ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ಲೇಖನದಲ್ಲಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) 2023ರ ನೇಮಕಾತಿ ಅಡಿಯಲ್ಲಿ ಕೆಲಸವನ್ನು ಪಡೆದುಕೊಳ್ಳುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ಒಂದು ಭರ್ಜರಿ ನೇಮಕಾತಿ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.
– (MRPL) ನೇಮಕಾತಿ(Recruitment) 2023ರ ಅವಲೋಕನ –
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಒಂದು ವರ್ಗ 1 ಮಿನಿರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ (CPSE). MRPL ಕರ್ನಾಟಕ ರಾಜ್ಯದ (ಭಾರತ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ನಗರದ ಉತ್ತರಕ್ಕೆ ಸುಂದರವಾದ ಗುಡ್ಡಗಾಡು ಪ್ರದೇಶದಲ್ಲಿದೆ. 15.0MMTPA (ವರ್ಷಕ್ಕೆ ಮಿಲಿಯನ್ ಮೆಟ್ರಿಕ್ ಟನ್) ಸಂಸ್ಕರಣಾಗಾರವು ಸಂಕೀರ್ಣವಾದ ದ್ವಿತೀಯ ಸಂಸ್ಕರಣಾ ಘಟಕಗಳೊಂದಿಗೆ ಬಹುಮುಖ ವಿನ್ಯಾಸವನ್ನು ಪಡೆದುಕೊಂಡಿದೆ ಮತ್ತು ವಿವಿಧ APIಗಳ ಕ್ರೂಡ್‌ಗಳನ್ನು ಪ್ರಕ್ರಿಯೆಗೊಳಿಸಲು ಹೆಚ್ಚಿನ ನಮ್ಯತೆಯನ್ನು ಹೊಂದಿದೆ, ವಿವಿಧ ಗುಣಮಟ್ಟದ ಉತ್ಪನ್ನಗಳನ್ನು ತಲುಪಿಸುತ್ತದೆ.
ಎಂಆರ್‌ಪಿಎಲ್‌ನ ಸಂಸ್ಕರಣಾಗಾರವು ಪೆಟ್ ಕೋಕ್ ಮತ್ತು ಪಾಲಿಪ್ರೊಪಿಲೀನ್ ಜೊತೆಗೆ ನಾಫ್ತಾ, ಎಲ್‌ಪಿಜಿ, ಮೋಟಾರ್ ಸ್ಪಿರಿಟ್, ಹೈ-ಸ್ಪೀಡ್ ಡೀಸೆಲ್, ಸೀಮೆಎಣ್ಣೆ, ಏವಿಯೇಷನ್ ಟರ್ಬೈನ್ ಇಂಧನ, ಗಂಧಕ, ಕ್ಸೈಲೀನ್, ಬಿಟುಮೆನ್ ಮುಂತಾದ ಪೆಟ್ರೋಲಿಯಂ ಉತ್ಪನ್ನಗಳ ಸಂಪೂರ್ಣ ಶ್ರೇಣಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾರತ ಸರಕಾರದ ಉದ್ಯಮ ಮತ್ತು ಓಎನ್ ಜಿಸಿ ಲಿಮಿಟೆಡ್ ಇದರ ಅಂಗ ಸಂಸ್ಥೆಯಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಉದ್ಯೋಗಕ್ಕೆ ಸಂಬಂಧಪಟ್ಟ ಹುದ್ದೆಗಳು ಕೆಳಗಿನಂತಿವೆ :
ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು: |
ಇಲಾಖೆ ಹೆಸರು | ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) |
ಹುದ್ದೆಗಳ ಹೆಸರು | ವಿವಿಧ ಹುದ್ದೆಗಳು |
ವರ್ಷ | 2023 |
ಒಟ್ಟು ಹುದ್ದೆಗಳು | 50 |
ಅಪ್ಲಿಕೇಶನ್ ವಿಧಾನ | ಆನ್ಲೈನ್ |
MRPL ಹುದ್ದೆಗಳ ಮಾಹಿತಿ 2023 :
ಹುದ್ದೆ ಅಥವಾ ವಿಷಯಗಳ ಹೆಸರು :
ಕೆಮಿಕಲ್ : 19
ಎಲೆಕ್ಟ್ರಿಕಲ್ : 5
ಮೆಕಾನಿಕಲ್ : 19
ಕೆಮಿಸ್ಟ್ರಿ : 1
ಡ್ರಾಫ್ಟ್ ಮ್ಯಾನ್ : 1
ಸೆಕ್ರೆಟರಿ : 5
ಒಟ್ಟು 50 ಖಾಲಿ ಹುದ್ದೆಗಳು
ಉದ್ಯೋಗ ಸ್ಥಳ : ಮಂಗಳೂರು
MRPL ಹುದ್ದೆಗೆ ಬೇಕಾದ ಅರ್ಹತೆಗಳು :
- ವಿದ್ಯಾಹರ್ತೆಯು MRPL ಅಧಿಸೂಚನೆಯ ಪ್ರಕಾರ ಇರುತ್ತದೆ
- ವಯೋಮಿತಿ(Age limit): ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು.
ವಿವಿಧ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ವಿಭಿನ್ನವಾಗಿರುತ್ತದೆ.
ಸಂಬಳದ ವಿವರ :
MRPL ಕಂಪನಿ ಉದ್ಯೋಗಿಗಳಿಗೆ ಉತ್ತಮ ಸಂಬಳ ದೊರೆಯಲಿದೆ. ಪ್ರತಿ ತಿಂಗಳು ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.25,000/- ದಿಂದ ರೂ.86,400/- ದೊರೆಯುತ್ತದೆ.
ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?:
ಅಭ್ಯರ್ಥಿಗಳ ಅಪ್ಲಿಕೇಶನ್ಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುವುದು ನಂತರ ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ. ಕೊನೆಯದಾಗಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ
ಅರ್ಜಿ ಶುಲ್ಕ ಎಷ್ಟಿರುತ್ತದೆ?:
ಆನ್ಲೈನ್ ಮುಖಾಂತರ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ, ಇದು ಸಂಪೂರ್ಣ ಉಚಿತವಾಗಿದೆ.
ಅರ್ಜಿಯನ್ನು ಹೀಗೆ ಸಲ್ಲಿಸಿ :
ಹಂತ 1: ಮೊದಲಿಗೆ ಅರ್ಜಿಗಳನ್ನು ಆನ್ಲೈನ್ ಮುಖಾಂತರ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ತರಳಬೇಕು, ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಹಂತ 2: ನಂತರ ಅರ್ಜಿಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅರ್ಜಿಗಳನ್ನು ಸಲ್ಲಿಸಿ.
ಅರ್ಜಿಗಳನ್ನು ಸಲ್ಲಿಸಲು ಆನ್‌ಲೈನ್ ಪೋರ್ಟಲ್ ತೆರೆಯುವ ದಿನಾಂಕ: 22/05/2023 ರ ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಕೊನೆಯ ದಿನಾಂಕ: 16/06/2023 ರ ಸಂಜೆ 6 ಗಂಟೆಯವರೆಗೆ ಇರುತ್ತದೆ.
ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಅರ್ಜಿಯ ಪ್ರತಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ: 20/06/2023
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 22/05/2023 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 16/06/2023 |
ಪ್ರಮುಖ ಲಿಂಕುಗಳು |
ಹೋಮ್ ಪೇಜ್ |
ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.
ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********