ಕರ್ನಾಟಕದ ಕೊಪ್ಪಳ ಜಿಲ್ಲೆ (Koppal district) ಒಂದು ದೊಡ್ಡ ಕೈಗಾರಿಕಾ ಕ್ಷೇತ್ರದತ್ತ ಸಾಗಿದೆ. ಬಲ್ದೋಟಾ ಸಮೂಹ ಸಂಸ್ಥೆ (Baldota Group) 54 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುತ್ತಿದ್ದ ಉಕ್ಕು ಕಾರ್ಖಾನೆಯ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. 10.5 ದಶ ಲಕ್ಷ ಟನ್ ಸಾಮರ್ಥ್ಯ ಹೊಂದಿರುವ ಈ ಇಂಟಿಗ್ರೇಟೆಡ್ ಉಕ್ಕಿನ ಕಾರ್ಖಾನೆ (Integrated Steel Plant) ಕರ್ನಾಟಕದ ಉಕ್ಕು ಉದ್ಯಮವನ್ನು ಬದಲಾಯಿಸಲಿದೆ ಎಂಬ ನಿರೀಕ್ಷೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಬಲ್ದೋಟಾ ಸಮೂಹ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ರಾಹುಲ್ ಕುಮಾರ್ ಬಲ್ದೋಟಾ ಮಾತನಾಡುತ್ತಾ, ಫೆಬ್ರವರಿ 11 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಒಪ್ಪಂದ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕಕ್ಕೆ ಹೊಸ ಉದ್ಯೋಗ ಅವಕಾಶಗಳು:
ಬಲ್ದೋಟಾ ಸಮೂಹ ಸಂಸ್ಥೆಯು ಈ ಕಾರ್ಖಾನೆಯನ್ನು Baldota Steel and Power Limited (BSPL) ಹೆಸರಿನಲ್ಲಿ ಸ್ಥಾಪಿಸಲಿದೆ. ಈ ಹೊಸ ಕಂಪನಿಯ ಮೂಲಕ ಉಕ್ಕು ಉತ್ಪಾದನೆ ಹೆಚ್ಚಾಗುವುದು ಮಾತ್ರವಲ್ಲ, ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಇದು ಪ್ರಮುಖ ಹೆಜ್ಜೆಯಾಗಲಿದೆ ಎಂದು ತಿಳಿಯಬಹುದು.
ಬಲ್ದೋಟಾ ಸಮೂಹ ಗಣಿಗಾರಿಕೆಯಿಂದ ಉಕ್ಕು ಉತ್ಪಾದನೆಯವರೆಗೆ ಮುಂಚೂಣಿ ಸಂಸ್ಥೆ:
(Baldota Group is a leading company from mining to steel production) :
70 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಬಲ್ದೋಟಾ ಸಮೂಹ ಸಂಸ್ಥೆ ಖನಿಜಗಳ ಅನ್ವೇಷಣೆ, ಗಣಿಗಾರಿಕೆ, ಕೈಗಾರಿಕಾ ಅನಿಲ, ಪೆಲೆಟ್ಗಳ ಉತ್ಪಾದನೆ, ಪವನ ವಿದ್ಯುತ್, ನೌಕಾ ಸಾರಿಗೆ ಮತ್ತು ತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಕೇಂದ್ರ ಸರ್ಕಾರದಿಂದ ಸತತ 6 ವರ್ಷಗಳಿಂದ ಪಂಚತಾರಾ ರೇಟಿಂಗ್ ಪ್ರಶಸ್ತಿ ಪಡೆಯುವ ಮೂಲಕ ಇದು ತನ್ನ ಕಾರ್ಯಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಮೆರೆದಿದೆ.
ಸಾಮಾಜಿಕ ಹೊಣೆಗಾರಿಕೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮುಂಚೂಣಿ :
ಬಲ್ದೋಟಾ ಸಮೂಹ ಸಂಸ್ಥೆಯು ಉದ್ಯಮದೊಂದಿಗೆ ಸಾಮಾಜಿಕ ಹೊಣೆಗಾರಿಕೆಯತ್ತ (CSR) ವಿಶೇಷ ಗಮನ ಹರಿಸಿದೆ. 20 ಗ್ರಾಮಗಳನ್ನು ದತ್ತು ತೆಗೆದುಕೊಂಡು, ಶಿಕ್ಷಣ, ಆರೋಗ್ಯ ಶಿಬಿರಗಳು, ನೈರ್ಮಲ್ಯತೆ ಮತ್ತು ಸ್ತ್ರೀ ಸಬಲೀಕರಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅಲ್ಲದೆ, ಸುಮಾರು 20 ಲಕ್ಷ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಿದೆ.
ಕನ್ನಡದ ಹೆಮ್ಮೆಯ ಉಕ್ಕು ಕಾರ್ಖಾನೆ ಎಂದು ಹೇಳಿಕೊಳ್ಳಬಹುದು ಹೌದು,ಕರ್ನಾಟಕದಲ್ಲಿ ಉಕ್ಕು ಉದ್ಯಮಕ್ಕೆ ಹೊಸ ರೂಪ ನೀಡುವ ಈ ದೊಡ್ಡ ಉಕ್ಕು ಕಾರ್ಖಾನೆಯು ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲಿದೆ. ಭಾರತದ ಉಕ್ಕು ಉತ್ಪಾದನೆಯಲ್ಲಿಯೂ ಮಹತ್ವದ ಪಾತ್ರ ವಹಿಸುವ ಈ ಕಾರ್ಖಾನೆ ರಾಜ್ಯದ ಹೆಮ್ಮೆಯ ಉದ್ಯಮವೆನ್ನಿಸಲಿದೆ.
ಇನ್ನೂ ಕೊನೆಯದಾಗಿ ಹೇಳುವುದಾದರೆ,ಇದು ಕೇವಲ ಉಕ್ಕಿನ ತಯಾರಿಕೆಗೂ ಮಾತ್ರ ಸೀಮಿತವಾಗದೆ, ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಒಂದು ಮಹತ್ವದ ಬೆಳವಣಿಗೆ ಎಂದು ಹೇಳಬಹುದಾಗಿದೆ. ಬಲ್ದೋಟಾ ಸಮೂಹದ ಈ ಹೊಸ ಯೋಜನೆ ಕರ್ನಾಟಕವನ್ನು ಉಕ್ಕು ಉತ್ಪಾದನೆಯ ಪ್ರಮುಖ ಕೇಂದ್ರವನ್ನಾಗಿ ಪರಿವರ್ತಿಸಲಿದೆ ಎಂದು ಹೇಳಬಹುದು.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ :
- SDA/FDA ಹುದ್ದೆಗಳ ಬೃಹತ್ ನೇಮಕಾತಿ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
- MSIL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
- ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ
ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Leave a Reply