Home » Latest Job News » 10ನೇ , 12ನೇ ಕ್ಲಾಸ್ ಪಾಸಾದವರಿಗೆ ನವೋದಯ ವಿದ್ಯಾಲಯದಲ್ಲಿ ಉದ್ಯೋಗಾವಕಾಶ | NVS Recruitment 2024 Apply Online @ navodaya.gov.in

10ನೇ , 12ನೇ ಕ್ಲಾಸ್ ಪಾಸಾದವರಿಗೆ ನವೋದಯ ವಿದ್ಯಾಲಯದಲ್ಲಿ ಉದ್ಯೋಗಾವಕಾಶ | NVS Recruitment 2024 Apply Online @ navodaya.gov.in

WhatsApp Group Join Now
Telegram Group Join Now
IMG 20240329 WA0004

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ವರದಿಯಲ್ಲಿ ನವೋದಯ ವಿದ್ಯಾಲಯ ಸಮಿತಿ ನಾನ್ – ಟೀಚಿಂಗ್ ನೇಮಕಾತಿ 2024 (Navodaya Vidyalaya Samiti Non-Teaching Recruitment 2024) ಕುರಿತು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನವೋದಯ ವಿದ್ಯಾಲಯ ಸಮಿತಿ (NVS) ನೇಮಕಾತಿ 2024 (Navodaya Vidyalaya Samiti Non-Teaching Recruitment 2024):

ನವೋದಯ ವಿದ್ಯಾಲಯ ಸಮಿತಿ (NVS) 1377 ಬೋಧಕೇತರ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಖಾಲಿ ಹುದ್ದೆಗಳು ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್(Junior Secretariat Assistant), ಮಹಿಳಾ ಸಿಬ್ಬಂದಿ ನರ್ಸ್(Female Staff Nurse,), ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್(Electrician cum Plumber), ಮೆಸ್ ಹೆಲ್ಪರ್(Mess Helper), ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ(MTS) ಮತ್ತು ಇನ್ನೂ ಅನೇಕ ವಿಭಾಗಗಳನ್ನು ಒಳಗೊಂಡಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ,ಏಪ್ರಿಲ್ 30 2024 ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ navodaya.gov.in ಮೂಲಕ ಅರ್ಜಿ ಸಲ್ಲಿಸಬಹುದು. ಒದಗಿಸಿದ ಸೂಚನೆಗಳನ್ನು ನಿಖರವಾಗಿ ಅನುಸರಿಸಲು ಖಚಿತಪಡಿಸಿಕೊಳ್ಳಿ. ಈ ಸಂಸ್ಥೆಯ ಭಾಗವಾಗಲು ಮತ್ತು ಈ ಸಂಸ್ಥೆಯ ಉದ್ಯೋಗಗಳಲ್ಲಿ ಯಶಸ್ವಿ ವೃತ್ತಿಜೀವನವನ್ನು ರೂಪಿಸಲು ಬಯಸುತ್ತಿದ್ದರೆ ಇಲ್ಲಿದೆ ಉತ್ತಮ ಅವಕಾಶ. ಆದ್ದರಿಂದ ಅರ್ಹತೆ ಇರುವವರು ಅವಕಾಶ ತಪ್ಪಿಸಬೇಡಿ. ತಮ್ಮ ಶಿಕ್ಷಣ ಮತ್ತು ಅನುಭವಕ್ಕೆ ತಕ್ಕ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅಂತಿಮ ದಿನಾಂಕದ ಒಳಗಾಗಿ ಆನ್ ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು.

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು:
ಇಲಾಖೆ ಹೆಸರು ನವೋದಯ ವಿದ್ಯಾಲಯ ಸಮಿತಿ
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ವರ್ಷ 2024
ಒಟ್ಟು ಹುದ್ದೆಗಳು  1377
ಅಪ್ಲಿಕೇಶನ್ ವಿಧಾನ online

Picsart 23 06 10 14 01 54 141

ನೇಮಕಾತಿ ಸಂಸ್ಥೆ : ನವೋದಯ ವಿದ್ಯಾಲಯ ಸಮಿತಿ (NVS)

ಒಟ್ಟು ಹುದ್ದೆಗಳ ಸಂಖ್ಯೆ: 1377

ಉದ್ಯೋಗ ಸ್ಥಳಗಳು : ಭಾರತದಾದ್ಯಂತ (All India)

ಹುದ್ದೆಗಳ ವಿವರ :

ಮಹಿಳಾ ಸಿಬ್ಬಂದಿ ನರ್ಸ್- 121 ಹುದ್ದೆಗಳು

ಸಹಾಯಕ ವಿಭಾಗಾಧಿಕಾರಿ(Assistant Divisional Officer)- 5 ಹುದ್ದೆಗಳು

ಆಡಿಟ್ ಸಹಾಯಕ (Audit Assistant)- 12 ಹುದ್ದೆಗಳು

ಕಿರಿಯ ಭಾಷಾಂತರ ಅಧಿಕಾರಿ(Junior Translation Officer) – 4 ಹುದ್ದೆಗಳು

ಕಾನೂನು ಸಹಾಯಕ(Legal Assistant) – 1 ಹುದ್ದೆಗಳು

ಸ್ಟೆನೋಗ್ರಾಫರ್(Stenographer)- 23 ಹುದ್ದೆಗಳು

ಕಂಪ್ಯೂಟರ್ ಆಪರೇಟರ್(Computer Operator( – 2 ಹುದ್ದೆಗಳು

ಅಡುಗೆ ಮೇಲ್ವಿಚಾರಕ(Kitchen Supervisor) – 78 ಹುದ್ದೆಗಳು

ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ(JSA) – 381 ಹುದ್ದೆಗಳು

ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್(Electrician Cum Plumber) – 128 ಹುದ್ದೆಗಳು

ಲ್ಯಾಬ್ ಅಟೆಂಡೆಂಟ್(Lab Attendant) – 161 ಹುದ್ದೆಗಳು

ಮೆಸ್ ಸಹಾಯಕ(Mess Assistant) – 442 ಹುದ್ದೆಗಳು

ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ (Multi-Tasking Staff) – 19 ಹುದ್ದೆಗಳು

ಹುದ್ದೆಗಳಿಗೆ ಬೇಕಾಗುವ ವಿದ್ಯಾರ್ಹತೆ ಹಾಗೂ ವಯೋಮಿತಿ:

ಮಹಿಳಾ ಸಿಬ್ಬಂದಿ ನರ್ಸ್(Female Staff Nurse):

ನರ್ಸಿಂಗ್‌ನಲ್ಲಿ ಪದವಿ/ ಡಿಪ್ಲೊಮಾ/ ಪ್ರಮಾಣಪತ್ರದೊಂದಿಗೆ 12ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಎರಡು ಅಥವಾ ಮೂರು ವರ್ಷಗಳ ಅನುಭವ ಸಹ ಪಡೆದಿರಬೇಕು
ವಯೋಮಿತಿ:
ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು 35 ವರ್ಷಗಳ ವರೆಗೆ ಇರಬೇಕು.

ಸಹಾಯಕ ವಿಭಾಗಾಧಿಕಾರಿ(Assistant Divisional Officer):

ವಿದ್ಯಾರ್ಹತೆ:
ಈ ಹುದ್ದೆ ಬಯಸುವ ಅಭ್ಯರ್ಥಿಯು
ಸ್ನಾತಕೋತ್ತರ ಪದವಿಯನ್ನು ಪಡೆದವರಾಗಿರಬೇಕು.

ವಯೋಮಿತಿ:

ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು18-30 ವರ್ಷಗಳ ನಡುವೆ ಇರಬೇಕು

ಆಡಿಟ್ ಸಹಾಯಕ(Audit Assistant):

ವಿದ್ಯಾರ್ಹತೆ:
ಬಿ.ಕಾಂ ಪದವೀಧಾರಾಗಿರಬೇಕು (BCom Graduate)

ವಯೋಮಿತಿ:

ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು18-30 ವರ್ಷಗಳ ನಡುವೆ ಇರಬೇಕು

ಕಿರಿಯ ಭಾಷಾಂತರ ಅಧಿಕಾರಿ(Junior Translation Officer):

ವಿದ್ಯಾರ್ಹತೆ:

ಭಾಷಾಂತರದಲ್ಲಿ ಡಿಪ್ಲೊಮಾ ಅಥವಾ 2 ವರ್ಷಗಳ ಅನುಭವದೊಂದಿಗೆ ಹಿಂದಿ/ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದವರಾಗಿರಬೇಕು.

ವಯೋಮಿತಿ:

ಈ ಹುದ್ದೆಗೆ ಅಭ್ಯರ್ಥಿಯು 32 ವರ್ಷಗಳನ್ನು ಮೀರಬಾರದು

ಕಾನೂನು ಸಹಾಯಕ(Legal Assistant)

ವಿದ್ಯಾರ್ಹತೆ:
ಅಭ್ಯರ್ಥಿಯು ಕಾನೂನು ಪದವಿಯನ್ನು(law degree) ಪಡೆದಿರಬೇಕು ಮತ್ತು 3 ವರ್ಷಗಳ ಕಾನೂನು ಪ್ರಕರಣ ನಿರ್ವಹಣೆ ಅನುಭವವನ್ನು ಸಹ ಹೊಂದಿರಬೇಕು.

ವಯೋಮಿತಿ:
ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು18-30 ವರ್ಷಗಳ ನಡುವೆ ಇರಬೇಕು

ಸ್ಟೆನೋಗ್ರಾಫರ್(Stenographer):

ವಿದ್ಯಾರ್ಹತೆ:
12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಡಿಕ್ಟೇಶನ್ ಮತ್ತು ಟ್ರಾನ್ಸ್‌ಕ್ರಿಪ್ಶನ್ ಕೌಶಲ್ಯಗಳನ್ನು (detection and transcription skills) ಬಲ್ಲವರಾಗಿರಬೇಕು.

ವಯೋಮಿತಿ:
ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು18-27 ವರ್ಷಗಳ ನಡುವೆ ಇರಬೇಕು

ಕಂಪ್ಯೂಟರ್ ಆಪರೇಟರ್(Computer Operator)

BCA/B.Sc. ( computer science/IT) ಅಥವಾ ಬಿಇ/ಬಿ.ಟೆಕ್ (computer science/IT)
ಪೂರ್ಣಗೊಳಿಸಿರಬೇಕು.

ವಯೋಮಿತಿ:
ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು18-30 ವರ್ಷಗಳ ನಡುವೆ ಇರಬೇಕು

ಅಡುಗೆ ಮೇಲ್ವಿಚಾರಕ(Kitchen Supervisor):

ವಿದ್ಯಾರ್ಹತೆ :
ಮಾನ್ಯತೆ ಪಡೆದ ಸಂಸ್ಥೆಯಿಂದ ಹೋಟೆಲ್ ಮ್ಯಾನೇಜ್‌ಮೆಂಟ್‌(Hotel Management)ನಲ್ಲಿ ಸ್ನಾತಕೋತ್ತರ ಪದವಿ, ರಕ್ಷಣಾ ವಿಭಾಗದಲ್ಲಿ 10 ವರ್ಷಗಳ ಸೇವೆ ಮತ್ತು ಅಡುಗೆಯಲ್ಲಿ ವ್ಯಾಪಾರ ಪ್ರಾವೀಣ್ಯತೆಯ ಪ್ರಮಾಣಪತ್ರದ(10 years of service in Defense and Trade Proficiency Certificate in Cooking)ಅಗತ್ಯವಿದೆ.

ವಯೋಮಿತಿ:
ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು 35 ವರ್ಷಗಳ ವರೆಗೆ ಇರಬೇಕು.

ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ(Junior Secretariat Assistant):

ವಿದ್ಯಾರ್ಹತೆ :
ಅಭ್ಯರ್ಥಿಯು ಸೀನಿಯರ್ ಸೆಕೆಂಡರಿ ಪ್ರಮಾಣಪತ್ರವನ್ನು(ವರ್ಗ -XII)ಹೊಂದಿರಬೇಕು ಹಾಗೂ ಉತ್ತಮ ಟೈಪಿಂಗ್ ಸ್ಕಿಲ್(typing skill) ಅನ್ನು ಹೊಂದಿರಬೇಕು.

ವಯೋಮಿತಿ:
ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು18-27 ವರ್ಷಗಳ ನಡುವೆ ಇರಬೇಕು

ಎಲೆಕ್ಟ್ರಿಷಿಯನ್ ಕಮ್plumbing)(Electrician cum plumber)

ವಿದ್ಯಾರ್ಹತೆ :

ಅರ್ಜಿದಾರರು 10ನೇ ತರಗತಿ ಉತ್ತೀರ್ಣರಾಗಿರಬೇಕು, ಎಲೆಕ್ಟ್ರಿಷಿಯನ್/ವೈರ್‌ಮ್ಯಾನ್ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರ ಮತ್ತು ಎಲೆಕ್ಟ್ರಿಕಲ್ ಇನ್‌ಸ್ಟಾಲೇಶನ್/ವೈರಿಂಗ್/ಪ್ಲಂಬಿಂಗ್‌ನಲ್ಲಿ ಕನಿಷ್ಠ 2 ವರ್ಷಗಳ ಅನುಭವವನ್ನು ಹೊಂದಿರಬೇಕು

ವಯೋಮಿತಿ:

ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು18-40 ವರ್ಷಗಳ ನಡುವೆ ಇರಬೇಕು

ಲ್ಯಾಬ್ ಅಟೆಂಡೆಂಟ್(Lab Attendant):

ವಿದ್ಯಾರ್ಹತೆ :
ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾನಿಲಯದಿಂದ ಸೈನ್ಸ್ ಸ್ಟ್ರೀಮ್‌(science stream)ನೊಂದಿಗೆ 12ನೇ ತರಗತಿ ಅಥವಾ ಪ್ರಯೋಗಾಲಯ ತಂತ್ರದಲ್ಲಿ ಪ್ರಮಾಣಪತ್ರ/ಡಿಪ್ಲೊಮಾ ಅಗತ್ಯವಿದೆ.

ವಯೋಮಿತಿ:
ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು18-30 ವರ್ಷಗಳ ನಡುವೆ ಇರಬೇಕು

ಮೆಸ್ ಸಹಾಯಕ(Mess Assistant)

ವಿದ್ಯಾರ್ಹತೆ :
ಅಭ್ಯರ್ಥಿಯು SSLC ಪಾಸ್ ಆಗಿರಬೇಕು, ಸರ್ಕಾರದ ವಸತಿ ಸಂಸ್ಥೆಯ ಮೆಸ್/ಶಾಲೆಯಲ್ಲಿ 05 ವರ್ಷಗಳ ಅನುಭವ ಹೊಂದಿರಬೇಕು. ಮತ್ತು NVS ಸೂಚಿಸಿದ ಕೌಶಲ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಬೇಕು(Skill test prescribed by NVS..

ವಯೋಮಿತಿ:
ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು18-30 ವರ್ಷಗಳ ನಡುವೆ ಇರಬೇಕು

ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ:

ವಿದ್ಯಾರ್ಹತೆ :
ಅಭ್ಯರ್ಥಿಯು SSLC ಪಾಸ್ ಆಗಿರಬೇಕು.

ವಯೋಮಿತಿ:
ಈ ಹುದ್ದೆಗೆ ಅಭ್ಯರ್ಥಿಯ ವಯಸ್ಸು18-30 ವರ್ಷಗಳ ನಡುವೆ ಇರಬೇಕು

ಸಂಬಳ ಎಷ್ಟು?

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಶ್ರೇಣಿ 18,000 ರೂ. ರಿಂದ ಪ್ರಾರಂಭವಾಗಿ
1,42, 400 ರೂ ವರೆಗೂ ಇರುತ್ತದೆ.

ಮಹಿಳಾ ಸಿಬ್ಬಂದಿ ನರ್ಸ್- 44900 ರೂ. ರಿಂದ 142400 ರೂ. ವರೆಗೆ

ಸಹಾಯಕ ವಿಭಾಗಾಧಿಕಾರಿ – 35400 ರೂ. ರಿಂದ 112400 ರೂ. ವರೆಗೆ

ಆಡಿಟ್ ಸಹಾಯಕ – 35400 ರೂ. ರಿಂದ 112400 ರೂ. ವರೆಗೆ

ಜೂನಿಯರ್ ಅನುವಾದ ಅಧಿಕಾರಿ – 35400 ರೂ. ರಿಂದ 112400 ರೂ. ವರೆಗೆ

ಕಾನೂನು ಸಹಾಯಕ – 35400 ರೂ. ರಿಂದ 112400 ರೂ. ವರೆಗೆ

ಸ್ಟೆನೋಗ್ರಾಫರ್ – ರೂ.25500 ರಿಂದ 81100 ರೂ. ವರೆಗೂ.

ಕಂಪ್ಯೂಟರ್ ಆಪರೇಟರ್ – ರೂ.25500 ರಿಂದ 81100 ರೂ. ವರೆಗೂ.

ಅಡುಗೆ ಮೇಲ್ವಿಚಾರಕ – ರೂ.25500 ರಿಂದ 81100 ರೂ. ವರೆಗೂ.

ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ – 19900 ರೂ. ರಿಂದ 63200 ರೂ. ವರೆಗೂ

ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್ – 19900 ರೂ. ರಿಂದ 63200 ರೂ. ವರೆಗೂ

ಲ್ಯಾಬ್ ಅಟೆಂಡೆಂಟ್ – ರೂ.18000 ರಿಂದ 56900 ರೂ. ವರೆಗೂ

ಮೆಸ್ ಸಹಾಯಕ – ರೂ.18000 ರಿಂದ 56900 ರೂ. ವರೆಗೂ

ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ – ರೂ.18000 ರಿಂದ 56900 ರೂ. ವರೆಗೂ

Picsart 23 06 10 13 55 14 667

NVS ನೇಮಕಾತಿ ಆಯ್ಕೆ ಪ್ರಕ್ರಿಯೆ 2024:

NVS ಬೋಧಕೇತರ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನಂತಿರುತ್ತದೆ:

ಲಿಖಿತ ಪರೀಕ್ಷೆ(Written Test)
ಕೌಶಲ್ಯ ಪರೀಕ್ಷೆ/ಟೈಪಿಂಗ್ ಟೆಸ್ಟ್/ ಟೈಪ್ ರೈಟಿಂಗ್ ಟೆಸ್ಟ್(Skill Test/ Typing Test/ Typewriting Test)
ಡಾಕ್ಯುಮೆಂಟ್ ಪರಿಶೀಲನೆ(Document Verification)
ವೈದ್ಯಕೀಯ ಪರೀಕ್ಷೆ(Medical Examination)
ಸಂದರ್ಶನ(Interview)

ಅರ್ಜಿ ಶುಲ್ಕ :

SC/ ST/ PwBD ಅಭ್ಯರ್ಥಿಗಳಿಗೆ – 500 ರೂ. ಶುಲ್ಕ

ಸಾಮಾನ್ಯ/ EWS/OBC(NCL) ಮತ್ತು ಮಹಿಳಾ ಸಿಬ್ಬಂದಿ ನರ್ಸ್ – 1500 ರೂ. ಶುಲ್ಕ

ಉಳಿದ ಎಲ್ಲಾ ಹುದ್ದೆಗಳಿಗೆ – 1000 ರೂ. ಶುಲ್ಕ

NVS ನಾನ್ – ಟೀಚಿಂಗ್ 2024 ಗೆ ಅರ್ಜಿ ಸಲ್ಲಿಸುವುದು ಹೇಗೆ?

2024 ರಲ್ಲಿ NVS ಬೋಧಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ:

NVS ವೆಬ್‌ಸೈಟ್‌ಗೆ ಭೇಟಿ ನೀಡಿ:

ನಿಮ್ಮ ಬ್ರೌಸರ್‌ನಲ್ಲಿ https://navodaya.gov.in ಗೆ ಭೇಟಿ ನೀಡಿ.

ಮುಖಪುಟದಲ್ಲಿ, “ನೇಮಕಾತಿ(Recruitment)” ವಿಭಾಗವನ್ನು ಕ್ಲಿಕ್ ಮಾಡಿ.

ಅಧಿಸೂಚನೆ ಪರಿಶೀಲಿಸಿ:
“ಬೋಧಕೇತರ ಸಿಬ್ಬಂದಿ(Non-Teaching Staff)” ಟ್ಯಾಬ್ ಕ್ಲಿಕ್ ಮಾಡಿ.

“NVS ಬೋಧಕೇತರ ಸಿಬ್ಬಂದಿ 2024” ಅಧಿಸೂಚನೆಯನ್ನು ಹುಡುಕಿ ಮತ್ತು ಓದಿ.

ಅರ್ಹತೆ, ವಯಸ್ಸಿನ ಮಿತಿ, ಶುಲ್ಕ, ಅಗತ್ಯ ದಾಖಲೆಗಳು ಇತ್ಯಾದಿಗಳಂತಹ ಪ್ರಮುಖ ಮಾಹಿತಿಯನ್ನು ಗಮನಿಸಿ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ:
ಅಧಿಸೂಚನೆಯಲ್ಲಿ ಅಥವಾ ವೆಬ್‌ಸೈಟ್‌ನಲ್ಲಿ “ಆನ್‌ಲೈನ್‌ನಲ್ಲಿ ಅನ್ವಯಿಸು(Apply Online)” ಲಿಂಕ್ ಕ್ಲಿಕ್ ಮಾಡಿ.

ವೈಯಕ್ತಿಕ, ಶೈಕ್ಷಣಿಕ ಮತ್ತು ವೃತ್ತಿಪರ ವಿವರಗಳನ್ನು ಭರ್ತಿ ಮಾಡಿ.

ಭಾವಚಿತ್ರಗಳು ಮತ್ತು ಸಹಿಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ.

ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ.

ಒದಗಿಸಿದ ಪಾವತಿ ಗೇಟ್‌ವೇ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.

ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ ಮತ್ತು ಸಲ್ಲಿಸಿ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  22-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  30-04-2024

 

ಪ್ರಮುಖ ಲಿಂಕುಗಳು 
ಹೋಮ್ ಪೇಜ್
ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ  
ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ.

WhatsApp Group Join Now
Telegram Group Join Now

About

Editor | M.Sc CS

Leave a Reply

Your email address will not be published. Required fields are marked *