Home » Trending News » Anna Bhagya : ಮಾರ್ಚ್ ತಿಂಗಳ ಅಕ್ಕಿ ಹಣಕ್ಕೆ ಕಾಯುತ್ತಿರುವ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್ ಇಲ್ಲಿದೆ..!

Anna Bhagya : ಮಾರ್ಚ್ ತಿಂಗಳ ಅಕ್ಕಿ ಹಣಕ್ಕೆ ಕಾಯುತ್ತಿರುವ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್ ಇಲ್ಲಿದೆ..!

WhatsApp Group Join Now
Telegram Group Join Now
march akki hana

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ‘ಅನ್ನಭಾಗ್ಯ ಯೋಜನೆ’ಯ ಮಾರ್ಚ್ ತಿಂಗಳ ಹಣ ಈಗಾಗಲೇ ಜನರ ಖಾತೆಗೆ ಜಮಾ ಆಗಿದೆ. ನಿಮ್ಮ ಖಾತೆಗೂ ಕೂಡ ಹಣ ಜಮಾ ಆಗಿದೆಯೇ ಎಂಬುದನ್ನು ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದರ ಮೂಲಕ ಅಥವಾ ನಿಮ್ಮ ಖಾತೆಯನ್ನು ಚೆಕ್ ಮಾಡುವುದರ ಮೂಲಕ ನೋಡಿಕೊಳ್ಳಬಹುದಾಗಿದೆ.  ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 

ಮಾರ್ಚ್ ತಿಂಗಳ ಅಕ್ಕಿ ಹಣ ಜಮಾ

ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ನೀಡುತ್ತಿದೆ. ಆದರೆ ಕಳೆದ ಕೆಲವು ದಿನಗಳ ಹಿಂದೆ  ಹಣದ ಬದಲಾಗಿ ಅಕ್ಕಿಯನ್ನೇ ಕೊಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಅಕ್ಕಿಯನ್ನು ಹೊಂದಿಸೋದು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಹಣವನ್ನು ಸರ್ಕಾರ ಯಜಮಾನಿಯ ಖಾತೆಗೆ ನೇರವಾಗಿ DBT ಮೂಲಕ ವರ್ಗಾವಣೆ ಮಾಡಲಾಗಿದೆ.

akki hana 2

ಈ‌ ಅನ್ನಭಾಗ್ಯ ಹಣ (Anna Bhagya Money) ಈ ತಿಂಗಳಲ್ಲೂ ಕೂಡ ಸರಕಾರ ‌ಬಿಡುಗಡೆ ಮಾಡಿದ್ದು ಎಲ್ಲಾ ಜಿಲ್ಲೆಯ ಫಲಾನುಭವಿಗಳಿಗೂ ಈ ಹಣ ಬಿಡುಗಡೆ ಗೊಳ್ಳಲಿದೆ ಎಂದು ಆಹಾರ ಇಲಾಖೆಯು ಸ್ಪಷ್ಟನೆ ಯನ್ನು ನೀಡಿದೆ.

ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಹಂತ ಹಂತವಾಗಿ ಈ ಹಣ ವರ್ಗಾವಣೆ ಆಗುತ್ತದೆ. ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದ್ದೇವೆಯೇ?, ಎಷ್ಟು ಹಣ ಬಂದಿದೆ?, ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ತಿಳಿಯಲು ಸರ್ಕಾರವು ಒಂದು ಅಧಿಕೃತ ಜಾಲತಾಣ(ವೆಬ್ಸೈಟ್)ವನ್ನು ಬಿಡುಗಡೆ ಮಾಡಿದೆ. ಹಾಗಾಗಿ ನೀವು ಸ್ಟೇಟಸ್ ಅನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ.

ಎಲ್ಲಾ ಸರಿ ಇದ್ರೂ ಹಣ ಬಂದಿಲ್ಲ ಅನ್ನೋರು ಇದೊಂದು ಪ್ರಯತ್ನ ಮಾಡಿ

ಎಲ್ಲಾ ದಾಖಲಾತಿ ಸರಿಯಿದೆ ಆದರೂ ಹಣ ಬರುತ್ತಿಲ್ಲ ಎಂದು ಹಾವೇರಿ ಯಜಮಾನಿ ಒಬ್ಬರು ಹೇಳುತ್ತಿದ್ದರು, ನಂತರ ಬ್ಯಾಂಕ್ ಖಾತೆ ಸಮಸ್ಯೆ ಇದೆಯಾ ಎಂದು ಬ್ಯಾಂಕ್ ಆಫ್ ಬರೋಡ ದಲ್ಲಿ ಹೊಸ ಖಾತೆ ತೆರೆದ ಕೇವಲ ಮೂರು ದಿನದಲ್ಲಿ ಖಾತೆಗೆ ಹಣ ಬಂದು ಜಮಾ ಆಗಿದೆ

ಎಲ್ಲ ದಾಖಲಾತಿ ಸರಿ ಇದ್ದವರು ಮತ್ತೊಮ್ಮೆ ಪೋಸ್ಟ್ ಆಫೀಸ್ನಲ್ಲಿ ಒಂದು ಹೊಸ ಖಾತೆಯನ್ನು ತೆರೆಯುವುದು ಉತ್ತಮ, ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆಯನ್ನು ತೆರೆಯಿರಿ ಉದಾ : ಬ್ಯಾಂಕ್ ಆಫ್ ಬರೋಡ, ಕೆನರಾ, SBI, ಎಲ್ಲಾ ಸರಿ ಇದ್ರೂ ಹಣ ಬರ್ತಿಲ್ಲ ಅಂದ್ರೆ ಅದು ಬ್ಯಾಂಕ್ ಆಧಾರ್ ಸೀಡಿಂಗ್ ಸಮಸ್ಯೆಯೂ ಆಗಿರಬಹುದು ಹಾಗಾಗಿ ಹೊಸ ಖಾತೆಯನ್ನು ನೀವು ಆಧಾರ್ ದೃಢೀಕರಣ ಮೂಲಕ ತೆರೆದಾಗ DBT ವರ್ಗಾವಣೆ ಸುಲಭವಾಗಿ ಆಗುತ್ತದೆ. ಇದೊಂದು ಪ್ರಯತ್ನ ಮಾಡಿ ನೋಡಿ.

Picsart 23 06 10 13 55 14 667

ಅನ್ನಭಾಗ್ಯದ ಹಣ ಜಮಾ ಆಗಿದೆಯೇ ಎಂಬುದನ್ನು ನೋಡುವ ವಿಧಾನ :

ಹಂತ 1: ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ  

https://ahara.kar.nic.in/lpg/

ಹಂತ 2: ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.

ಹಂತ 3 : ನಂತರ ಕೆಳಗಿನ ಭಾಗದಲ್ಲಿರುವ  ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

ಹಂತ 4: ಮುಂದುವರೆದುನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ. ನಂತರ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವವರ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ,   ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬುದರ ಮಾಹಿತಿಯನ್ನು ನೀವು ನೋಡಬಹುದು.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ.

Picsart 23 06 10 14 01 54 141

WhatsApp Group Join Now
Telegram Group Join Now

About

Editor | M.Sc CS

Leave a Reply

Your email address will not be published. Required fields are marked *