Home » Trending News » SSLC Result: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಈ ದಿನಾಂಕದಂದು ಪ್ರಕಟ

SSLC Result: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಈ ದಿನಾಂಕದಂದು ಪ್ರಕಟ

WhatsApp Group Join Now
Telegram Group Join Now
sslc result

2023 – 24ನೇ ಸಾಲಿನಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ರಿಸಲ್ಟ್ ನೋಡಲು ಕಾಯುತ್ತಿದ್ದಾರೆ. ಹೀಗೆ ಫಲಿತಾಂಶ ಯಾವಾಗ ಬರುತ್ತೆ? ಅಂತಾ ಕಾಯುತ್ತಿದ್ದ, ಎಸ್‌ಎಸ್‌ಎಲ್‌ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ ಇಲ್ಲಿದೆ. ಎಸ್‌ಎಸ್‌ಎಲ್‌ಸಿ ರಿಸಲ್ಟ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಲಿಯು ಏಪ್ರಿಲ್ 15 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯವನ್ನು ಆರಂಭಿಸಿದ್ದು, ಈ ಪರೀಕ್ಷೆಯ ರಿಸಲ್ಟ್‌ ಅನ್ನು ಮೇ 08, 2024 ರಂದು ಪ್ರಕಟಿಸಲಾಗುವುದು ಎಂದು ಅಧಿಕೃತ ಮೂಲಗಳ ಪ್ರಕಾರ ಮಾಹಿತಿ ತಿಳಿದಿದೆ. ಮುಂದುವರೆದು, ಒಂದು ವೇಳೆ ರಿಸಲ್ಟ್‌ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವ ಕಾರ್ಯದಲ್ಲಿ ವಿಳಂಬವಾದಲ್ಲಿ ಒಂದೆರಡು ದಿನಗಳು ವ್ಯತ್ಯಾಸವಾಗಬಹುದು ಅಷ್ಟೆ. ಒಂದು ವೇಳೆ ಅದಕ್ಕೂ ಮೊದಲು ಸಾಧ್ಯವಾದಲ್ಲಿ ಫಲಿತಾಂಶ ಬಿಡುಗಡೆ ಆಗಲಿದೆ ಎಂದಿವೆ ಮೂಲಗಳು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು & 4.28 ಲಕ್ಷ ಬಾಲಕಿಯರು ಸೇರಿದ್ದರು. ಇದೀಗ, ಇವರೆಲ್ಲರ ಭವಿಷ್ಯ ನಿರ್ಧಾರ ಮಾಡುವ ಫಲಿತಾಂಶ ಬಿಡುಗಡೆ ಆಗಲು ದಿನಗಣನೆ ಆರಂಭ ಆಗಿದೆ. ಮೇ 8 ರಂದು ಈಗ ಫಲಿತಾಂಶ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಫಲಿತಾಂಶ ನೋಡೋದಕ್ಕೆ,ಕರ್ನಾಟಕ ಶಾಲೆ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು. ಇದಕ್ಕೆ ನೀವು kseab.karnataka.gov.in ಗೆ ಭೇಟಿ ನೀಡಬಹುದು.

 

WhatsApp Group Join Now
Telegram Group Join Now

About

Editor | M.Sc CS

Leave a Reply

Your email address will not be published. Required fields are marked *