Home » Trending News » ಈ ಜಿಲ್ಲೆಯವರಿಗೆ 4ನೇ ಕಂತಿನ 2000/- ಹಣ ಬಿಡುಗಡೆ.. ಹಣ ಬರದೇ ಇದ್ದವರಿಗೆ ಈ ದಿನಾಂಕದೊಳಗೆ ಜಮಾ – ಸಿ. ಎಂ ಸಿದ್ದರಾಮಯ್ಯ

ಈ ಜಿಲ್ಲೆಯವರಿಗೆ 4ನೇ ಕಂತಿನ 2000/- ಹಣ ಬಿಡುಗಡೆ.. ಹಣ ಬರದೇ ಇದ್ದವರಿಗೆ ಈ ದಿನಾಂಕದೊಳಗೆ ಜಮಾ – ಸಿ. ಎಂ ಸಿದ್ದರಾಮಯ್ಯ

WhatsApp Group Join Now
Telegram Group Join Now
gruhalakshmi 4

ನಮ್ಮ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ (Gruha Lakshmi scheme) ಚಾಲನೆ ಸಿಕ್ಕಿದ್ದು, ಸಾಕಷ್ಟು ಮಹಿಳೆಯರಿಗೆ ಯೋಜನೆಯ ಹಣ ತಲುಪಿದೆ. ಆದರೆ ಇನ್ನಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಇನ್ನು ಸಿಕ್ಕಿಲ್ಲ. ಗೃಹಲಕ್ಷ್ಮಿ ಯೋಜನೆ ಹಣ ಬಾರದ ಎಲ್ಲ ಯಜಮಾನಿಯರಿಗೆ ಇಂದು ಸಿಎಂ ಸಿದ್ದರಾಮಯ್ಯನವರು ಸಿಹಿ ಸುದ್ದಿಯನ್ನು ನೀಡಿದ್ದಾರೆ.. ಹೌದು ಗೃಹಲಕ್ಷ್ಮಿ ಯೋಜನೆ (Gruha Lakshmi Scheme) 4ನೇ ಕಂತಿನ ಹಣ ಬಿಡುಗಡೆಯಾಗುತ್ತಿದ್ದರೂ ಇನ್ನೂ ಕೂಡ ಹಲವರಿಗೆ ಮೊದಲ ಕಂತಿನ ಹಣ ಕೂಡ ಬಿಡುಗಡೆಯಾಗಿಲ್ಲ. ಇನ್ನು ಮುಂದೆ ಪ್ರತಿ ಗ್ರಾಮ ಪಂಚಾಯಿತಿ(Gram panchayath) ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್(Gruhalakshmi adalat) ನಡೆಯಲಿದೆ. ಈ ಯೋಜನೆಯು 2 ಲಕ್ಷ ಜನರಿಗೆ ಗೃಹಲಕ್ಷ್ಮಿಯ ಹಣ ಬರದೇ ಇರುವ ಕಾರಣ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅದಾಲತ್ ನಡೆಸಿ, ತೊಂದರೆಗಳನ್ನು ಬಗೆಹರಿಸಿ ಎಲ್ಲಾ ಗೃಹಲಕ್ಷ್ಮಿಯರಿಗೆ ಹಣ ತಲುಪುವಂತೆ ಮಾಡಲಾಗುವುದು

ಗೃಹ ಲಕ್ಶ್ಮಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ:

 ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಮುಖ್ಯಮಂತ್ರಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿ, ಬ್ಯಾಂಕ್ ಖಾತೆ ಹಾಗೂ ಆಧಾರ್ ಲಿಂಕ್ ಹೀಗೆ ಮತ್ತಿತರ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ ಬರದಿದ್ದರೆ ಅಂತಹ ಸಮಸ್ಯೆಗಳನ್ನು ಗ್ರಾಮ ಮಟ್ಟದಲ್ಲಿ ಅದಾಲತ್ ನಡಸಿ ಡಿಸೆಂಬರ್ ಒಳಗೆ ಅವುಗಳೆಲ್ಲವುಗಳನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಿದರು. ಹಾಗಾಗಿ ಇನ್ನು ಗೃಹಲಕ್ಷ್ಮಿಯ ಹಣ ಬಂದಿಲ್ಲ ಎಂದು ಚಿಂತಿಸುತ್ತಿರುವವರಿಗೆ ಇದು ಒಂದು ಸಂತಸದ ಸುದ್ದಿಯಾಗಿದೆ. ಎಲ್ಲಾ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಡಿಸೆಂಬರ್ ಒಳಗಾಗಿ ಖಾತೆಗೆ ಬಂದು ಜಮಾ ಆಗಲಿದೆ.

Picsart 23 06 10 14 01 54 141

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ :

ಇಲ್ಲಿಯವರೆಗೂ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿಗೆ 1.17 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಅದರಲ್ಲಿ, 1.10 ಕೋಟಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೆರಹಣವನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಎರಡು ಲಕ್ಷ ಫಲಾನುಭವಿಗಳಿಗೆ ಕೆಲವು ತೊಂದರೆಗಳಿಂದ ಹಣ ವರ್ಗಾವಣೆ ಆಗುತ್ತಿಲ್ಲ, ಆ ತೊಂದರೆಗಳನ್ನು ಬಗೆಹರಿಸುವ ಪ್ರಕ್ರಿಯೆ ನಡೆಯುತ್ತಿದೆ. ಬ್ಯಾಂಕ್ ಖಾತೆಯ(Bank Account) ಮಾಹಿತಿಯಲ್ಲಿ ಗೊಂದಲ, ಆಧಾರ್‌ ಲಿಂಕ್‌ ಆಗದಿರುವುದು ಮೊದಲಾದ ಕಾರಣಗಳಿಂದ ಹಣ ವರ್ಗಾವಣೆಗೆ ತೊಂದರೆಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳನ್ನು ಬ್ಯಾಂಕಿಗೇ ಕರೆದೊಯ್ದು ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಅಷ್ಟೇ ಅಲ್ಲದೆ ಡಿಸೆಂಬರ್ ಒಳಗಾಗಿ ಈ ಎಲ್ಲಾ ಕುಂದುಕೊರತೆಗಳನ್ನು ಬಗೆಹರಿಸಿ ಉಳಿದ ಎರಡು ಲಕ್ಷ ಫಲಾನುಭವಿಗಳಿಗೆ ಹಾಗೂ ಎಲ್ಲರಿಗೂ ಕೂಡ ಗ್ಯಾರೆಂಟಿ ಗೃಹಲಕ್ಷ್ಮಿ ಹಣವನ್ನು ಖಾತೆಗೆ ಬರುವಂತೆ ಮಾಡಲಾಗುವುದು ಎಂದು ಸಿದ್ದರಾಮಯ್ಯನವರು ಸಂದೇಶವನ್ನು ನೀಡಿದ್ದಾರೆ.

4ನೇ ಕಂತಿನ ಹಣ ಜಮಾ ಆಗಿರುವ ಜಿಲ್ಲೆಗಳು

ಚಿತ್ರದುರ್ಗ, ಬೆಂಗಳೂರು, ಕೋಲಾರ, ಮಂಡ್ಯ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾಸನ, ಬಿಜಾಪುರ, ಉತ್ತರ ಕನ್ನಡ, ದಾವಣಗೆರೆ, ಗದಗ, ರಾಯಚೂರು, ಕಲಬುರಗಿ, ಮೈಸೂರು.

ಡಿಸೆಂಬರ್ ನಲ್ಲೂ ಹಣ ಬಾರದೇ ಇದ್ದರೆ ಈ ಕೆಲಸ ಮಾಡಿ

ಹಣ ಬಾರದೇ ಇದ್ದರೆ ಇನ್ನು ಮುಂದೆ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ತಕ್ಷಣವೇ ನೀವು ಅದಾಲತ್ ದೂರು ಸಲ್ಲಿಸಬಹುದು. ಗ್ರಾಮ ಪಂಚಾಯತ್ ಸಿಬ್ಬಂದಿ ನಿಮ್ಮ ಮನೆಗೆ ಬಂದು ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹಾರ ಮಾಡಲಿದ್ದಾರೆ. ಯಾರ ಖಾತೆಗೆ ಹಣ ಬಂದಿಲ್ಲವೋ ಅವರ ಮನೆ ಬಾಗಿಲಿಗೆ ಅಧಿಕಾರಿಗಳು ಹೋಗಿ ಸಮಸ್ಯೆ ಪರಿಹರಿಸಿ ಖಾತೆಗೆ ಹಣ ಜಮಾ ಆಗುವಂತೆ ಮಾಡುತ್ತಾರೆ, ಅಂಗನವಾಡಿ ಸಹಾಯಕಿಯರು ಹಾಗೂ ಗ್ರಾಮ ಪಂಚಾಯತ್ ಕಡೆಯಿಂದ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ. ಮಹಿಳೆಯರ ಖಾತೆಗೆ ಹಣ ಜಮಾ ಆಗದೆ ಇದ್ದಲ್ಲಿ ತಾವೇ ಸ್ವತಃ ಬ್ಯಾಂಕಿಗೆ ಕರೆದುಕೊಂಡು ಹೋಗಿ ಹಾಗೂ ಮತ್ತಿತರ ದಾಖಲೆಗಳು ಸರಿಯಾಗಿ ಮಾಡಿಕೊಡುತ್ತಾರೆ.ಅದಾಲತ್ ಪ್ರಕ್ರಿಯೆ ಮೂಲಕ ಗ್ರಾಮ ಪಂಚಾಯತ್ ಸಿಬ್ಬಂದಿ ಯಾವ ಮಹಿಳೆಯ ಖಾತೆಗೆ ಹಣ ಜಮಾ ಆಗಿಲ್ಲ ಎನ್ನುವ ವಿವರವನ್ನು ಸರ್ಕಾರಕ್ಕೆ ನೀಡಬೇಕು.

Picsart 23 06 10 13 55 14 667

ಪ್ರಮುಖ ಲಿಂಕುಗಳು 
ಹೋಮ್ ಪೇಜ್
ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ  
ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 

WhatsApp Group Join Now
Telegram Group Join Now

About

Editor | M.Sc CS

One thought on “ಈ ಜಿಲ್ಲೆಯವರಿಗೆ 4ನೇ ಕಂತಿನ 2000/- ಹಣ ಬಿಡುಗಡೆ.. ಹಣ ಬರದೇ ಇದ್ದವರಿಗೆ ಈ ದಿನಾಂಕದೊಳಗೆ ಜಮಾ – ಸಿ. ಎಂ ಸಿದ್ದರಾಮಯ್ಯ

Leave a Reply

Your email address will not be published. Required fields are marked *