Home » Trending News » Gruhalakshmi Update: ಗೃಹಲಕ್ಷ್ಮಿ 8ನೇ ಕಂತಿನ ಹಣದ ಬಿಗ್ ಅಪ್ಡೇಟ್ ಇಲ್ಲಿದೆ. ಈ ಕೆಲಸ ಮಾಡಿ ಪೆಂಡಿಂಗ್ ಹಣ ಪಡೆಯಿರಿ

Gruhalakshmi Update: ಗೃಹಲಕ್ಷ್ಮಿ 8ನೇ ಕಂತಿನ ಹಣದ ಬಿಗ್ ಅಪ್ಡೇಟ್ ಇಲ್ಲಿದೆ. ಈ ಕೆಲಸ ಮಾಡಿ ಪೆಂಡಿಂಗ್ ಹಣ ಪಡೆಯಿರಿ

WhatsApp Group Join Now
Telegram Group Join Now
gruhalakshmi 3

ಗೃಹಲಕ್ಷ್ಮಿ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ ನಂತರ ಒಂದು ಕಂತಿನ ಹಣ ಬಂದೇ ಇಲ್ಲ ಎನ್ನುವ ಅದೆಷ್ಟೋ ಮಹಿಳೆಯರಿಗೆ ಮಾರ್ಚ್ ತಿಂಗಳಲ್ಲಿ ಸತತ 2 ಸಾವಿರ ರೂಪಾಯಿಯಂತೆ ಬರೋಬ್ಬರಿ 14,000 ರೂಪಾಯಿ ಖಾತೆಗೆ ಬಂದು ತಲುಪಿದೆ. ರಾಜ್ಯದಲ್ಲಿ ಹಲವಾರು ಕಡೆ ಮಹಿಳೆಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಹಲವಾರು ಕಡೆ ಗೃಹಲಕ್ಷ್ಮಿ ಹಣದಲ್ಲಿ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್ ಗಳನ್ನು ಖರೀದಿಸಿದ ಕೆಲವು ಮಹಿಳೆಯರು ರಾಜ್ಯದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ, ಉತ್ತರ ಕರ್ನಾಟಕ ಭಾಗದಲ್ಲಿ ಗೃಹಲಕ್ಷ್ಮಿ ಹಣದಿಂದ ಫ್ರಿಡ್ಜ್ ಮತ್ತು ಟಿವಿ ಖರೀದಿಸಿ ಪೂಜೆ ಮಾಡಿರುವ ವಿಡಿಯೋಗಳು ವೈರಲ್ ಆಗಿವೆ. ಇನ್ನೊಂದೆಡೆ ಕೇವಲ ನಮಗೆ ಎರಡು ಅಥವಾ ಮೂರು ಕಂತುಗಳು ಬಂದು ಇನ್ನುಳಿದ ಕಂತುಗಳು ಬಂದೇ ಇಲ್ಲ ಎನ್ನುವ ಮಹಿಳೆಯರು ಇದ್ದಾರೆ. ಹಾಗಾಗಿ ಹಣ ಬರದೇ ಇದ್ದವರ ಏನು ಮಾಡಬೇಕು, 8ನೇ ಕಂತಿನ ಹಣದ ಅಪ್ಡೇಟ್ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು  ಇಲ್ಲಿ ಕ್ಲಿಕ್ ಮಾಡಿ

ಎಲ್ಲಾ ಪೆಂಡಿಂಗ್ ಹಣ ಬಿಡುಗಡೆ:

ಗೃಹಲಕ್ಷ್ಮಿ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ ನಂತರ ಒಂದು ಕಂತಿನ ಹಣ ಬಂದೇ ಇಲ್ಲ ಎನ್ನುವ ಅದೆಷ್ಟೋ ಮಹಿಳೆಯರಿಗೆ ಮಾರ್ಚ್ ತಿಂಗಳಲ್ಲಿ ಸತತ 2 ಸಾವಿರ ರೂಪಾಯಿಯಂತೆ ಬರೋಬ್ಬರಿ 14,000 ರೂಪಾಯಿ ಖಾತೆಗೆ ಬಂದು ತಲುಪಿದೆ.

ಹೌದು ಇದಕ್ಕೆ ಕಾರಣ ಬ್ಯಾಂಕಿಗೆ ಹೋಗಿ ekyc ಹಾಗೂ ಮತ್ತೊಮ್ಮೆ NPCI ಮ್ಯಾಪಿಂಗ್ ಮಾಡಿಸಿದ್ದು ಎಂದು ಹೇಳಲಾಗುತ್ತಿದೆ. ಮತ್ತು ಡಿಸೆಂಬರ್ ತಿಂಗಳಲ್ಲಿ ಒಬ್ಬ ಮಹಿಳೆಯರಿಗೆ ಸತತವಾಗಿ ಹಣ ಜಮಾ ಆಗಿರುವುದನ್ನು ಸಹಿತ ನೀವು ಕೆಳಗಡೆ ಗಮನಿಸಬಹುದು.

gruhalakshmi

8ನೇ ಕಂತಿನ ಹಣ ಬಿಡುಗಡೆ

ಈಗಾಗಲೇ ಎಂಟನೇ ಕಂತಿನ ಹಣವನ್ನು ಕೂಡ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ತಿಂಗಳ ಕೊನೆಯ ವಾರದ ಒಳಗೆ ಈ ಹಣ ಪ್ರತಿಯೊಬ್ಬರ ಖಾತೆಗೂ ತಲುಪಲಿದೆ. ನಿಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ವೋ ಎಂದು ಚೆಕ್ ಮಾಡಿಕೊಳ್ಳಲು ನಿಮ್ಮ ಬ್ಯಾಂಕಿಗೆ ಹೋಗಿ ಪಾಸ್ ಬುಕ್ ಅಪ್ಡೇಟ್ ಮಾಡಿಸಿ ಅಥವಾ DBT Karnataka ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಸರ್ಕಾರದಿಂದ ಬಿಡುಗಡೆಯಾಗುವ ಎಲ್ಲಾ DBT ಸ್ಟೇಟಸ್ ತಿಳಿದುಕೊಳ್ಳಿ.

ಪೆಂಡಿಂಗ್ ಹಣ ಪಡೆಯಲು ಇಲ್ಲಿದೆ ಪರಿಹಾರ

ಇದುವರೆಗೂ ಒಂದು ಕಂತಿನ ಹಣ ಬಂದೇ ಇಲ್ಲ ಎನ್ನುವ ಮಹಿಳೆಯರ ಬ್ಯಾಂಕ್ ಖಾತೆಯೇ ಕಾರಣ ಎನ್ನಬಹುದು, ಆದ್ದರಿಂದ ಅಂತಹ ಮಹಿಳೆಯರು ಕೂಡಲೇ ಬ್ಯಾಂಕಿಗೆ ಭೇಟಿ ನೀಡಿ ಖಾತೆಗೆ ಅಗತ್ಯ ಇರುವ ಎಲ್ಲಾ ಅಪ್ಡೇಟ್ಸ್ ಗಳನ್ನು ಮಾಡಿಸಿ, ಅದರಲ್ಲೂ ಮುಖ್ಯವಾಗಿ ಎನ್ಪಿಸಿಐ ಮ್ಯಾಪಿಂಗ್, ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಲೇಬೇಕು.

ಆಧಾರ್ ಕಾರ್ಡ್ ಹತ್ತು ವರ್ಷಗಳಷ್ಟು ಹಳೆಯದಾಗಿದ್ದರೆ ತಕ್ಷಣ ಅದನ್ನು ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರದಲ್ಲಿ ತಪ್ಪದೇ ಅಪ್ಡೇಟ್ ಮಾಡಿಸಿ. ಆಧಾರ್ ಕಾರ್ಡ್ ನಲ್ಲಿ ಹೆಸರು, ಅಡ್ರೆಸ್, ಲಿಂಗ, ಜನ್ಮ ದಿನಾಂಕ ಮೊದಲಾದ ವಿವರಗಳನ್ನು ನವೀಕರಣಗೊಳಿಸಬಹುದು.

ನಿಮ್ಮ ಮೊಬೈಲ್ ಮೂಲಕ ಆನ್ ಲೈನ್ ನಲ್ಲಿಯೂ ಆಧಾರ್ ಕಾರ್ಡ್ ನವೀಕರಣಕ್ಕೆ ಅವಕಾಶವಿದೆ. ಜೂನ್ 14ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಗೆ ಸರ್ಕಾರ ಅವಕಾಶ ಕೊಟ್ಟಿದೆ. ಇದು ಸಂಪೂರ್ಣ ಉಚಿತವಾಗಿದ್ದು ಜೂನ್ 14ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ದರೆ ನಿಮಗೆ ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

 

WhatsApp Group Join Now
Telegram Group Join Now

About

Editor | M.Sc CS

Leave a Reply

Your email address will not be published. Required fields are marked *