Income Tax: ಈ ಕೆಲಸ ಮಾಡಿದ್ರೆ ಮಾತ್ರ ಇನ್ಕಮ್ ಟ್ಯಾಕ್ಸ್ ಇರಲ್ಲ, ಬೀಳುತ್ತೆ ಬಾರಿ ದಂಡ

Categories:

2025ರ ಬಜೆಟ್‌ನಲ್ಲಿ ಆದಾಯ ತೆರಿಗೆ(Income Tax) ನಿಯಮಗಳಲ್ಲಿ ಮಹತ್ವದ ಬದಲಾವಣೆ!

ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಆದಾಯ ತೆರಿಗೆ  ನಿಯಮಗಳು ಪ್ರಭಾವ ಬೀರುತ್ತವೆ. ಮಧ್ಯಮ ವರ್ಗ, ಉದ್ಯೋಗಸ್ಥರು, ಸ್ವತಂತ್ರ ಉದ್ಯೋಗಿಗಳು ಮತ್ತು ವಯೋವೃದ್ಧರು—ಎಲ್ಲರಿಗೂ ಸರ್ಕಾರದ ಆದಾಯ ತೆರಿಗೆ ನೀತಿಯು ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 2025-26ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್‌ನಲ್ಲಿ ಕೆಲವು ಮಹತ್ವದ ಆದಾಯ ತೆರಿಗೆ ಬದಲಾವಣೆಗಳನ್ನು ಘೋಷಿಸಿದ್ದಾರೆ. ಈ ಬದಲಾವಣೆಗಳಿಂದ ಹಲವಾರು ಜನರಿಗೆ ಭಾರೀ ಆದಾಯ ತೆರಿಗೆ ವಿನಾಯಿತಿ ಸಿಕಿದ್ದು, ಹಾಗೆಯೇ ಐಟಿಆರ್ (Income Tax Return – ITR) ಸಲ್ಲಿಸುವ ಅಗತ್ಯ ಮತ್ತು ಅದನ್ನು ತಪ್ಪಿಸಿದರೆ ಆಗುವ ಪರಿಣಾಮಗಳ ಬಗ್ಗೆ ಸ್ಪಷ್ಟತೆ ನೀಡಲಾಗಿದೆ. ಐಟಿಆರ್ ಸಲ್ಲಿಸುವುದನ್ನು ತಪ್ಪಿಸದರೆ ಆಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹೊಸ ಆದಾಯ ತೆರಿಗೆ ವಿನಾಯಿತಿ ಮಿತಿ – 12 ಲಕ್ಷ! :

ಈ ಬಜೆಟ್‌ನ ಪ್ರಮುಖ ಘೋಷಣೆಗಳಲ್ಲಿ ಆದಾಯ ತೆರಿಗೆ ವಿನಾಯಿತಿಯೂ ಕೂಡ ಒಂದು. ಸರ್ಕಾರ ಹೊಸ ತೆರಿಗೆ ಪದ್ಧತಿಯಲ್ಲಿ (New Tax Regime) ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ವಾರ್ಷಿಕ ₹7 ಲಕ್ಷದಿಂದ ₹12 ಲಕ್ಷಕ್ಕೆ ಹೆಚ್ಚಿಸಿದೆ. ಇದರಿಂದಾಗಿ ತಿಂಗಳಿಗೆ ₹1 ಲಕ್ಷ ಆದಾಯ ಹೊಂದಿರುವ ವ್ಯಕ್ತಿಗಳು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಇದು ಮುಖ್ಯವಾಗಿ ಹೊಸ ತೆರಿಗೆ ಪದ್ಧತಿಯನ್ನು ಅನುಸರಿಸುವವರಿಗೇ ಅನ್ವಯಿಸುತ್ತದೆ. ಹಳೆಯ ತೆರಿಗೆ ಪದ್ಧತಿಯಲ್ಲಿ (Old Tax Regime) ಯಾವುದೇ ವಿನಾಯಿತಿ ನೀಡಲಾಗಿಲ್ಲ.

ಆದಾಗ್ಯೂ, ಈ ತೆರಿಗೆ ವಿನಾಯಿತಿಯನ್ನು ಪಡೆಯಲು ನೀವು ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವುದು ಅತ್ಯಗತ್ಯ. ಸುಮ್ಮನೆ ‘ನಾನು ತೆರಿಗೆ ವಿನಾಯಿತಿಯ ಒಳಗಿದ್ದೇನೆ’ ಎಂದು ಭಾವಿಸಿ ಐಟಿಆರ್ ಸಲ್ಲಿಸದೆ ಇದ್ದರೆ, ಆ ವಿನಾಯಿತಿಯ ಪ್ರಯೋಜನ ಸಿಗುವುದಿಲ್ಲ.

ಯಾರೆಲ್ಲಾ ಐಟಿಆರ್ ಸಲ್ಲಿಸುವುದು ಕಡ್ಡಾಯ?

ನಿಮ್ಮ ಒಟ್ಟು ವಾರ್ಷಿಕ ಆದಾಯವು ₹12 ಲಕ್ಷಕ್ಕಿಂತ ಕಡಿಮೆಯಿದ್ದರೂ, ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಬಹುದು. ಆದಾಯ ತೆರಿಗೆ ನಿಯಮಗಳ ಪ್ರಕಾರ, ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಯನ್ನು ಮೀರಿದರೆ, ಐಟಿಆರ್ ಸಲ್ಲಿಸುವುದು ಅಗತ್ಯ.

ಉದಾಹರಣೆಗೆ ನೋಡುವುದಾದರೆ, ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯ ₹4.25 ಲಕ್ಷ ಆಗಿದ್ದರೆ, ಇದು ₹12 ಲಕ್ಷದ ವಿನಾಯಿತಿ ಮಿತಿಯೊಳಗೇ ಬರುತ್ತದೆ. ಆದ್ದರಿಂದ, ಅವರಿಗೆ ಶೂನ್ಯ ತೆರಿಗೆ (Zero Tax) ಅನ್ವಯವಾಗಬಹುದು.
ಆದರೆ, ಅವರ ಆದಾಯ ₹6 ಲಕ್ಷವಾದರೆ, ಅದು ಹೊಸ ತೆರಿಗೆ ಪದ್ಧತಿಯ ಪ್ರಕಾರ ಮೂಲ ವಿನಾಯಿತಿ ಮಿತಿಯಾದ ₹4 ಲಕ್ಷವನ್ನು ಮೀರಲಿದೆ. ಆದ್ದರಿಂದ, ಶೂನ್ಯ ತೆರಿಗೆ ಸಿಗಬೇಕೆಂದರೆ, ಅವರು ಐಟಿಆರ್ ಸಲ್ಲಿಸಲೇಬೇಕು.

ಹೊಸ ತೆರಿಗೆ ಪದ್ಧತಿಯ ಹೊಸ ಸ್ಪ್ಯಾಬ್ (Spab) ಹೀಗಿದೆ :

0-4 ಲಕ್ಷದವರೆಗಿನ ಒಟ್ಟು ಆದಾಯದ ಮೇಲೆ 0% ತೆರಿಗೆ
4-8 ಲಕ್ಷದವರೆಗಿನ ಆದಾಯದ ಮೇಲೆ 5% ತೆರಿಗೆ
8-12 ಲಕ್ಷದವರೆಗಿನ ಆದಾಯದ ಮೇಲೆ 10% ತೆರಿಗೆ
12-16 ಲಕ್ಷದವರೆಗಿನ ಆದಾಯದ ಮೇಲೆ 15% ತೆರಿಗೆ
16-20 ಲಕ್ಷದವರೆಗಿನ ಆದಾಯದ ಮೇಲೆ 20% ತೆರಿಗೆ
20-24 ಲಕ್ಷದವರೆಗಿನ ಆದಾಯದ ಮೇಲೆ 25% ತೆರಿಗೆ
24 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ 30% ತೆರಿಗೆ

ಐಟಿಆರ್ ಸಲ್ಲಿಸದಿದ್ದರೆ ಏನಾಗುತ್ತದೆ? :

ನೀವು ಐಟಿಆರ್ ಸಲ್ಲಿಸಬೇಕಾದವರಾಗಿದ್ದರೂ ಅದನ್ನು ಸಲ್ಲಿಸದಿದ್ದರೆ, ಆದಾಯ ತೆರಿಗೆ ಇಲಾಖೆ ನಿಮಗೆ ದಂಡವನ್ನು ವಿಧಿಸಬಹುದು.
ದಂಡದ ಮೊತ್ತ ₹1,000 ರಿಂದ ₹5,000 ವರೆಗೆ ಇರಬಹುದು.

ನೀವು ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದರೆ, ದಂಡದ ಮೊತ್ತ ಕೇವಲ ₹1,000 ಆಗಿರುತ್ತದೆ.
ತೆರಿಗೆ ಪಾವತಿಸಬೇಕಾದವರು ಐಟಿಆರ್ ಸಲ್ಲಿಸದೇ ಇದ್ದರೆ, ದಂಡದ ಜೊತೆಗೆ ಬಡ್ಡಿಯ (Interest) ಹೊರೆಯನ್ನೂ ಎದುರಿಸಬೇಕಾಗುತ್ತದೆ ಆದ್ದರಿಂದ ಎಚ್ಚರವಿರಲಿ.
ಅದರ ಜೊತೆಗೆ, ದೀರ್ಘಾವಧಿಯಲ್ಲಿ ಐಟಿಆರ್ ಸಲ್ಲಿಸದಿದ್ದರೆ, ತೆರಿಗೆ ಇಲಾಖೆಯು ನಿಮಗೆ ನೋಟೀಸ್ ಕಳುಹಿಸಬಹುದು.
ಬಾಕಿಯಿರುವ ತೆರಿಗೆ ಮೊತ್ತದ ಮೇಲೆ ಸೆಕ್ಷನ್ 234A ಅಡಿಯಲ್ಲಿ ಬಡ್ಡಿಯನ್ನೂ ಪಾವತಿಸಬೇಕಾಗಬಹುದು.
ರಿಯಲ್ ಎಸ್ಟೇಟ್, ಬ್ಯಾಂಕ್ ಸಾಲ ಅಥವಾ ಇತರ ಹಣಕಾಸು ವಹಿವಾಟುಗಳಲ್ಲಿ, ಐಟಿಆರ್ ಸಲ್ಲಿಸದಿದ್ದರೆ ಸಂಕಷ್ಟ ಎದುರಾಗಬಹುದು ಆದ್ದರಿಂದ ಜಾಗರೂಕರಾಗಿರಿ.

ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ಘೋಷಣೆ !

ಹಿರಿಯ ನಾಗರಿಕರು (Senior Citizens) ಈ ಬಜೆಟ್‌ನಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಅವರಿಗಾಗಿ ಕೆಲವು ವಿಶೇಷ ವಿನಾಯಿತಿಗಳನ್ನು ಘೋಷಿಸಲಾಗಿದೆ.
ಠೇವಣಿಗಳ (Fixed Deposits) ಮೇಲೆ ಬಡ್ಡಿ ಆದಾಯ ತೆರಿಗೆ ವಿನಾಯಿತಿ ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ.
(ಹಿಂದಿನ ಮಿತಿಯು ಕೇವಲ ₹50,000 ಮಾತ್ರ ಇತ್ತು)
ಬಾಡಿಗೆ ಆದಾಯದ (Rental Income) ಮೇಲಿನ ಟಿಡಿಎಸ್ ಮಿತಿ ₹2.4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಲಾಗಿದೆ.
(ಹಿರಿಯ ನಾಗರಿಕರು ಬಾಡಿಗೆ ಆದಾಯದಿಂದ ಹೆಚ್ಚು ಲಾಭ ಪಡೆಯುವಂತಾಗಿದೆ)

2025ರ ಬಜೆಟ್‌ನ ಹೊಸ ಆದಾಯ ತೆರಿಗೆ ನಿಯಮಗಳು, ವಿಶೇಷವಾಗಿ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿರುವವರಿಗೆ ದೊಡ್ಡ ಪ್ರಯೋಜನ ತರುವಂತಿವೆ. ತಿಂಗಳಿಗೆ ₹1 ಲಕ್ಷವರೆಗೆ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ, ಈ ವಿನಾಯಿತಿಯನ್ನು ಪಡೆಯಲು ಐಟಿಆರ್ ಸಲ್ಲಿಸುವುದು ಅತ್ಯಗತ್ಯ. ಹೊಸ ತೆರಿಗೆ ಪರಿಮಾಣಗಳು ಸರಳಗೊಂಡಿವೆ, ಮತ್ತು ಹಿರಿಯ ನಾಗರಿಕರಿಗೆ ಹೆಚ್ಚಿನ ಆದಾಯ ತೆರಿಗೆ (Income tax) ವಿನಾಯಿತಿಗಳನ್ನು ನೀಡಲಾಗಿದೆ. ಆದರೆ, ಐಟಿಆರ್ ಸಲ್ಲಿಸದೆ ಇದ್ದರೆ ದಂಡ ಮತ್ತು ಬಡ್ಡಿಯ ಹೊರೆಯನ್ನು ಅನುಭವಿಸಬೇಕಾಗಬಹುದು.
ನೀವು ಹೊಸ ತೆರಿಗೆ ಪದ್ಧತಿಯಡಿ ತೆರಿಗೆ ವಿನಾಯಿತಿ ಪಡೆಯಲು ಅರ್ಹರೇ? ಐಟಿಆರ್ ಸಲ್ಲಿಸಲು ಮರೆಯಬೇಡಿ!

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Comments

Leave a Reply

Your email address will not be published. Required fields are marked *