Home » Trending News » ಲೇಬರ್‌ ಕಾರ್ಡ್‌: ನೋಂದಣಿ ಪ್ರಕ್ರಿಯೆ ಆರಂಭ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ..! Labour Card Karnataka Application 2024

ಲೇಬರ್‌ ಕಾರ್ಡ್‌: ನೋಂದಣಿ ಪ್ರಕ್ರಿಯೆ ಆರಂಭ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ..! Labour Card Karnataka Application 2024

WhatsApp Group Join Now
Telegram Group Join Now
labour

ಕಾರ್ಮಿಕ ಇಲಾಖೆಯಿಂದ ದೊರೆಯುವ ಈ ಯೋಜನೆಗಳು ಬಹಳಷ್ಟು ಜನರಿಗೆ ಉಪಯೋಗವಾಗಲಿವೆ.
ಹಾಗೆಯೇ, ಸರ್ಕಾರದಿಂದ ದೊರೆಯುವ ಈ ಸೌಲಭ್ಯವನ್ನು ಪಡೆಯಲು ಕಾರ್ಮಿಕರು ಅಥವಾ ಅರ್ಹ ಅಭ್ಯರ್ಥಿ ಲೇಬರ್ ಕಾರ್ಡ್ ಅನ್ನು ಹೊಂದಬೇಕು. ಅವಾಗ ಮಾತ್ರ ಸರ್ಕಾರ ನೀಡುತ್ತಿರುವ ಈ ಎಲ್ಲ ಸೌಲಭ್ಯ ಪಡೆಯಲು ಸಾಧ್ಯ. ಹಾಗಾಗಿ ಲೇಬರ್ ಕಾರ್ಡ್ ದೊರೆಯಬೇಕಿದ್ದರೆ ಅಥವಾ ಈoo ಯೋಜನೆಗಳನ್ನು ಪಡೆಯಲು ಕಾರ್ಮಿಕರು ನೋಂದಣಿ (Labour Card ) ಕಡ್ಡಾಯವಾಗಿರುತ್ತದೆ. ಮತ್ತು ಅವರು ನೋಂದಣಿ ಮಾಡುವ ಮೂಲಕ ಅದನ್ನು ಪಡೆಯಬಹದು.

ಲೇಬರ್ ಕಾರ್ಡ್ ಪಡೆಯಲು ನೋಂದಣಿ  ಪ್ರಾರಂಭ :

ಈಗಾಗಲೇ ಸರ್ಕಾರದಿಂದ ಜಾರಿಗೆ ಆಗಿರುವ ಲೇಬರ್ ಕಾರ್ಡ್ ಮತ್ತು ಅದರ ಅಡಿಯಲ್ಲಿ ದೊರೆಯುವ ಯೋಜನೆಗಳನ್ನು ಪಡೆಯಲು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಒಂದು ನೋಂದಣಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ನೋಂದಣಿ ನಡೆಯುವ ಸ್ಥಳ ಹಾಗೂ ದಿನಾಂಕದ ವಿವರ ಈ ಕೆಳಗೆ ನೀಡಲಾಗಿದೆ.

ಸ್ಥಳ ( Place ) : ಬೆಂಗಳೂರು ನಗರದ ಸ್ಥಳದಲ್ಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಅಭಿಯಾನವು ನಡೆಯಲಿದೆ. ನೋಂದಣಿ ಪ್ರಕ್ರಿಯೆಯನ್ನು ಮಾಡಲು ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರ ಕಛೇರಿಗಳಿಗೆ ಭೇಟಿ ನೀಡಬಹುದು.

Picsart 23 06 10 13 55 14 667

ಇದರಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿವೆ, ಅವುಗಳೆಂದರೆ :

ಅರ್ಹ ಅಭ್ಯರ್ಥಿಗಳು ಲೇಬರ್ ಕಾರ್ಡ್ ಅನ್ನು ನೊಂದಣಿ ಮಾಡುವ ಮೂಲಕ ಪಡೆದುಕೊಂಡು ಈ ಕೆಳಗೆ ನೀಡಲಾದ ಎಲ್ಲ ಯೋಜನೆಗಳ ಸೌಲಭ್ಯಗಳನ್ನು ( karnataka labour card schemes ) ಪಡೆಯಬಹುದು.

ಅಪಘಾತ ಪರಿಹಾರ
ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
ತಾಯಿ ಮಗು ಸಹಾಯಹಸ್ತಾ
ದುರ್ಬಲತೆ ಪಿಂಚಣಿ ಮುಂದುವರಿಕೆ
ಪಿಂಚಣಿ ಮುಂದುವರಿಕೆ
ಹೆರಿಗ ಸೌಲಭ್ಯ
ದುರ್ಬಲತೆ ಪಿಂಚಣಿ ಸಾಲಭ್ಯ
ಶೈಕ್ಷಣಿಕ ಸಹಾಯಧನ
ಅಂತ್ಯಕ್ರಿಯೆ ವೆಚ್ಚ
ಮದುವೆ ಸಹಾಯಧನ
ವೈದ್ಯಕೀಯ ಸಹಾಯಧನ
ಪಿಂಚಣಿ ಸೌಲಭ್ಯ
ಶ್ರಮಸಾಮರ್ಥ್ಯ ಟೂಲ್ ಕಿಟ್
ಉಚತ ಸಾರಿಗೆ ಬಸ್‌ ಪಾಸ್‌ ಸೌಲಭ್ಯ.

 

ಲೇಬರ್ ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆ:

ಲೇಬರ್ ಕಾರ್ಡ್ ಅನ್ನು ಪಡೆಯುವ ಅಥವಾ ನೋಂದಣಿ ಮಾಡುವ ಮೊದಲು ಅರ್ಹ ಅಭ್ಯರ್ಥಿಯು ಮೊದಲು 12 ತಿಂಗಳುಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. ಹಾಗಾದರೆ ಮಾತ್ರ ಅವರಿಗೆ ಸರ್ಕಾರದಿಂದ ದೊರೆಯುವ ಈ ಯೋಜನೆಗಳನ್ನು ಪಡೆಯಲು ಸಾಧ್ಯ.

ಲೇಬರ್ ಕಾರ್ಡ್ ಪಡೆಯಲು ಇರಬೇಕಾದ ವಯೋಮಿತಿ ( Age limit ) :

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಲು ವಯೋಮಿತಿಯು 18 ರಿಂದ 60 ವರ್ಷದೊಳಗಿರಬೇಕು.

ಲೇಬರ್ ಕಾರ್ಡ್ ಗೆ ನೋಂದಣಿ ಮಾಡಿಕೊಳ್ಳಲು ಬೇಕಾಗುವ ಮುಖ್ಯ ದಾಖಲೆಗಳ ( Important documents ) ವಿವರ:

90 ದಿನಗಳ ಉದ್ಯೋಗ ದೃಢೀಕರಣ ಪತ್ರ.
ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಪ್ರತಿ.
ಅರ್ಜಿದಾರರ ಬ್ಯಾಂಕ್‌ ಪಾಸ್ ಬುಕ್ ಪ್ರತಿ.
ಅರ್ಜಿದಾರರ ಆಧಾರ್ ಕಾರ್ಡ್‌’ಗೆ ಲಿಂಕ್ ಇರುವ ದೂರವಾಣಿ ಸಂಖ್ಯೆ.

ಇದರಲ್ಲಿ ನಿಮಗೆ ಇನ್ನಾವುದೇ ಇತರ ಮಾಹಿತಿ ಬೇಕಿದ್ದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ( For More Information ) ಈ ಕೆಳಗೆ ನೀಡಿರುವ ಮಾಹಿತಿಯನ್ನು ಸಂರ್ಕಿಸಬಹುದು :

ನೋಂದಣಿ ಪ್ರಕ್ರಿಯೆಯಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಾರ್ಮಿಕ ಅಧಿಕಾರಿಗಳು & ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು. ಹಾಗೆಯೇ ಸಹಾಯವಾಣಿ ಸಂಖ್ಯೆ 155214 ಕರೆ ಮಾಡಿ ಮಾಹಿತಿ ಪಡೆಯಬಹುದು.

ಹಾಗೆಯೇ ಯಾವುದೇ ಮಾಹಿತಿ ಬೇಕಿದ್ದಲ್ಲಿ ಇಲಾಖೆಯ ಪ್ರಮುಖ ಲಿಂಕ್‌ಗಳು ( website links ) ಲಭ್ಯವಿದೆ ಅವುಗಳಲಿಗೆ ಭೇಟಿ ನೀಡಿ ಮಾಹಿತಿ ತಿಳಿದು ಕೊಳ್ಳಬಹುದು.

ಇಲಾಖೆಯ ವೆಬ್‌ಸೈಟ್‌ :
karbwwb.karnataka.gov.in

ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು :

ಕಾರ್ಮಿಕ ಕಾರ್ಡ್ ಕೇವಲ ಗುರುತಿನ ಚೀಟಿಯಲ್ಲ, ಅದು ದುಡಿಯುವ ವರ್ಗದ ಭದ್ರಕೋಟೆ. ಈ ಕಾರ್ಡ್ ಧಾರಕರಿಗೆ ಲಭ್ಯವಿರುವ ಸೌಲಭ್ಯಗಳ ಪಟ್ಟಿ :
ಅಪಘಾತ ಪರಿಹಾರ: ದುರದೃಷ್ಟಕರ ಘಟನೆಗಳಲ್ಲಿ ಭದ್ರತೆ.

ವೈದ್ಯಕೀಯ ಸಹಾಯಧನ: ಚಿಕಿತ್ಸೆಗೆ ಚಿಂತೆಯಿಲ್ಲ.

ತಾಯಿ ಮಗು ಸಹಾಯ ಹಸ್ತ: ಜನನದ ಸಮಯದಲ್ಲಿ ಆರ್ಥಿಕ ನೆರವು.

ಮದುವೆ ಸಹಾಯಧನ: ಹೊಸ ಜೀವನಕ್ಕೆ ಒಂದು ಕೈತುಂಬ ಭರವಸೆ.

ದುರ್ಬಲತೆ ಪಿಂಚಣಿ: ವೃದ್ಧಾಪ್ಯದಲ್ಲಿ ಜೀವನ ನಡೆಸಲು ಒಂದು ಆಸರೆ.

ಪಿಂಚಣಿ ಮುಂದುವರಿಕೆ: ಭವಿಷ್ಯದ ಭದ್ರತೆಗೆ ಖಾತರಿ.

ಶೈಕ್ಷಣಿಕ ಸಹಾಯಧನ: ಮಕ್ಕಳ ಶಿಕ್ಷಣಕ್ಕೆ ಉತ್ತೇಜನ.

ಹೆರಿಗೆ ಸೌಲಭ್ಯ: ಗರ್ಭಿಣಿ ಮಹಿಳೆಯರಿಗೆ ಆರೈಕೆ.

ಅಂತ್ಯಕ್ರಿಯೆ ವೆಚ್ಚ: ದುಃಖದ ಸಮಯದಲ್ಲಿ ಒಂದು ನೆರವು.

ಉಚಿತ ಸಾರಿಗೆ ಬಸ್ ಪಾಸ್: ಓಡಾಟಕ್ಕೆ ಯಾವುದೇ ಖರ್ಚಿಲ್ಲ.

ಶ್ರಮಸಮರ್ಥ್ಯ ಟೂಲ್ ಕಿಟ್: ಕೆಲಸಕ್ಕೆ ಉಪಯುಕ್ತ ಸಾಧನಗಳ ಉಡುಗೊರೆ

ವಿಶೇಷ ಸೂಚನೆ ( Important notice ) :

ಕಟ್ಟಡ ಕಾರ್ಮಿಕರಲ್ಲದವರು ನಕಲಿ
ದಾಖಲಾತಿ ಸೃಷ್ಟಿಸಿ ಮಂಡಳಿಯು ನೀಡುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದಾರೆ. ಇದು ಎಲ್ಲರಿಗೂ ಅನ್ವಯಿಸುತ್ತದೆ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ.

 

WhatsApp Group Join Now
Telegram Group Join Now

About

Editor | M.Sc CS

Leave a Reply

Your email address will not be published. Required fields are marked *