Job Alert: ರಾಜ್ಯ ಅಬಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ. ಶೀಘ್ರದಲ್ಲಿ ಅಧಿಸೂಚನೆ ಪ್ರಕಟ.

Categories:

ರಾಜ್ಯ ಅಬಕಾರಿ ಇಲಾಖೆಯಲ್ಲಿ ಶೀಘ್ರದಲ್ಲೇ 1207 ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಳಿದ್ದು ಅಭ್ಯರ್ಥಿಗಳಿಗಾಗಿ ಸಂಪೂರ್ಣ ಮಾಹಿತಿ ಹೀಗಿದೆ : ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಸರ್ಕಾರವು ( Karnataka Government) ನಿರುದ್ಯೋಗಿಗಳಿಗೆ ಉತ್ಸಾಹ ತುಂಬುವ ನಿಟ್ಟಿನಲ್ಲಿ ಪ್ರಮುಖ ಘೋಷಣೆಯೊಂದನ್ನು ಹೊರಡಿಸಿದೆ. ರಾಜ್ಯದ ಅಬಕಾರಿ ಇಲಾಖೆ (Department of Excise) ಯಲ್ಲಿ ನೇರ ನೇಮಕಾತಿಯ ಮೂಲಕ 1207 ಹುದ್ದೆಗಳಿಗೆ ಭರ್ತಿಯನ್ನು ಮಾಡಲಿದ್ದು, ಈ ಕುರಿತು ಸರ್ಕಾರ ಅನುಮೋದನೆ ನೀಡಿದೆ. ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದು, ಅಬಕಾರಿ ಆಯುಕ್ತರಿಗೆ (Commissioner of Excise) ಈ ನೇಮಕಾತಿಯನ್ನು ಪ್ರಾರಂಭಿಸಲು ಸೂಚಿಸಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ (Application) ಸಲ್ಲಿಸಲು ತಯಾರಿ ನಡೆಸುತ್ತಿರುವ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಹುದ್ದೆಗಳ ವೈವಿಧ್ಯಮಯ ಮಾಹಿತಿ ಹಾಗೂ ವೇತನ ಶ್ರೇಣಿಗಳ ವಿವರ ತಿಳಿಯುವುದು ಅತ್ಯಗತ್ಯವಾಗಿದೆ. ಈ ನಿರ್ಧಾರವು ಉದ್ಯೋಗಕ್ಕಾಗಿ ಕಾಯುತ್ತಿರುವ ಹಲವು ಅಭ್ಯರ್ಥಿಗಳಿಗೆ ದೊಡ್ಡ ಅವಕಾಶವನ್ನು ಕಲ್ಪಿಸಲಿದೆ. ಯಾವ ಯಾವ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ ಹಾಗೂ ಎಷ್ಟು ಸಂಭಾವನೆ ನೀಡಲಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಗ್ರೂಪ್‌ವಾರು ಹುದ್ದೆಗಳ (Group wise posts) ವಿವರಗಳು ಮತ್ತು ವೇತನ ಶ್ರೇಣಿಗಳು ಕೆಳಗಿಂನಂತಿವೆ :

ಅಬಕಾರಿ ಇಲಾಖೆಯಲ್ಲಿ ಗ್ರೂಪ್ ಎ, ಬಿ, ಸಿ, ಡಿ (Group A, B, C, D) ಹುದ್ದೆಗಳ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳು ಲಭ್ಯವಿದ್ದು, ಅವುಗಳ ವಿವರಣೆ ಮತ್ತು ಅವುಗಳಿಗೆ ಸಂಬಂಧಿಸಿದ ಸಂಭಾವನೆಗಳು ಈ ಕೆಳಗಿನಂತಿವೆ:

ಗ್ರೂಪ್ ಎ ಹುದ್ದೆಗಳು (Group A Posts) :

ಆಯುಕ್ತರು (ಭಾ.ಆ.ಸೇ): ₹1,44,200-₹2,18,200
ಅಬಕಾರಿ ಅಪರ ಆಯುಕ್ತರು (ಕೇಂದ್ರಸ್ತಾನ ಮತ್ತು ತನಿಖೆ): ₹67,700-₹2,08,700
ಅಬಕಾರಿ ಜಂಟಿ ಆಯುಕ್ತರು: ₹82,000-₹1,17,700
ಅಬಕಾರಿ ಅಪರ ಆಯುಕ್ತರು (ಭಾ.ಆ.ಸೇ) (ಕ.ಆ.ಸೇ) : ₹74,400-₹1,09,600
ಹಿರಿಯ ಲೆಕ್ಕಾಧಿಕಾರಿ: ₹67,700-₹2,08,700
ಮುಖ್ಯ ರಾಸಾಯನಿಕ ತಜ್ಞ: ₹52,650-₹97,100
ಅಬಕಾರಿ ಅಪರ ಆಯುಕ್ತರು : ₹90,500-1,23,300
ಅಬಕಾರಿ ಉಪ/ಜಂಟಿ ಆಯುಕ್ತರು (ಆಡಳಿತ/ಕೆ.ಎ.ಎಸ್) : ₹.74,400-1,09,600
ಅಬಕಾರಿ ಉಪ ಆಯುಕ್ತರು : ₹.74,400-1,09,600
ಜಂಟಿ ನಿರ್ದೇಶಕರು (ಸಾಂಖ್ಯಿಕ): ₹74,400-1,09,600
ಹಿರಿಯ ಆಡಿಟ್ ಆಫೀಸರ್ : ₹56,100-1,77,500.
ಅಬಕಾರಿ ಅಧೀಕ್ಷಕರು : ₹52,650-97,100.

ಗ್ರೂಪ್ ಬಿ ಹುದ್ದೆಗಳು (Group B Posts) :

ಸಹಾಯಕ ನಿರ್ದೇಶಕರು (Assistant Director) (ಸಾಂಖ್ಯಿಕ): ₹43,100-₹83,900
ಅಬಕಾರಿ ಉಪ ಅಧೀಕ್ಷಕರು: ₹40,900-₹78,200
ಹಿರಿಯ ರಾಸಾಯನಿಕ ತಜ್ಞ: ₹40,900-₹78,200
ಸಹಾಯಕ ಲೆಕ್ಕಾಧಿಕಾರಿ: ₹47,600-₹1,51,100

ಗ್ರೂಪ್ ಸಿ ಹುದ್ದೆಗಳು (Group C Posts) :

ಅಬಕಾರಿ ನಿರೀಕ್ಷಕರು: ₹37,900-₹70,850
ಅಬಕಾರಿ ಉಪ ನಿರೀಕ್ಷಕರು: ₹30,350-₹58,250
ಶೀಘ್ರಲಿಪಿಗಾರರು: ₹27,650-₹52,650
ಅಬಕಾರಿ ಪೇದೆ: ₹21,400-₹42,000
ಹಿರಿಯ ರಾಸಾಯನಿಕ ತಜ್ಞ : ₹33,450-₹62,600
ಲ್ಯಾಬ್ ಸಹಾಯಕ : ₹18,600-₹32,600
ಕಚೇರಿ ಅಧೀಕ್ಷಕರು : ₹37,900-70,850
ಪ್ರಥಮ ದರ್ಜೆ ಸಹಾಯಕರು: ₹27,650-₹52,650
ದ್ವಿತೀಯ ದರ್ಜೆ ಸಹಾಯಕರು : ₹21,400-₹42,000
ಬೆರಳಚ್ಚುಗಾರರು : ₹21,400-₹42,000
ಅಬಕಾರಿ ಮುಖ್ಯ ಪೇದೆ : ₹23,500-₹47,650
ಹಿರಿಯ ವಾಹನ ಚಾಲಕರು : ₹27,650-₹52,650
ಚಾಲಕರು / ಲಾಂಜ್ /ಡಿಂಗಿ ಚಾಲಕರು: ₹21,400-₹42,000

ವೇತನ ಶ್ರೇಣಿಗಳ ವಿಶೇಷತೆ (Specialization of Pay Scales) :

ಈ ಹುದ್ದೆಗಳ ವೇತನ ಶ್ರೇಣಿಗಳು ಉನ್ನತ ಮಟ್ಟದಿಂದ ಪ್ರಾರಂಭವಾಗಿ ಇತರ ಹುದ್ದೆಗಳ ಮಟ್ಟಕ್ಕೆ ವ್ಯತ್ಯಾಸಗೊಂಡಿವೆ. ಈ ಮೂಲಕ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ (Eligibility) ಮತ್ತು ಅನುಭವವನ್ನು (Experience) ಆಧರಿಸಿ ತಮಗೆ ಸೂಕ್ತವಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಲಹೆ:

ಈ ಸಮಯದಲ್ಲಿ, ಈ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಪರೀಕ್ಷಾ ಮಾದರಿಗಳು, ಅರ್ಹತಾ ಮಾನದಂಡಗಳು, ಹಾಗೂ ಅರ್ಜಿ ಸಲ್ಲಿಕೆಗೆ ತಯಾರಿ ನಡೆಸುವುದು ಉತ್ತಮ. ಪ್ರತಿ ಹುದ್ದೆಗೆ ವಿಶೇಷ ಕೌಶಲ್ಯಗಳು (Special Skills) ಮತ್ತು ಅರ್ಹತೆಯ ಅವಶ್ಯಕತೆಗಳಿರುವುದರಿಂದ, ಎಲ್ಲಾ ವಿವರಗಳನ್ನು ಗಮನಿಸುವುದು ಅವಶ್ಯಕವಾಗಿದೆ.

ಕರ್ನಾಟಕ ಸರ್ಕಾರವು (Karnataka Government) ಅಬಕಾರಿ ಇಲಾಖೆಯಲ್ಲಿ 1,207 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಅಭ್ಯರ್ಥಿಗಳು ಅಧಿಸೂಚನೆ ಹೊರಡಿಸಿದ ನಂತರ ಅಬಕಾರಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ (Website)  https://stateexcise.karnataka.gov.in/ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಅಧಿಸೂಚನೆಯಲ್ಲಿ ತಿಳಿಸಲಾಗುತ್ತದೆ. ಆದ್ದರಿಂದ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಅನ್ನು ನಿಯಮಿತವಾಗಿ ಪರಿಶೀಲಿಸುವುದು ಶ್ರೇಯಸ್ಕರ.

ಅಬಕಾರಿ ಇಲಾಖೆಯ ಈ ಉದ್ಯೋಗಾವಕಾಶವು ಸರ್ಕಾರಿ ಉದ್ಯೋಗಕ್ಕಾಗಿ (Government Job) ಪ್ರಯತ್ನಿಸುತ್ತಿರುವ ಅಭ್ಯರ್ಥಿಗಳಿಗೆ ತಮ್ಮ ಭವಿಷ್ಯವನ್ನು ಕಟ್ಟುವ ಮಹತ್ತರ ವೇದಿಕೆಯಾಗಿದೆ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Comments

Leave a Reply

Your email address will not be published. Required fields are marked *