Home » Karnataka Jobs » ₹ 28,425 ವೇತನದೊಂದಿಗೆ ಬ್ಯಾಂಕ್ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

₹ 28,425 ವೇತನದೊಂದಿಗೆ ಬ್ಯಾಂಕ್ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

WhatsApp Group Join Now
Telegram Group Join Now
bank jobs

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ಲೇಖನದಲ್ಲಿ ಕರ್ನಾಟಕ ಅಪೆಕ್ಸ್ ಬ್ಯಾಂಕ್ (karnataka Apex bank) ನೇಮಕಾತಿಯ ಕುರಿತು ತಿಳಿಸಲಾಗಿದೆ. ಈ ನೇಮಕಾತಿಯಲ್ಲಿ 93 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ

-ಕರ್ನಾಟಕ ಅಪೆಕ್ಸ್ ಬ್ಯಾಂಕ್ ನೇಮಕಾತಿ  2024 ರ(karnataka Apex bank Recruitments 2024) ಅವಲೋಕನ –

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ., ಬೆಂಗಳೂರು, ಇಲ್ಲಿ ಖಾಲಿಯಿರುವ ಬ್ಯಾಂಕ್ ಸಹಾಯಕರ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ (Online) ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಧಿಸೂಚನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ದಯವಿಟ್ಟು ಓದಿ, ಪಠ್ಯಕ್ರಮ, ವಯಸ್ಸಿನ ಮಿತಿ, ವಿದ್ಯಾರ್ಹತೆ, ಸಂಬಳ ಮತ್ತು ಎಲ್ಲಾ ಇತರ ಮಾಹಿತಿಯ ಸಂಪೂರ್ಣ ಇದರಕ್ಕಾಗಿ ಉದ್ಯೋಗ ಅಧಿಸೂಚನೆ ಅನ್ನು ಓದಿ ಮತ್ತು ನಂತರ ಆನ್‌ಲೈನ್‌ನಲ್ಲಿ ಅನ್ವಯಿಸಿ, ಅಪೇಕ್ಸ್ ಬ್ಯಾಂಕಿಗೆ ಆನ್‌ಲೈನ್ ಅರ್ಜಿ ನಮೂನೆ 2024 ಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನೇರ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು:
ಇಲಾಖೆ ಹೆಸರು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್
ಹುದ್ದೆಗಳ ಹೆಸರು ಬ್ಯಾಂಕ್ ಸಹಾಯಕ
ವರ್ಷ 2024
ಒಟ್ಟು ಹುದ್ದೆಗಳು  93
ಅಪ್ಲಿಕೇಶನ್ ವಿಧಾನ online

Picsart 23 06 10 14 01 54 141

ಕರ್ನಾಟಕ ಅಪೆಕ್ಸ್ ಬ್ಯಾಂಕ್ ನೇಮಕಾತಿಯ ಖಾಲಿ ಹುದ್ದೆಗಳ ವಿವರ : 

ಬ್ಯಾಂಕ್ ಹೆಸರು : ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ( ಕರ್ನಾಟಕ ಅಪೆಕ್ಸ್ ಬ್ಯಾಂಕ್ )
ಹುದ್ದೆಯ ಹೆಸರು: ಬ್ಯಾಂಕ್ ಸಹಾಯಕ
ಒಟ್ಟು ಹುದ್ದೆಗಳ  ಸಂಖ್ಯೆ: 93
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ

ವಿದ್ಯಾರ್ಹತೆ:

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದ ಯಾವುದೇ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರತಕ್ಕದ್ದು. ಕಂಪ್ಯೂಟರ್ ಅಪರೇಷನ್ ಮತ್ತು ಅಪ್ಲಿಕೇಷನ್‌ಲ್ಲಿ ಉತ್ತಮ ಜ್ಞಾನವನ್ನು ಹೊಂದಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸು ತುಂಬಿರಬೇಕು. ಈ ಕೆಳಕಂಡಂತೆ ಗರಿಷ್ಠ ವಯೋಮಿತಿ ಮೀರಿರಬಾರದು.

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ ವಯೋಮಿತಿ:
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು : 40 ವರ್ಷಗಳು

ಇತರೆ ಹಿಂದುಳಿದ ಜಾತಿ/ಹಿಂದುಳಿದ ವರ್ಗಗಳು : 38 ವರ್ಷಗಳು

ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷಗಳು
ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಆಯಾ ವರ್ಗ/ಪ್ರವರ್ಗಗಳನ್ವಯ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ನಿಗದಿಪಡಿಸಲಾಗಿದೆ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ, ಅವರು “ಸೇವೆ ಸಲ್ಲಿಸಿದ ಅವಧಿಯ” ಜೊತೆಗೆ ಹೆಚ್ಚುವರಿ 03 ವರ್ಷಗಳ ರಿಯಾಯಿತಿಯನ್ನು ನೀಡಲಾಗುವುದು.

Picsart 23 06 10 13 55 14 667

ಸಂಬಳದ ಪ್ಯಾಕೇಜ್ ಎಷ್ಟು ?

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ.28,425 – 87,125/- ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ :

ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಶುಲ್ಕ :

SC/ST/ Cat-I ಅಭ್ಯರ್ಥಿಗಳು: ರೂ.500/-
ಸಾಮಾನ್ಯ/OBC ಅಭ್ಯರ್ಥಿಗಳು: ರೂ.1000/-

ಅರ್ಜಿಯನ್ನು ಹೀಗೆ ಸಲ್ಲಿಸಿ :

ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ,  ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ(ಅನ್ವಯಿಸಿದ್ದಲ್ಲಿ)

ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  07-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  06-04-2024

 

ಪ್ರಮುಖ ಲಿಂಕುಗಳು 
ಹೋಮ್ ಪೇಜ್
ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ  
ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ.

WhatsApp Group Join Now
Telegram Group Join Now

About

Editor | M.Sc CS

2 thoughts on “₹ 28,425 ವೇತನದೊಂದಿಗೆ ಬ್ಯಾಂಕ್ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

  1. ನಾನು SKDRDP ಯಲ್ಲಿ 10 ವರ್ಷಗಳಿಂದ ಕಂಪ್ಯೂಟರ್ ಆಪರೇಟರ್ಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಣಕಾಸಿನ ತೊಂದರೆ ಇದೆ. ನನಗೆ ಕರ್ನಾಟಕ ರಾಜ್ಯ ಅಫೆಕ್ಸ್ ಬ್ಯಾಂಕ್ ನಲ್ಲಿ ಕೆಲಸ ಮಾಡಲು ಆಸಕ್ತಿ ಇದೆ. ಆದ ಕಾರಣ, ನನಗೆ ಬ್ಯಾಂಕ್ ಸಹಾಯಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ ಕೊಡುವಿರೆ ಈ ಮೂಲಕ ತಮ್ಮಲ್ಲಿ ಕಳಕಳಿಯ ವಿನಂತಿ.

  2. ಮಾನ್ಯರೇ ನಾನು ಡಿಗ್ರೀ ಪದವೀಧರೆಯಾಗಿದ್ದು SKDRDP ಯಲ್ಲಿ 10 ವರ್ಷಗಳಿಂದ ಕಂಪ್ಯೂಟರ್ ಆಪರೇಟರ್ಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಣಕಾಸಿನ ತೊಂದರೆ ಇದೆ. ನನಗೆ ಕರ್ನಾಟಕ ರಾಜ್ಯ ಅಫೆಕ್ಸ್ ಬ್ಯಾಂಕ್ ನಲ್ಲಿ ಕೆಲಸ ಮಾಡಲು ಆಸಕ್ತಿ ಇದೆ. ಆದ ಕಾರಣ, ನನಗೆ ಬ್ಯಾಂಕ್ ಸಹಾಯಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ ಕೊಡುವಿರೆ ಈ ಮೂಲಕ ತಮ್ಮಲ್ಲಿ ಕಳಕಳಿಯ ವಿನಂತಿ.

Leave a Reply

Your email address will not be published. Required fields are marked *