Home » Karnataka Jobs » BMTC Recruitment 2024: ಬಿಎಂಟಿಸಿಯಲ್ಲಿ 2500 ಕಂಡಕ್ಟರ್ ಹುದ್ದೆಗಳ ನೇಮಕಾತಿ, ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

BMTC Recruitment 2024: ಬಿಎಂಟಿಸಿಯಲ್ಲಿ 2500 ಕಂಡಕ್ಟರ್ ಹುದ್ದೆಗಳ ನೇಮಕಾತಿ, ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now
conductor

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ವರದಿಯಲ್ಲಿ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ನೇಮಕಾತಿ ಕುರಿತು ತಿಳಿಸಲಾಗಿದೆ. ಈ ನೇಮಕಾತಿಯಲ್ಲಿ 2500 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಹುದ್ದೆಗಳನ್ನು ಎದುರು ನೋಡುತ್ತಿರುವ ಯುವಕರಿಗೆ ಬಂಪರ್ ಸುದ್ದಿಯೊಂದನ್ನು ರಾಜ್ಯ ಸರ್ಕಾರ ಕೊಟ್ಟಿದೆ, ಹೌದು ಬೆಂಗಳೂರಿನ ಬಿಎಂಟಿಸಿಯಲ್ಲಿ ಖಾಲಿ ಇರುವ 2500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.

ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.

-ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ನೇಮಕಾತಿ 2024 ರ( BMTC Conductor Recruitment 2024) ಅವಲೋಕನ –

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ನೇಮಕಾತಿಯನ್ನು ನಡೆಸುತ್ತಿದ್ದು, ಸಂಪೂರ್ಣವಾದ ಅಧಿಸೂಚನೆಯನ್ನು ಹೊರಡಿಸಿದೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಂತರ ಅರ್ಜಿ ಸಲ್ಲಿಸಿ. ಅಧಿಸೂಚನೆಯ ಸಂಪೂರ್ಣ ವಿವರ ಕೆಳಗಿನಂತಿದೆ.

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು:
ಇಲಾಖೆ ಹೆಸರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಹುದ್ದೆಗಳ ಹೆಸರು ಕಂಡಕ್ಟರ್ ಹುದ್ದೆ
ವರ್ಷ 2024
ಒಟ್ಟು ಹುದ್ದೆಗಳು  2500
ಅಪ್ಲಿಕೇಶನ್ ವಿಧಾನ online

Picsart 23 06 10 14 01 54 141

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೇಮಕಾತಿಯ ಖಾಲಿ ಹುದ್ದೆಗಳ ವಿವರ : 

ಇಲಾಖೆ  ಹೆಸರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( BMTC )
ಹುದ್ದೆಯ ಹೆಸರು: ಕಂಡಕ್ಟರ್
ಒಟ್ಟು ಹುದ್ದೆಗಳ  ಸಂಖ್ಯೆ: 2500
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ

ವಿದ್ಯಾರ್ಹತೆ:

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪಿಯುಸಿ (ಕಲಾ, ವಿಜ್ಞಾನ, ಕಾಮರ್ಸ್) ಅಥವಾ ಸಿಬಿಎಸ್‌ಸಿ 10+2 ಅಥವಾ ಮೂರು ವರ್ಷದ ಡಿಪ್ಲೋಮಾ ಅಥವಾ ಅದಕ್ಕೆ ಸಮಾನವಾದ ಶೈಕ್ಷಣಿಕ ಅರ್ಹತೆ ಜೊತೆಗೆ ‘ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್‌’ ಕಡ್ಡಾಯವಾಗಿ ಹೊಂದಿರಬೇಕು.

ವಿಶೇಷ ಸೂಚನೆ: ಬಾಹ್ಯ ಕೋರ್ಸ್ ಮತ್ತು ಜೆಒಸಿ ಕೋರ್ಸ್‌ ಮುಗಿಸಿದವರು ಅರ್ಹರಲ್ಲ ಮತ್ತು ಪರೀಕ್ಷೆ ಬರೆದು ಈಗಾಗಲೇ ಫಲಿತಾಂಶಕ್ಕೆ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ವಯೋಮಿತಿ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 35 ವರ್ಷ
  • 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 38 ವರ್ಷ
  • ಪ. ಜಾತಿ, ಪ. ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ – 40 ವರ್ಷ
  • ಮಾಜಿ ಸೈನಿಕ ಹಾಗೂ ಇಲಾಕಾ ಅಭ್ಯರ್ಥಿಗಳಿಗೆ – 45 ವರ್ಷ

Picsart 23 06 10 13 55 14 667

ಸಂಬಳದ ಪ್ಯಾಕೇಜ್ ಎಷ್ಟು ?

18,660 ರೂಪಾಯಿಯಿಂದ 25,300 ರೂಪಾಯಿ ವರೆಗೆ ಮಾಸಿಕ ಸಂಬಳವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ :

ಸಾಮಾನ್ಯ ಸಾಮರ್ಥ್ಯ ಪರೀಕ್ಷೆ’ (ಆಪ್ಟಿಟ್ಯೂಡ್ ಟೆಸ್ಟ್)
ದೇಹದಾರ್ಡತ್ಯೆ ಪರೀಕ್ಷೆ

ಅರ್ಜಿ ಶುಲ್ಕ :

SC/ST/ Cat-I ಅಭ್ಯರ್ಥಿಗಳು: ರೂ.500/-
ಸಾಮಾನ್ಯ/OBC ಅಭ್ಯರ್ಥಿಗಳು: ರೂ.750/-

ಅರ್ಜಿಯನ್ನು ಹೀಗೆ ಸಲ್ಲಿಸಿ :

ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ,  ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ(ಅನ್ವಯಿಸಿದ್ದಲ್ಲಿ)

ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  10-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  10-04-2024

 

ಪ್ರಮುಖ ಲಿಂಕುಗಳು 
ಹೋಮ್ ಪೇಜ್
ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ  
ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ.

WhatsApp Group Join Now
Telegram Group Join Now

About

Editor | M.Sc CS

One thought on “BMTC Recruitment 2024: ಬಿಎಂಟಿಸಿಯಲ್ಲಿ 2500 ಕಂಡಕ್ಟರ್ ಹುದ್ದೆಗಳ ನೇಮಕಾತಿ, ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

Leave a Reply

Your email address will not be published. Required fields are marked *