Home » Central Jobs » Free Job Alerts: ಬರೋಬ್ಬರಿ 17,710 ಹುದ್ದೆಗಳ ದೊಡ್ಡ ನೇಮಕಾತಿ ಅಧಿಸೂಚನೆ | ESIC Recruitment 2023

Free Job Alerts: ಬರೋಬ್ಬರಿ 17,710 ಹುದ್ದೆಗಳ ದೊಡ್ಡ ನೇಮಕಾತಿ ಅಧಿಸೂಚನೆ | ESIC Recruitment 2023

WhatsApp Group Join Now
Telegram Group Join Now
esic recruittment

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ಲೇಖನದಲ್ಲಿ ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ(Recruitment) ಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.  ಈಗಾಗಲೇ ESIC ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.

-ESIC ನೇಮಕಾತಿ (Recruitment) 2023 ರ ಅವಲೋಕನ  –

ಇತ್ತೀಚೆಗೆ ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ, ESIC ಅವರು ಮಲ್ಟಿ-ಟಾಸ್ಕಿಂಗ್ ಸ್ಟಾಫ್, ಲೋವರ್ ಡಿವಿಷನ್ ಕ್ಲರ್ಕ್, ಅಪ್ಪರ್ ಡಿವಿಷನ್ ಕ್ಲರ್ಕ್/ ಅಪ್ಪರ್ ಡಿವಿಷನ್ ಕ್ಲರ್ಕ್ ಕ್ಯಾಷಿಯರ್, ಹೆಡ್ ಕ್ಲರ್ಕ್/ ಅಸಿಸ್ಟೆಂಟ್, ಮತ್ತು ಸೋಶಿಯಲ್ ಸೆಕ್ಯುರಿಟಿ ಆಫೀಸರ್/ ನಂತಹ ಮುಂತಾದ ಹುದ್ದೆಗಳಿಗೆ ಸುಮಾರು 17710 ಖಾಲಿ ಹುದ್ದೆಗಳ ನೇಮಕಾತಿಗಾಗಿ  ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು https://esic.nic.in/ ನಲ್ಲಿ,  ಅಧಿಕೃತ ವೆಬ್ ಪೋರ್ಟಲ್‌ನಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ಅಧಿಕೃತ ವೆಬ್‌ಸೈಟ್ ನಲ್ಲಿ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಈ ಲೇಖನದಲ್ಲಿ ಈ ಹುದ್ದೆಗಳ ಪ್ರಮುಖ ದಿನಾಂಕಗಳು, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಇತ್ಯಾದಿಗಳನ್ನು ತಿಳಿಸಿಕೊಡಲಾಗುತ್ತದೆ. ಪೋಸ್ಟ್‌ಗಳ ವಿವರಗಳು ಕೆಳಕಂಡಂತಿವೆ:

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು:
ಇಲಾಖೆ ಹೆಸರು Employees’ State Insurance Corporation
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ವರ್ಷ 2023
ಒಟ್ಟು ಹುದ್ದೆಗಳು  11710
ಅಪ್ಲಿಕೇಶನ್ ವಿಧಾನ online

Picsart 23 06 10 14 01 54 141

ESIC ನೇಮಕಾತಿ 2023ರ ಖಾಲಿ ಹುದ್ದೆಗಳ ವಿವರ :

ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ: 17710

ಪೋಸ್ಟ್‌ಗಳು:
ಬಹು ಕಾರ್ಯ ಸಿಬ್ಬಂದಿ (Multi-tasking staf) – 3341 ಹುದ್ದೆಗಳು
ಲೋವರ್ ಡಿವಿಷನ್ ಕ್ಲರ್ಕ್ – 1923 ಹುದ್ದೆಗಳು
ಅಪ್ಪರ್ ಡಿವಿಷನ್ ಕ್ಲರ್ಕ್/ಅಪ್ಪರ್ ಡಿವಿಷನ್ ಕ್ಲರ್ಕ್ ಕ್ಯಾಷಿಯರ್ – 6435 ಹುದ್ದೆಗಳು
ಹೆಡ್ ಕ್ಲರ್ಕ್/ಸಹಾಯಕ – 3415 ಹುದ್ದೆಗಳು
ಸಾಮಾಜಿಕ ಭದ್ರತಾ ಅಧಿಕಾರಿ/ ಮ್ಯಾನೇಜರ್ ಗ್ರೇಡ್ II/ ಸೂಪರಿಂಟೆಂಡೆಂಟ್- 2596 ಹುದ್ದೆಗಳು

ಉದ್ಯೋಗ ಸ್ಥಳ : ಭಾರತ

ESIC ನೇಮಕಾತಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ :

ESIC ನೇಮಕಾತಿಗಾಗಿ ಅಭ್ಯರ್ಥಿಯು 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಹೆಚ್ಚಿನದಾಗಿ ಅಭ್ಯರ್ಥಿಯು ಆಫೀಸ್ ಸೂಟ್ ಗಳು ಮತ್ತು ಡೇಟಾ ಬೆಸ್ (Data Base) ನಂತಹ ಕಂಪ್ಯೂಟರ್ ಜ್ಞಾನ ಹೊಂದಿದವರಾಗಿರಬೇಕು.

ವಯೋಮಿತಿ :

ಈ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯು 18 ರಿಂದ 27 ವರ್ಷಗಳ ವಯಸ್ಸಿನ ಮಿತಿಯಲ್ಲಿರಬೇಕು.

Picsart 23 06 10 13 55 14 667

ಸಂಬಳದ ಪ್ಯಾಕೇಜ್ ಎಷ್ಟು?:

ಬಹು ಕಾರ್ಯ ಸಿಬ್ಬಂದಿ (Multi-tasking staf) – 18,000 ರಿಂದ 56,900 /-
ಲೋವರ್ ಡಿವಿಷನ್ ಕ್ಲರ್ಕ್ – 19,000 ರಿಂದ 63,600/-
ಅಪ್ಪರ್ ಡಿವಿಷನ್ ಕ್ಲರ್ಕ್/ಅಪ್ಪರ್ ಡಿವಿಷನ್ ಕ್ಲರ್ಕ್ ಕ್ಯಾಷಿಯರ್ – 25,500 ರಿಂದ 81100/-
ಹೆಡ್ ಕ್ಲರ್ಕ್/ಸಹಾಯಕ – 35,000 ರಿಂದ 1,12,400/-
ಸಾಮಾಜಿಕ ಭದ್ರತಾ ಅಧಿಕಾರಿ/ ಮ್ಯಾನೇಜರ್ ಗ್ರೇಡ್ II/ ಸೂಪರಿಂಟೆಂಡೆಂಟ್- 44,900 ರಿಂದ 1,42,400/-

ಆಯ್ಕೆ ಪ್ರಕ್ರಿಯೆ :

ಆಯ್ಕೆ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಕೌಶಲ್ಯ ಪರೀಕ್ಷೆ/ಸಂದರ್ಶನ(Interview)

ಅರ್ಜಿ ಶುಲ್ಕ :

-SC/ST/PWD/ ಇಲಾಖಾ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ. 250/-
ಎಲ್ಲಾ ಇತರ ವರ್ಗಗದ ಅಭ್ಯರ್ಥಿಗಳಿಗೆ : ರೂ.500/

ಅರ್ಜಿಯನ್ನು ಹೀಗೆ ಸಲ್ಲಿಸಿ :

ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ,  ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ(ಅನ್ವಯಿಸಿದ್ದಲ್ಲಿ)

ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  ಶೀಘ್ರದಲ್ಲೇ ಪ್ರಾರಂಭವಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಶೀಘ್ರದಲ್ಲೇ ಘೋಷಿಸಲಾಗುವುದು.

 

ಪ್ರಮುಖ ಲಿಂಕುಗಳು 
ಹೋಮ್ ಪೇಜ್
ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ ಶೀಘ್ರದಲ್ಲೇ
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ  
ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ.

WhatsApp Group Join Now
Telegram Group Join Now

About

Editor | M.Sc CS

5 thoughts on “Free Job Alerts: ಬರೋಬ್ಬರಿ 17,710 ಹುದ್ದೆಗಳ ದೊಡ್ಡ ನೇಮಕಾತಿ ಅಧಿಸೂಚನೆ | ESIC Recruitment 2023

Leave a Reply

Your email address will not be published. Required fields are marked *