Home » Trending News » ʻಆಯುಷ್ಮಾನ್ ಕಾರ್ಡ್ʼ ಇದ್ರೆ ಈ ಆಸ್ಪತ್ರೆ ಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು, ಇಲ್ಲಿದೆ ಕಂಪ್ಲೀಟ್ ಮಾಹಿತಿ

ʻಆಯುಷ್ಮಾನ್ ಕಾರ್ಡ್ʼ ಇದ್ರೆ ಈ ಆಸ್ಪತ್ರೆ ಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು, ಇಲ್ಲಿದೆ ಕಂಪ್ಲೀಟ್ ಮಾಹಿತಿ

WhatsApp Group Join Now
Telegram Group Join Now
Ayushman card

ಇದೀಗ ಸರ್ಕಾರವು ಹೊಸ ಹೊಸ ಹಲವು ಯೋಜನೆಗಳನ್ನು ಪರಿಚಯಿಸುತ್ತಿದೆ. ಇದರಿಂದ ಬಡವರಿಗೆ ಮತ್ತು ಅನೇಕರಿಗೆ ಹಲವು ಲಾಭ ದೊರೆತಿದೆ. ಹಾಗೂ ಸಾಮಾನ್ಯ ಜನರ ಆರ್ಥಿಕ ನೆರವಿಗೆ ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ ಅವರು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಈ ಯೋಜನೆಗಳು ಸಹಾಯ ಮಾಡುತ್ತವೆ.

ಸರ್ಕಾರ ನೀಡುತ್ತಿರುವ ಯೋಜನೆಗಳಲ್ಲಿ ಆಯುಷ್ಮಾನ್ ಯೋಜನೆಯು ( Ayushman scheme ) ಒಂದು. ಈ ಯೋಜನೆಯು ಹಲವರ ಬದುಕಿನಲ್ಲಿ ಒಂದು ಮುಖ್ಯ ಯೋಜನೆಯಾಗಿದೆ. ಯಾಕೆಂದರೆ ನಮಗೆ ನಮ್ಮ ಆರೋಗ್ಯವೇ ಬಹಳ ಮುಖ್ಯ. ನಮ್ಮ ಆರೋಗ್ಯದಲ್ಲಿ ಏರುಪೇರು ಆದಾಗ ಅಥವಾ ಇನ್ನಾವುದೇ ಸಮಸ್ಯೆ ಕಾಣಿಸಿಕೊಂಡಾಗ ಸರಿಪಡಿಸಲು ಬಹಳ ದುಡ್ಡು ಬೇಕಾಗುತ್ತದೆ. ಆ ಒಂದು ಆರ್ಥಿಕ ನೆರವನ್ನು ಆಯುಷ್ಮಾನ್ ಕಾರ್ಡ್ ( Ayushman Card ) ನೀಡುತ್ತದೆ.

ಈ ಒಂದು ಯೋಜನೆಯು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಜನರಿಗೆ ವರದಾನವೇ ಎನ್ನಬಹುದು. ಇದರಲ್ಲಿ ಮುಖ್ಯ ವಿಚಾರ ಎಂದರೆ ಆರ್ಥಿಕವಾಗಿ ದುರ್ಬಲರಾಗಿರುವ ಜನರು ಈ ಯೋಜನೆಯಲ್ಲಿ ಸುಲಭವಾಗಿ 5 ಲಕ್ಷ ರೂ.ವರೆಗೆ ಚಿಕಿತ್ಸೆ ಪಡೆಯಬಹುದು.

ಬಿಪಿಎಲ್ ಪಡಿತರ ಕಾರ್ಡ್ ( BPL Card ) ಹೊಂದಿರುವವರು ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಇನ್ನು ಎಪಿಎಲ್ ಕಾರ್ಡ್ ( APL Card ) ದಾರರು ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದವರಿಗೂ ಸಹ ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ.30 ರಷ್ಟು ಚಿಕತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ. ಇರುತ್ತದೆ. ರೋಗಿಗಳು ಚಿಕಿತ್ಸೆ ಪಡೆಯಲು ತಮ್ಮ ರೇಷನ್ ಕಾರ್ಡ್  ಮತ್ತು ಆಧಾರ್ ಕಾರ್ಡ್ ಅನ್ನು ಹಾಜರುಪಡಿಸಬೇಕು.

ಸರ್ಕಾರ ನೀಡಿರುವ ಈ ಯೋಜನೆಯಲ್ಲಿ ಯಾವ ಸ್ಥಳಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ:

ಈ ಯೋಜನೆಯನ್ನು ಯಾರಿಗೆಲ್ಲ ನೀಡಲಾಗಿದೆ ಎಂದರೆ, ಮುಖ್ಯವಾಗಿ ಬಡವರಿಗಾಗಿಯೇ ಈ ಯೋಜನೆಯನ್ನು ತರಲಾಗಿದೆ.

ಬಡವರು ಈ ಯೋಜನೆಯನ್ನು ಪಡೆದುಕೊಳ್ಳುವುದರ ಮೂಲಕ ತಮ್ಮ ಆರ್ಥಿಕ ಪರಿಸ್ಥಿಯನ್ನು ಪ್ರಭಲಗೊಳಿಸಿ ಚಿಕಿಸ್ತೆ ಪಡೆಯಬಹುದು. ಯಾರೆಲ್ಲ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು ಎಂದರೆ :
ಕಚ್ಚೆ ಮನೆಗಳಲ್ಲಿ ವಾಸಿಸುವ ಜನರು
ನಿವೇಶನ ರಹಿತರು
ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದವರು
ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರು
ತೃತೀಯಲಿಂಗಿಗಳು
ಬಡತನ ರೇಖೆಗಿಂತ ಕೆಳಗಿರುವ ಜನರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಈ ಜನರಿಗೆ ಮಾತ್ರ ಅರ್ಜಿ ಸಲ್ಲಿಸುವ ಹಕ್ಕಿದೆ.

ಆಯುಷ್ಮಾನ್ ಕಾರ್ಡ್ ನೀವು ಮಾಡಿಸಬೇಕಿದ್ದರೆ ಆಯುಷ್ಮಾನ್ ಭಾರತ್ ಫಾರ್ಮ್ 2023 ಅನ್ನು ಭರ್ತಿ ಮಾಡಿ ಮತ್ತು ನೀವು ಅರ್ಹತೆ ಪಡೆದ ತಕ್ಷಣ ನಿಮ್ಮನ್ನು ನೋಂದಾಯಿಸಿಕೊಳ್ಳಿ. ನಿಮ್ಮ ಅರ್ಜಿಯ ಅಧಿಕಾರಿಗಳ ಪರಿಶೀಲನೆಯ ನಂತರ, ನಿಮ್ಮ ಹೆಸರನ್ನು 2023 ರ ಆಯುಷ್ಮಾನ್ ಭಾರತ್ ಪಟ್ಟಿಗೆ ಸೇರಿಸಲಾಗುತ್ತದೆ.

Picsart 23 06 10 14 01 54 141

ಆಯುಷ್ಮಾನ್ ಕಾರ್ಡ್ 2023 ಅರ್ಜಿ ನಮೂನೆಗೆ ಅಗತ್ಯವಿರುವ ದಾಖಲೆಗಳು ( Documents ) :

ಆಧಾರ್ ಕಾರ್ಡ್
ಮೊಬೈಲ್ ನಂಬರ
ಪ್ಯಾನ್ ಕಾರ್ಡ್ ಸಂಖ್ಯೆ
ಪಡಿತರ ಚೀಟಿ
ಮತದಾರರ ಗುರುತಿನ ಚೀಟಿ
SC ಪ್ರಮಾಣಪತ್ರ
ST ಪ್ರಮಾಣಪತ್ರ
ಆದಾಯ ಪ್ರಮಾಣಪತ್ರ
ಮೊಬೈಲ್ ನಂಬರ
ಪಾಸ್ಪೋರ್ಟ್ ಗಾತ್ರದ ಫೋಟೋ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಹಂತಗಳು :

ಹಂತ 1: ಈ ಯೋಜನೆಯ ಅಧಿಕೃತ ವೆಬ್‌ಸೈಟ್ pmjay.gov.in ಗೆ ಲಾಗಿನ್ ಮಾಡಿ.
ಹಂತ 2: ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ.
ಹಂತ 3: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ಇಲ್ಲಿ ನಮೂದಿಸಿ.
ಹಂತ 4: ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ. ಇದರ ನಂತರ ನೀವು ರಾಜ್ಯವನ್ನು ಆಯ್ಕೆ ಮಾಡಿ.
ಹಂತ 5: ಹೆಸರು, ಮೊಬೈಲ್ ಸಂಖ್ಯೆ, ಪಡಿತರ ಚೀಟಿ ಮತ್ತು ಇತರ ವಿವರಗಳನ್ನು ಭರ್ತಿ ಮಾಡಿ.
ಹಂತ 6: ನೀವು ಬಲಭಾಗದಲ್ಲಿ ಕುಟುಂಬದ ಸದಸ್ಯರ ಮೇಲೆ ಟ್ಯಾಬ್ ಮಾಡಿ ಮತ್ತು ಎಲ್ಲಾ ಫಲಾನುಭವಿಗಳ ಹೆಸರನ್ನು ಸೇರಿಸಿ.
ಹಂತ 7: ಇದನ್ನು ಕಳುಹಿಸಿ. ಸರ್ಕಾರ ನಿಮಗೆ ಆಯುಷ್ಮಾನ್ ಕಾರ್ಡ್ ನೀಡುತ್ತದೆ.
ಇದರ ನಂತರ ನೀವು ಅದನ್ನು ಡೌನ್‌ಲೋಡ್ ಮಾಡಿಕೊಂಡು ನಂತರ ಎಲ್ಲಿಯಾದರೂ ಬಳಸಬಹುದು.

Picsart 23 06 10 13 55 14 667

ಪ್ರಮುಖ ಲಿಂಕುಗಳು 
ಹೋಮ್ ಪೇಜ್
ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ  
ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 

WhatsApp Group Join Now
Telegram Group Join Now

About

Editor | M.Sc CS

Leave a Reply

Your email address will not be published. Required fields are marked *