BESCOM Recruitment : ಬೆಸ್ಕಾಂನಲ್ಲಿ 510 ಖಾಲಿ ಹುದ್ದೆಗಳ ನೇಮಕಾತಿ, ಅಪ್ಲೈ ಮಾಡಿ

Categories:

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) 2025 ನೇ ಸಾಲಿನಲ್ಲಿ 510 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಮತ್ತು ಇತರ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅಧಿಸೂಚನೆಗಳು, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಮತ್ತು ಇತರ ಮಾಹಿತಿಗಳನ್ನು ಅಧಿಸೂಚನೆಗಳಲ್ಲಿ ವಿವರವಾಗಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಮುನ್ನ, ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಮತ್ತು ಇತರ ನಿಯಮಗಳನ್ನು ಪರಿಶೀಲಿಸಿ.

ಹುದ್ದೆಗಳ ಮಾಹಿತಿ ಕೆಳಗಿನಂತಿದೆ: 

ಇಲಾಖೆ ಹೆಸರುಬೆಸ್ಕಾಂ (BESCOM)
ನೇಮಕಾತಿ ಪ್ರಕಾರಅಪ್ರೆಂಟಿಸ್‌
ವರ್ಷ2025
ಒಟ್ಟು ಹುದ್ದೆಗಳು 510 ಪೋಸ್ಟ್ ಗಳು
ಅಪ್ಲಿಕೇಶನ್ ವಿಧಾನಆನ್ಲೈನ್

1. ಪದವೀಧರರು (E&E ಇಂಜಿನಿಯರಿಂಗ್): 130 ಹುದ್ದೆಗಳು
2. ಪದವೀಧರರು (ಇ & ಇ ಇಂಜಿನಿಯರಿಂಗ್ ಹೊರತುಪಡಿಸಿ): 305 ಹುದ್ದೆಗಳು

3. ಡಿಪ್ಲೊಮಾ ಹುದ್ದೆಗಳು (Diploma Posts): 75 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:510 ಹುದ್ದೆಗಳು

1. ಇಂಜಿನಿಯರಿಂಗ್ ಪದವಿ ಹುದ್ದೆಗಳು (Engineering Graduate Posts): ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (E&E Engineering) ವಿಷಯದಲ್ಲಿ BE/B.Tech ಪದವಿ ಪಡೆದಿರಬೇಕು.

2. ಇತರ ಪದವಿ ಹುದ್ದೆಗಳು (Non-Engineering Graduate Posts): ಅಭ್ಯರ್ಥಿಗಳು BA, B.Sc, B.Com, BBA, BCA, BBM, BE, B.Tech ಪದವಿಯಲ್ಲೊಬ್ಬರನ್ನು ಪಡೆದಿರಬೇಕು.
ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಹೊರತುಪಡಿಸಿ ಇತರ ಶಾಖೆಗಳ ಅಭ್ಯರ್ಥಿಗಳು ಈ ವಿಭಾಗಕ್ಕೆ ಅರ್ಜಿ ಸಲ್ಲಿಸಬಹುದು.

3. ಡಿಪ್ಲೊಮಾ ಹುದ್ದೆಗಳು (Diploma Posts): ಎಲ್ಲಾ ಡಿಪ್ಲೊಮಾ ವಿಭಾಗಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗಳ ಪರಿಪೂರ್ಣ ದಾಖಲೆಗಳನ್ನು ಸಲ್ಲಿಸಬೇಕು.
ಶೈಕ್ಷಣಿಕ ಪ್ರಮಾಣಪತ್ರಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಶಿಕ್ಷಣ ಮಂಡಳಿಯಿಂದ ಇರಬೇಕು.

ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯೋಮಿತಿ: BESCOM ನಿಯಮಗಳ ಪ್ರಕಾರ

ಸರ್ಕಾರದ ನಿಯಮಗಳ ಪ್ರಕಾರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸಡಿಲಿಕೆ ಅನ್ವಯವಾಗಬಹುದು.

ಇಂಜಿನಿಯರಿಂಗ್ ಪದವಿ ಹುದ್ದೆಗಳು (Engineering Graduate Posts – E&E Engineering):
➡ BE/B.Tech (Electrical & Electronics Engineering – E&E): ₹9,008/- ಪ್ರತಿ ತಿಂಗಳು
ಇತರ ಪದವಿ ಹುದ್ದೆಗಳು (Non-Engineering Graduate Posts):
➡ BA, B.Sc, B.Com, BBA, BCA, BBM, BE, B.Tech (E&E Engineering ಹೊರತುಪಡಿಸಿ ಇತರ ಶಾಖೆಗಳು): ₹9,008/- ಪ್ರತಿ ತಿಂಗಳು

ಡಿಪ್ಲೋಮಾ ಹುದ್ದೆಗಳು (Diploma Apprentices – All Branches):
➡ Diploma (ಎಲ್ಲಾ ಶಾಖೆಗಳು): ₹8,000/- ಪ್ರತಿ ತಿಂಗಳು.

ಈ ಶಿಶಿಕ್ಷು ವೇತನ (Stipend) BESCOM ನಿಯಮಗಳ ಪ್ರಕಾರ ನಿಗದಿತವಾಗಿದೆ.
ಅಧಿಕೃತ ಅಧಿಸೂಚನೆಯಲ್ಲಿ (Notification) ಯಾವುದೇ ಬದಲಾವಣೆಗಳಿದ್ದರೆ, ಅಭ್ಯರ್ಥಿಗಳು ಅದರ ಪ್ರಕಾರ ಗಮನಹರಿಸಬೇಕು.

ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಉಚಿತವಾಗಿದೆ.

1. ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡುವುದು:

▫️ಅರ್ಜಿಗಳನ್ನು ಪರಿಶೀಲಿಸಿ, ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
2. ಡಾಕ್ಯುಮೆಂಟ್ ಪರಿಶೀಲನೆ (Document Verification):

▫️ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಂದ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
▫️ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಅಗತ್ಯವಿರುವ ದಾಖಲೆಗಳನ್ನು ಪೂರ್ಣವಾಗಿ ಸಿದ್ಧಪಡಿಸಿ.
3. ಅಂತಿಮ ಅರ್ಹತಾ ಪಟ್ಟಿ ಪ್ರಕಟಣೆ (Final Merit List):

▫️ಡಾಕ್ಯುಮೆಂಟ್ ಪರಿಶೀಲನೆ ನಂತರ, ಅಂತಿಮ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
▫️ಈ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಮುಂದಿನ ಹಂತಗಳಿಗೆ ಕರೆಯಲ್ಪಡುತ್ತಾರೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ BESCOM ಅಪ್ರೆಂಟಿಸ್ 2025 ಗೆ ಅರ್ಜಿ ಸಲ್ಲಿಸಬಹುದು:

1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:
BESCOM ಅಧಿಕೃತ ವೆಬ್‌ಸೈಟ್ : CLICK HERE
2.ಅಪ್ರೆಂಟಿಸ್‌ಶಿಪ್ ಯೋಜನೆ (NATS) ನೊಂದಾಯಿಸಿ:
NATS ಪೋರ್ಟಲ್: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ:
3.ಅರ್ಜಿಯನ್ನು ನಿಮ್ಮ ವೈಯಕ್ತಿಕ ವಿವರಗಳನ್ನು ಸೇರಿಸಿ ನಮೂನೆ ಪ್ರಕಾರ ಪೂರ್ಣಗೊಳಿಸಿ.
4. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ:
ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ.
5.ಅರ್ಜಿ ಸಲ್ಲಿಸಿ:
ಅರ್ಜಿಯನ್ನು ಸಲ್ಲಿಸಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಮುದ್ರಣವನ್ನು ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 02-ಫೆಬ್ರವರಿ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-ಫೆಬ್ರವರಿ-2025
ಹೋಮ್ ಪೇಜ್ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ 

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

Comments

Leave a Reply

Your email address will not be published. Required fields are marked *