ಉಳಿತಾಯ ಮತ್ತು ಹೂಡಿಕೆ: ದೀರ್ಘಾವಧಿಯ ಆರ್ಥಿಕ ಭದ್ರತೆಗೆ ಮುಖ್ಯ ಮಾರ್ಗಗಳು
ಹಣಕಾಸು ಯೋಜನೆಯ (Financial Scheme) ಮಹತ್ವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಜನರು ತಮ್ಮ ಖರ್ಚುಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವಾಗ, ದೀರ್ಘಾವಧಿಯ ಆರ್ಥಿಕ ಭದ್ರತೆಗಾಗಿ (Economic safety) ಹಣ ಉಳಿಸುವುದು ಮತ್ತು ಸರಿಯಾದ ಹೂಡಿಕೆ ಮಾಡುವುದು ಬಹಳ ಅಗತ್ಯವಾಗಿದೆ. ಇದಕ್ಕೆ ಹಲವು ಮಾರ್ಗಗಳಿವೆ, ಆದರೆ ಸಮರ್ಪಕ ಯೋಜನೆಯಿಂದ ಮಾತ್ರ ಭವಿಷ್ಯದಲ್ಲಿ ನಾವು ಸುಧಾರಿತ ಆರ್ಥಿಕ ಸ್ಥಿರತೆ ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
2025-26ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ (Budget) ಕೇಂದ್ರ ಸರ್ಕಾರ (Central Government) ನವೀನ ತೆರಿಗೆ ವಿನಾಯಿತಿಗಳನ್ನು ಪರಿಚಯಿಸಿದೆ. ಹೊಸ ತೆರಿಗೆ ಪದ್ಧತಿಯಡಿ ತೆರಿಗೆದಾರರು ಹೆಚ್ಚುವರಿ ಉಳಿತಾಯ ಪಡೆಯಬಹುದು, ಇದು ಅವರ ಖರ್ಚು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಹೆಚ್ಚು ಖರ್ಚು ಮಾಡುವ ಹವ್ಯಾಸದಿಂದ ಪಾರದರ್ಶಕ ಉಳಿತಾಯದ ಮಟ್ಟ ಕಡಿಮೆಯಾಗಬಹುದು. ಆದ್ದರಿಂದ, ತೆರಿಗೆ ವಿನಾಯಿತಿಗಳನ್ನಷ್ಟೇ ನಂಬದೆ, ಜನರು ದೀರ್ಘಾವಧಿಯ ಆರ್ಥಿಕ ಶಿಸ್ತು ಅಳವಡಿಸಿಕೊಂಡು ಸಾಂಪ್ರದಾಯಿಕ ಹೂಡಿಕೆಗಳತ್ತ ಗಮನ ಹರಿಸಬೇಕಾಗಿದೆ. ದೀರ್ಘಾವಧಿ ಹೂಡಿಕೆ (Long-term Investment) ಮಾರ್ಗಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದೀರ್ಘಾವಧಿ ಹೂಡಿಕೆ ಮಾರ್ಗಗಳು ಹೀಗಿವೆ :
1. ರಾಷ್ಟ್ರೀಯ ಪಿಂಚಣಿ ಯೋಜನೆ (National pension Scheme):
ನಿವೃತ್ತಿ ಜೀವನದ ಭದ್ರತೆಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅತ್ಯುತ್ತಮ ಆಯ್ಕೆಯಾಗಿದೆ. ಇದು ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಯಾಗಿದ್ದು, ಚಂದಾದಾರರು ತಮ್ಮ ನಿವೃತ್ತಿಯ ಸಮಯದಲ್ಲಿ ಸ್ಥಿರ ಆದಾಯವನ್ನು ಹೊಂದಲು ಸಹಾಯ ಮಾಡುತ್ತದೆ.
2. ಹೂಡಿಕೆ ಮತ್ತು ವಹಿವಾಟು (Investment and Transaction) :
ಚಂದಾದಾರರು ತಮ್ಮ ಹಣವನ್ನು ಈಕ್ವಿಟಿಗಳು, ಸರ್ಕಾರಿ ಭದ್ರತೆಗಳು ಮತ್ತು ಕಾರ್ಪೊರೇಟ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.
ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೊ (Portpolio) ವನ್ನು ಆಯ್ಕೆ ಮಾಡಬಹುದಾಗಿದ್ದು, ವಿವಿಧ ನಿಧಿಗಳಲ್ಲಿ ಹೂಡಿಕೆ ಮಾಡುವ ಸ್ವಾತಂತ್ರ್ಯವನ್ನು ಪಡೆಯುತ್ತಾರೆ.
ಆದಾಯ ತೆರಿಗೆ ಲಾಭ ಯಾವ ರೀತಿ ಇರುತ್ತದೆ :
ಹೊಸ ತೆರಿಗೆ ಪದ್ಧತಿಯಲ್ಲಿಯೂ NPS ತೆರಿಗೆ ವಿನಾಯಿತಿಗಳನ್ನು ಒದಗಿಸುತ್ತದೆ.
ಸೆಕ್ಷನ್ 80CCD(2) ಅಡಿಯಲ್ಲಿ, ಉದ್ಯೋಗದಾತನು ಉದ್ಯೋಗಿಯ ಪರವಾಗಿ NPS ಖಾತೆಗೆ ಹಣ ಜಮಾ ಮಾಡಿದರೆ, ಮೂಲ ವೇತನದ 14% ವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ.
ನಿವೃತ್ತಿಯ ಸಂದರ್ಭದಲ್ಲಿ 60% ಕಾರ್ಪಸ್ (Corpus) ಹಿಂಪಡೆಯಲು ಅನುಮತಿ ಇದೆ, ಮತ್ತು ಉಳಿದ ಮೊತ್ತವನ್ನು ವರ್ಷಾಶನಗಳ (annuity) ರೂಪದಲ್ಲಿ ಹೂಡಿಕೆ ಮಾಡಬೇಕು.
3. ನೌಕರರ ಭವಿಷ್ಯ ನಿಧಿ (Employees Provident Fund):
EPF ಖಾಸಗಿ ಉದ್ಯೋಗಿಗಳಿಗೆ ಅತ್ಯುತ್ತಮ ಪಿಂಚಣಿ ಯೋಜನೆಯಾಗಿದೆ. ಇದು ಬಡ್ಡಿದರದೊಂದಿಗೆ ಭದ್ರತೆಯ ಹೂಡಿಕೆಯಾಗಿದ್ದು, ನಿವೃತ್ತಿಯ ಸಮಯದಲ್ಲಿ ದೊಡ್ಡ ಮೊತ್ತದ ನಿಧಿಯನ್ನು ನೀಡಲು ಸಹಾಯ ಮಾಡುತ್ತದೆ.
ನೌಕರರ ಭವಿಷ್ಯ ನಿಧಿ (EPF)ನ ಪ್ರಮುಖ ಲಕ್ಷಣಗಳೇನು?
EPF 8.25% ಬಡ್ಡಿದರವನ್ನು ನೀಡುತ್ತದೆ, ಇದು ಹೂಡಿಕೆದಾರರಿಗೆ ಉತ್ತಮ ಲಾಭ ನೀಡುತ್ತದೆ.
15,000 ರೂ. ಮೂಲ ವೇತನ ಹೊಂದಿರುವವರಿಗೆ EPF ಕಡ್ಡಾಯವಾಗಿದೆ, ಆದರೆ ಅದಕ್ಕಿಂತ ಹೆಚ್ಚು ಗಳಿಸುವವರಿಗೆ ಇದು ಐಚ್ಛಿಕವಾಗಿದೆ.
ಉದ್ಯೋಗ ಬದಲಿಸಿದರೂ EPF ಖಾತೆಯನ್ನು ಮುಂದುವರಿಸಬಹುದು, ಇದು ನಿರಂತರ ಹೂಡಿಕೆ ಮತ್ತು ಲಾಭದ ಪರಿಗಣನೆಯನ್ನು ನೀಡುತ್ತದೆ.
ಇಕ್ವಿಟಿ-ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (Equity Linked Savings Scheme):
ELSS ತೆರಿಗೆ ಉಳಿತಾಯ ಮತ್ತು ಬಂಡವಾಳ ವೃದ್ಧಿಯನ್ನು ಒಟ್ಟುಗೂಡಿಸುವ ಉತ್ತಮ ಹೂಡಿಕೆ ಆಯ್ಕೆಯಾಗಿದೆ. ದೀರ್ಘಾವಧಿಯ ಹೂಡಿಕೆಯ ಮೂಲಕ ಭಾರಿ ಲಾಭ ನೀಡಬಹುದು.
ಇಕ್ವಿಟಿ-ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS) ಪ್ರಮುಖ ಅಂಶಗಳು:
ELSS ನಲ್ಲಿ ಹೂಡಿಕೆ ಮಾಡಿದರೆ, ಒಟ್ಟು ಹೂಡಿಕೆಯ 1.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ.
ಮೂರು ವರ್ಷಗಳ ಲಾಕ್-ಇನ್ (Lock in) ಅವಧಿಯೊಂದಿಗೆ ಇದು ಸುಧಾರಿತ ಹೂಡಿಕೆ ಆಯ್ಕೆಯಾಗಿದೆ.
ELSS ರಿಡೆಂಪ್ಶನ್ ಮೇಲಿನ ವಾರ್ಷಿಕ ಲಾಭ 1.25 ಲಕ್ಷ ರೂ. ಮೀರಿದರೆ, 12.5% ಹೂಡಿಕೆ ಲಾಭ ತೆರಿಗೆ ಅನ್ವಯವಾಗುತ್ತದೆ.
ಇಕ್ವಿಟಿ-ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS) ಪ್ರಮುಖ ಅಂಶಗಳು:
ಇನ್ನೊಂದು ಮುಖ್ಯ ಹೂಡಿಕೆ ಕ್ಷೇತ್ರವೆಂದರೆ ಆರೋಗ್ಯ ಮತ್ತು ವಿಮಾ ಯೋಜನೆಗಳು. ಆರೋಗ್ಯ ವಿಮೆ ಹೊಂದುವುದು ಖರ್ಚು ನಿರ್ವಹಣೆಗೆ ಮಾತ್ರವಲ್ಲ, ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಔಷಧಿ ಮತ್ತು ಆಸ್ಪತ್ರೆಯ ಖರ್ಚು ನಿರ್ವಹಣೆಗೆ ಆರೋಗ್ಯ ವಿಮೆ ಅತ್ಯವಶ್ಯಕ.
ನಾವು ಹಣಕಾಸು ಸ್ಥಿರತೆಯನ್ನು ಸಾಧಿಸಲು, ಕೇವಲ ತೆರಿಗೆ ಉಳಿತಾಯದ ಹೂಡಿಕೆಗಳನ್ನಷ್ಟೇ ಅವಲಂಬಿಸಬಾರದು. EPF, NPS, ELSS, ಮತ್ತು ಆರೋಗ್ಯ ವಿಮೆಗಳಂತಹ (Health Insurance) ಹೂಡಿಕೆ ಮಾರ್ಗಗಳನ್ನು ಸಮತೋಲನದೊಂದಿಗೆ ಬಳಸುವುದು ಬಹಳ ಮುಖ್ಯ. ಉಳಿತಾಯ ಮತ್ತು ಹೂಡಿಕೆ ಎರಡೂ ಪರಸ್ಪರ ಸಂಬಂಧಿತವಾಗಿದ್ದು, ದೀರ್ಘಾವಧಿಯಲ್ಲಿ ಉತ್ತಮ ಜೀವನಮಟ್ಟವನ್ನು ನೀಡುತ್ತದೆ. ಆರ್ಥಿಕ ಶಿಸ್ತಿನೊಂದಿಗೆ ಹೂಡಿಕೆ ಪದ್ದತಿಗಳನ್ನು ಅನುಸರಿಸುವುದು ಉತ್ತಮ ಭವಿಷ್ಯವನ್ನು ರೂಪಿಸುವ ಪ್ರಮುಖ ಹಂತವಾಗಿದೆ.
ಈ ಮಾಹಿತಿಗಳನ್ನು ಓದಿ :
- PM Kisan : ಪಿಎಂ ಕಿಸಾನ್ 19 ನೇ ಕಂತಿನ ಹಣ ಈ ದಿನ ಜಮಾ.! ಇಲ್ಲಿದೆ ವಿವರ
- Job Fair 2025: ಉದ್ಯೋಗ ಆಕಾಂಕ್ಷಿಗಳೆ ಗಮನಿಸಿ, ಹುಬ್ಬಳ್ಳಿಯಲ್ಲಿ ಬೃಹತ್ ಉದ್ಯೋಗ ಮೇಳ.!
- ರಾಜ್ಯ ಸರ್ಕಾರಿ ನೌಕರರ ಹಾಜರಾತಿಯಲ್ಲಿ ಮಹತ್ವದ ಬದಲಾವಣೆ, ತಪ್ಪದೇ ತಿಳಿದುಕೊಳ್ಳಿ
ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Leave a Reply