11-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  14-12-2023

 

ಪ್ರಮುಖ ಲಿಂಕುಗಳು 
ಹೋಮ್ ಪೇಜ್
ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ  
ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ.

WhatsApp Group Join Now
Telegram Group Join Now

About

Editor | M.Sc CS

4 thoughts on “Railway Jobs – ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

Leave a Reply

Your email address will not be published. Required fields are marked *