ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ಲೇಖನದಲ್ಲಿ ಭಾರತೀಯ ರೈಲ್ವೇಯಲ್ಲಿ ಖಾಲಿ ಇರುವ ಕ್ಲರ್ಕ್ ಹುದ್ದೆಗಳ ಆಹ್ವಾನದ ಕುರಿತು ತಿಳಿಸಿಕೊಡಲಾಗುತ್ತದೆ. ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಭಾರತೀಯ ರೈಲ್ವೇಯಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿದೆ
Indian North Railway Recruitment 2023ರ ಅರ್ಹತೆಗಳು:
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವಿರಾ, ಈಗ ನೀವು ಭಾರತೀಯ ರೈಲ್ವೇ RRB ಇಲಾಖೆಯಲ್ಲಿ ರೈಲು ಕ್ಲರ್ಕ್ (TC) ಹುದ್ದೆಗಳೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಲು ಉತ್ತಮ ಅವಕಾಶವನ್ನು ಹೊಂದಿದ್ದೀರಿ. ಭಾರತೀಯ ಉತ್ತರ ರೈಲ್ವೇಯಲ್ಲಿ ಹೊಸ ನೇಮಕಾತಿಯ ಸೂಚನೆಯು ಪ್ರಕಟವಾಗಿದೆ. ಈ ನೇಮಖಾತಿಯಲ್ಲಿ ಖಾಲಿ ಇರುವ ವಿವಿಧ ಕ್ರೀಡಾ ಮೀಸಲಾತಿ ಹುದ್ದೆಗಳ ನೇರ ನೇಮಕಾತಿಗೆ ಅರ್ಹರಾಗಿದ್ದ & ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಯಾವುದೇ ಪದವಿ ಪಡೆದುಕೊಂಡ ಅಭ್ಯರ್ಥಿ & ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಪೋಸ್ಟ್ ಹೆಸರು ಮತ್ತು ಬೇಕಾದ ವಿದ್ಯಾಹರ್ತೆ :
- ಕ್ರೀಡಾ ಕೋಟಾ (ಹಂತ 4-5) : ಪದವಿ
- ಕ್ರೀಡಾ ಕೋಟಾ (ಹಂತ 2-3) : 12 ನೇ ತರಗತಿ
- ಅಧಿಸೂಚನೆಯಲ್ಲಿ ಉಲ್ಲೆಕಿಸಿದಂತೆ ಸಂಬಂಧಿಸಿದ ಕ್ರೀಡೆಯಲ್ಲಿ ಉತ್ತಮ ಶ್ರೇಣಿಯನ್ನು ಪಡೆದು ಚಾಂಪಿಯನ್/ಸಾಧನೆಗೈದಿರಬೇಕು.
ವೇತನ ಶ್ರೇಣಿ (salary):
ಕೇಂದ್ರ 7ನೇ ವೇತನ ಆಯೋಗದ ಪ್ರಕಾರ ರೂ. 25500-81100 ನಿಗದಿಪಡಿಸಲಾಗಿದೆ. ಈ ವೇತನದ ಜೊತೆ ಜೊತೆಗೆ ಗ್ರೇಡ್ ಪೇ, ಡಿಎ & ಎಚ್.ಆರ್.ಎ ಇತ್ಯಾದಿ ಸೌಲಭ್ಯಗಳು ಕೂಡಾ ದೊರೆಯಲಿವೆ.
ವಯೋಮಿತಿ (Age limit ):
ಅಭ್ಯರ್ಥಿಗಳು ಈ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕನಿಷ್ಟ 18 ವರ್ಷ ಸಂಪೂರ್ಣಗೊಂಡಿರಬೇಕು & ಗರಿಷ್ಟ 25 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ :
ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿಯನ್ನು ಹೇಗೆ ಸಲ್ಲಿಸುವುದು?:
- ಈ ನೇಮಕಾತಿ ಗೆ ಅರ್ಜಿಯನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕು.
- ಈ ನೇಮಕಾತಿಯ ಅರ್ಜಿ ಸಲ್ಲಿಸುವುದು ದಿ. 03/05/2023 ರಿಂದ ಪ್ರಾರಂಭಗೊಂಡಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿ.02/06/2023.
- ಹೆಚ್ಚಿನ ಮಾಹಿತಿಗಾಗಿ www.rrnr.org ಈ website ಗೆ ಭೇಟಿ ನೀಡಿ.ಈ ವೆಬ್ಸೈಟ್ ಮೂಲಕ ಅರ್ಜಿಯನ್ನು ಕೂಡ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ (Application Fees):
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ 500/- ಪಾವತಿಸಬೇಕು. (ಪಜಾ/ ಪಪಂ/ ಮಹಿಳೆ/ EWS & ಮಹಿಳೆಯರು ರೂ. 250/- ಅರ್ಜಿ ಹಣವನ್ನು ಪಾವತಿಸಬೇಕುಗುತ್ತದೆ ).
ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್(credit ) ಅಥವಾ ಡೆಬಿಟ್(debit )ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಶುಲ್ಕವನ್ನು ಭರ್ತಿ ಮಾಡಬಹುದಾಗಿದೆ.
ನೀವೇನಾದರೂ ಭಾರತೀಯ ರೈಲ್ವೆ ರಿಕ್ರೂಟ್ಮೆಂಟ್ 2023ರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ.