Home » Karnataka Jobs » ಪಿಯುಸಿ, ಪದವಿ ಆದವರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | KEA Recruitment 2023

ಪಿಯುಸಿ, ಪದವಿ ಆದವರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | KEA Recruitment 2023

WhatsApp Group Join Now
Telegram Group Join Now
Picsart 23 07 08 16 40 05 701 scaled

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ಲೇಖನದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority) 2023 ರ ನೇಮಕಾತಿಯ ಅಡಿಯಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೇ     ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.

–  ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ನೇಮಕಾತಿ (Recruitment) 2023 ರ ಅವಲೋಕನ  –

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು ಇಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು. ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ :

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು:
ಇಲಾಖೆ ಹೆಸರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ವರ್ಷ 2023
ಒಟ್ಟು ಹುದ್ದೆಗಳು  186
ಅಪ್ಲಿಕೇಶನ್ ವಿಧಾನ ಆನ್ಲೈನ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ನೇಮಕಾತಿ 2023ರ ಖಾಲಿ ಹುದ್ದೆಗಳ ವಿವರ :

ಕಲ್ಯಾಣ ಅಧಿಕಾರಿ (ಗ್ರೂಪ್ -ಸಿ) : 12
ಕ್ಷೇತ್ರ ನಿರೀಕ್ಷಕರು (ಗ್ರೂಪ್ -ಸಿ) :60
ಪ್ರಥಮ ದರ್ಜೆ ಸಹಾಯಕರು (ಗ್ರೂಪ್ -ಸಿ) : 12
ಆಪ್ತ ಸಹಾಯಕರು (ಗ್ರೂಪ್ -ಸಿ) : 02
ದ್ವಿತೀಯ ದರ್ಜೆ ಸಹಾಯಕರು (ಗ್ರೂಪ್ -1) : 100
ಒಟ್ಟು ಹುದ್ದೆಗಳ ಸಂಖ್ಯೆ : 186
ಉದ್ಯೋಗ ಸ್ಥಳ : ಕರ್ನಾಟಕ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ನೇಮಕಾತಿ – 2023ಕ್ಕೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ :

ಕಲ್ಯಾಣ ಅಧಿಕಾರಿ ಅಭ್ಯರ್ಥಿಯು:  ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ಕ್ಷೇತ್ರ ನಿರೀಕ್ಷಕರು : ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ಪ್ರಥಮ ದರ್ಜೆ ಸಹಾಯಕರು : ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ಆಪ್ತ ಸಹಾಯಕರು : ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪದವಿ
ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಜೊತೆಗೆ ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್ ಹೊಂದಿರಬೇಕು ಮತ್ತು ಟೈಪಿಂಗ್ ಜ್ಞಾನ ಇರಬೇಕು.

ದ್ವಿತೀಯ ದರ್ಜೆ ಸಹಾಯಕರು : ಅಭ್ಯರ್ಥಿಯು ಪಿಯುಸಿ ಅಥವಾ ತತ್ಸಮಾನ ಅರ್ಹತೆಯನ್ನು ಪಡೆದಿರಬೇಕು.

ವಯೋಮಿತಿ :

ಕನಿಷ್ಠ 18 ವರ್ಷಗಳಿಂದ ಕೆಳಗಿನ ಗರಿಷ್ಠ ವರ್ಷಗಳನ್ನು ಮೀರಿರಬಾರದು :
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ : 35 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : 35 ವರ್ಷಗಳು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಪ್ರವರ್ಗ-1 ಅಭ್ಯರ್ಥಿಗಳಿಗೆ : 40 ವರ್ಷಗಳು

ಸಂಬಳದ ಪ್ಯಾಕೇಜ್ ಎಷ್ಟು?:

ಕಲ್ಯಾಣ ಅಧಿಕಾರಿ (ಗ್ರೂಪ್ -ಸಿ) : 37900-70850
ಕ್ಷೇತ್ರ ನಿರೀಕ್ಷಕರು (ಗ್ರೂಪ್ -ಸಿ) : 33450-62600
ಪ್ರಥಮ ದರ್ಜೆ ಸಹಾಯಕರು (ಗ್ರೂಪ್ -ಸಿ) : 27650-52650
ಆಪ್ತ ಸಹಾಯಕರು (ಗ್ರೂಪ್ -ಸಿ) : 27650-52650
ದ್ವಿತೀಯ ದರ್ಜೆ ಸಹಾಯಕರು (ಗ್ರೂಪ್ -1) : 21400-42000

ಆಯ್ಕೆ ಪ್ರಕ್ರಿಯೆ :

ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ

ಅರ್ಜಿ ಶುಲ್ಕ :

ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು(2ಎ, 2ಬಿ, 3ಎ, 3ಬಿ) : ರೂ. 1000/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 : ರೂ. 750/-
ಅಂಗವಿಕಲ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರು : ರೂ. 250/

ಅರ್ಜಿಯನ್ನು ಹೀಗೆ ಸಲ್ಲಿಸಿ :

ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ತೋರಿಸುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ, ಪ್ರತ್ಯೇಕ ಅರ್ಜಿ ಸಲ್ಲಿಸಬೇಕು ಹಾಗೂ ಅಂತಹ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಶುಲ್ಕವನ್ನು ಪಾವತಿಸಬೇಕು..

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  23-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  22-07-2023

 

ಪ್ರಮುಖ ಲಿಂಕುಗಳು 
ಹೋಮ್ ಪೇಜ್
ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ  
ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ

WhatsApp Group Join Now
Telegram Group Join Now

About

Editor | M.Sc CS

Leave a Reply

Your email address will not be published. Required fields are marked *