Home » Trending News » ಪ್ರಥಮ ಪಿಯುಸಿ ಫಲಿತಾಂಶ ಮತ್ತು ಪೂರಕ ಪರೀಕ್ಷೆಗಳ ದಿನಾಂಕ ಪ್ರಕಟ

ಪ್ರಥಮ ಪಿಯುಸಿ ಫಲಿತಾಂಶ ಮತ್ತು ಪೂರಕ ಪರೀಕ್ಷೆಗಳ ದಿನಾಂಕ ಪ್ರಕಟ

WhatsApp Group Join Now
Telegram Group Join Now
IMG 20240328 WA0003

ಶೀಘ್ರದಲ್ಲೇ 2024 ರ ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ವನ್ನು ಪ್ರಕಟಿಸಲಾಗುತ್ತದೆ (Soon 1st puc result release). ಹೌದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಕರ್ನಾಟಕ 1st PUC ಫಲಿತಾಂಶ 2024 ಅನ್ನು ಮಾರ್ಚ್ 30, 2024 ರಂದು ಪ್ರಕಟಿಸುತ್ತದೆ. 1st PUC ಫಲಿತಾಂಶ 2024 ಅನ್ನು ಅಧಿಕೃತ ವೆಬ್‌ಸೈಟ್(Official website) – karresults.nic.in/ ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮತ್ತು ಅದರ ಜೊತೆಗೆ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕರ್ನಾಟಕ 1st ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದೆ(And also 1st puc supplementry exam time table released now). ಕರ್ನಾಟಕ 1st ಪಿಯುಸಿ ಪೂರಕ ಪರೀಕ್ಷೆಯು (Supplementry exam) ಮೇ 20 ರಿಂದ ಮೇ 31, 2024 ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ https://kseab.karnataka.gov.in/ ಗೆ ಭೇಟಿ ನೀಡಿ ಟೈಮ್ ಟೇಬಲ್(time table) ಅನ್ನು ಡೌನ್ಲೋಡ್ (Download) ಮಾಡಿಕ್ಕೊಳ್ಳಬಹುದು. ಬನ್ನಿ ಹಾಗಾದರೆ ಇನ್ನೂ ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಪಿಯುಸಿ ಪೂರಕ ಪರೀಕ್ಷೆಯ ಟೈಮ್ ಟೇಬಲ್ ಬಿಡುಗಡೆ :

ಕರ್ನಾಟಕ ಬೋರ್ಡ್ (Karnataka Board) 1st ಪಿಯುಸಿ ಪರೀಕ್ಷೆಗಳನ್ನು 2024 ಫೆಬ್ರವರಿ 12 ರಿಂದ ಫೆಬ್ರವರಿ 27, 2024 ರವರೆಗೆ ನಡೆಸಿತು. ಮಂಡಳಿಯು ಈಗ 1 ನೇ ಪಿಯುಸಿ ಪೂರಕ ಪರೀಕ್ಷೆಯ ಟೈಮ್ ಟೇಬಲ್ (Supplementry exam time table) 2024 ಅನ್ನು ಬಿಡುಗಡೆ ಮಾಡಿದೆ. ಕರ್ನಾಟಕ 1 ನೇ ಪಿಯುಸಿ ಪೂರಕ ಪರೀಕ್ಷೆಯು ಮೇ 20 ರಿಂದ ಮೇ 31, 2024 ರವರೆಗೆ  ನಡೆಯಲಿದೆ. ಇನ್ನ ಕರ್ನಾಟಕ PUC 1 ನೇ ವರ್ಷದ ಫಲಿತಾಂಶ 2024 ಅನ್ನು ಡೌನ್‌ಲೋಡ್ ಮಾಡಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು(register number and date of birth) ನಮೂದಿಸಬೇಕಾಗುತ್ತದೆ.
ಜೊತೆಗೆ ಉಪನಿರ್ದೇಶಕರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಸುವ ಈ ಪರೀಕ್ಷೆಗೆ ಮಂಡಲಿಯು ಹಲವು ನಿರ್ದೇಶನಗಳನ್ನು ನೀಡಿದೆ.

ಪ್ರಮುಖ ದಿನಾಂಕಗಳು:

ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶ ದಿನಾಂಕ (1stpuc result date): 30-03-2024

ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಶುಲ್ಕ ಪಾವತಿಗೆ ಕೊನೆ ದಿನಾಂಕ (last date for supplementary exam payment): 20-04-2024

ಪ್ರಥಮ ಪಿಯುಸಿ ಪೂರಕ ಪರೀಕ್ಷೆ ದಿನಾಂಕಗಳು (supplementary exam dates): 20-05-2024 ರಿಂದ 31-05-2024 ರೊಳಗೆ.

ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ದಿನಾಂಕ(results date of supplementary exam) : 06-06-2024

Picsart 23 06 10 14 01 54 141

ಕರ್ನಾಟಕ 1 ನೇ ಪಿಯುಸಿ ಫಲಿತಾಂಶ 2024 ಅನ್ನು ಹೇಗೆ ಪರಿಶೀಲಿಸುವುದು?:

karresults.nic.in/ ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ(Official website) ಭೇಟಿ ನೀಡಿ
ಕರ್ನಾಟಕ 1 ನೇ ಪಿಯುಸಿ ಫಲಿತಾಂಶಗಳು 2024 ರ ಅಧಿಸೂಚನೆಯನ್ನು ಪರಿಶೀಲಿಸಿ
ನಿಮ್ಮ ನೋಂದಣಿ ಸಂಖ್ಯೆ (Register number) ಮತ್ತು ಜನ್ಮ ದಿನಾಂಕವನ್ನು(DOB) ಭರ್ತಿ ಮಾಡಿ
ನಿಮ್ಮ 1 ನೇ ಪಿಯುಸಿ ಫಲಿತಾಂಶ 2024 ಡೌನ್‌ಲೋಡ್ (Download)ಮಾಡಿ.

ಪ್ರಥಮ ಪಿಯುಸಿ ಪೂರಕ ಪರೀಕ್ಷೆಯ ವಿಷಯವಾರು ದಿನಾಂಕಗಳು:

ಕನ್ನಡ, ಅರೇಬಿಕ್ : 20-05-2024
ಇತಿಹಾಸ / ಭೌತಶಾಸ್ತ್ರ : 21-05-2024
ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ : 22-05-2024
ಇಂಗ್ಲಿಷ್ : 23-05-2024
ಗಣಿತ, ಶಿಕ್ಷಣಶಾಸ್ತ್ರ, ಭೂಗೋಳಶಾಸ್ತ್ರ, ಜೀವಶಾಸ್ತ್ರ : 24-05-2024
ಅರ್ಥಶಾಸ್ತ್ರ : 25-05-2024
ಭೂಗೋಳಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ, ಗೃಹ ವಿಜ್ಞಾನ : 27-05-2024
ಜೀವಶಾಸ್ತ್ರ, ಸಮಾಜಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ : 28-05-2024
ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ : 29-05-2024
ಹಿಂದಿ : 30-05-2024
ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್ : 31-05-2024
ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಬ್ಯೂಟಿಮೊಬೈಲ್, ಬ್ಯೂಟಿ ಅಂಡ್ ವೆಲ್‌ನೆಸ್‌ : 31-05-2024

ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶ ಅನುತ್ತೀರ್ಣ ಬಂದವರು ತಮ್ಮ ತಮ್ಮ ಕಾಲೇಜುಗಳ ಸೂಚನಾ ಫಲಕದಲ್ಲಿ ಪೂರಕ ಪರೀಕ್ಷೆಯ ವಿವರಗಳನ್ನು ತಿಳಿದುಕೊಂಡು, ಅದರ ಪ್ರಕಾರ ಶುಲ್ಕ ಪಾವತಿಸಬೇಕು. ಇದಕ್ಕೆ ಸರಿಯಾದ ಮಾಹಿತಿಗಳನ್ನು ನೀಡುವಂತೆ ಜಿಲ್ಲಾ ಉಪನಿರ್ದೇಶಕರುಗಳಿಗೆ ಮಂಡಲಿ ಸೂಚನೆಯನ್ನು ನೀಡಿದೆ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

Picsart 23 06 10 13 55 14 667

WhatsApp Group Join Now
Telegram Group Join Now

About

Editor | M.Sc CS

Leave a Reply

Your email address will not be published. Required fields are marked *